ವಿರಾಟ್ ಕೊಹ್ಲಿ ಫಿಟ್ನೆಸ್ ಗೆ ಕಾರಣ ಏನು ಗೊತ್ತಾ? ಅವರು ಕುಡಿಯುವ ನೀರಿನ ಪ್ರತಿ ಲೀಟರ್ ಬೆಲೆ ಕೇಳಿದ್ರೆ ನೀವು ಸುಸ್ತಾಗ್ತೀರಿ!

ಡಿಜಿಟಲ್ ಕನ್ನಡ ಟೀಮ್:

ಸದ್ಯ ವಿಶ್ವ ಕ್ರಿಕೆಟ್ ಕ್ಷೇತ್ರದಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಫಿಟ್ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ. ಅನೇಕ ಪಂಡಿತರು ವಿರಾಟ್ ಕೊಹ್ಲಿಯ ಫಿಟ್ನೆಸ್ ಅನ್ನು ಟೆನಿಸ್ ಆಟಗಾರ ನೊವಾಕ್ ಜೋಕೊವಿಚ್ ಫಿಟ್ನೆಸ್ ಗೂ ಹೋಲಿಕೆ ಮಾಡುವುದುಂಟು. ಹೀಗಾಗಿ ವಿರಾಟ್ ಕೊಹ್ಲಿ ಅವರ ಈ ಫಿಟ್ನೆಸ್ ಸೀಕ್ರೆಟ್ ಗಳೇನು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡುವುದು ಸಹಜ. ಅದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು, ಕೊಹ್ಲಿ ಕುಡಿಯುವ ನೀರು.

ಹೌದು ವಿರಾಟ್ ಕೊಹ್ಲಿ ತಮ್ಮ ದೈಹಿಕ ಫಿಟ್ನೆಸ್ ಕಾಯ್ದುಕೊಳ್ಳಲು ಸಾಕಷ್ಟು ವ್ಯಾಯಾಮ ಮಾಡುವುದರ ಜತೆಗೆ ಕಟ್ಟು ನಿಟ್ಟಿನ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕುಡಿಯುವ ನೀರಿನಲ್ಲೂ ಅವರು ತಮ್ಮದೇ ಆದ ಆಯ್ಕೆ ಹೊಂದಿದ್ದಾರೆ. ಕೊಹ್ಲಿ ಅವರು ಸಾಮಾನ್ಯ ನೀರನ್ನು ಕುಡಿಯದೇ, ಒಂದು ವಿದೇಶಿ ಮಿನರಲ್ ವಾಟರ್ ಬ್ರಾಂಡ್ ಅನ್ನು ಬಳಸುತ್ತಾರೆ. ಕೊಹ್ಲಿ ಅವರು ಕುಡಿಯುವ ಆ ನೀರಿನ ಬ್ರಾಂಡ್ ಯಾವುದು, ಅದರ ಬೆಲೆ ಎಷ್ಟು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…

ಕುಡಿಯುವ ಆ ಮಿನರಲ್ ವಾಟರ್ ಹೆಸರು ‘ಇವಿಯಾನ್’. ಇದು ಫ್ರಾನ್ಸ್ ದೇಶದ ಮಿನರಲ್ ನೀರಿನ ಕಂಪನಿ. ಕೊಹ್ಲಿ ಯಾವಾಗಲೂ ಈ ಕಂಪನಿಯ ನೀರನ್ನೇ ಹೆಚ್ಚಾಗಿ ಕುಡಿಯುತ್ತಾರೆ. ಅಲ್ಲದೆ ತಮ್ಮ ಜತೆ ಯಾವಾಗಲೂ ಈ ನೀರನ್ನು ಹೊಂದಿರುತ್ತಾರೆ ಎಂದು ಜೀನ್ಯೂಸ್ ವೆಬ್ ಸೈಟ್ ವರದಿ ಮಾಡಿದೆ. ಅಂದಹಾಗೆ ವಿರಾಟ್ ಕೊಹ್ಲಿ ಕುಡಿಯುವ ಈ ಇವಿಯಾನ್ ಮಿನರಲ್ ವಾಟರ್ ಮೊತ್ತ ಭಾರತದಲ್ಲಿ ಪ್ರತಿ ಲೀಟರ್ ಗೆ ₹ 600. ಕೇವಲ ಕೊಹ್ಲಿ ಮಾತ್ರವಲ್ಲ, ವಿಶ್ವ ಕ್ರೀಡಾರಂಗದ ಅನೇಕ ಖ್ಯಾತ ಕ್ರೀಡಾಪಟುಗಳು ಈ ನೀರನ್ನು ತಮ್ಮ ಡಯೆಟ್ ನ ಭಾಗವಾಗಿ ಹೊಂದಿದ್ದಾರೆ. ಪ್ರತಿ ಲೀಟರ್ ಗೆ ₹ 600 ರಿಂದ ₹ 36 ಸಾವಿರದ ವರೆಗಿನ ಮೊತ್ತದವರೆಗಿನ ನೀರು ದೊರೆಯುತ್ತದೆ.

ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದಾಗ ಅವರಿಗೆ ಇದ್ದ ಫಿಟ್ನೆಸ್ ಗೂ ಈಗಿನ ಫಿಟ್ನೆಸ್ ಮಟ್ಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೊಹ್ಲಿ ತಮ್ಮ ಫಿಟ್ನೆಸ್ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದರ ಬಗ್ಗೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಈ ಹಿಂದೆ ಹೇಳಿದ ಮಾತು ಹೀಗಿತ್ತು…

‘ವಿರಾಟ್ ಕೊಹ್ಲಿ ಅವರು ಟೆಸ್ಟ್ ಪಂದ್ಯದಲ್ಲಿ ಸುದೀರ್ಘ 5-6 ತಾಸುಗಳು ಬ್ಯಾಟಿಂಗ್ ಮಾಡಿ 150ಕ್ಕೂ ಹೆಚ್ಚು ರನ್ ಹೊಡೆದು ಔಟಾಗಿ ಪೆವಿಲಿಯನ್ ಗೆ ಬಂದರೆ, ಅವರು ನೇರವಾಗಿ ತಮ್ಮ ಟ್ರೈನರ್ ಜತೆ ಜಿಮ್ ನಲ್ಲಿ ವರ್ಕೌಟ್ ಆರಂಭಿಸುತ್ತಾರೆ. ಬ್ಯಾಟಿಂಗ್ ಮಾಡಿ ದಣಿವಾಗಿದ್ದರೂ, ಜಿಮ್ ನಲ್ಲಿ ವರ್ಕೌಟ್ ಮಾಡಿ ತಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಲುವತ್ತ ಗಮನಹರಿಸುತ್ತಾರೆ.’

Leave a Reply