ಲೋಕಪಾಲ್ ಮಸೂದೆ ಜಾರಿ ವಿಳಂಬ ಬೇಡ: ಕೇಂದ್ರಕ್ಕೆ ಸುಪ್ರೀಂ ಸಲಹೆ

ಡಿಜಿಟಲ್ ಕನ್ನಡ ಟೀಮ್:

ದೇಶದ ಅತ್ಯುತ್ತಮ ಮಸೂದೆ ಎಂಬ ಖ್ಯಾತಿ ಪಡೆದಿರುವ ಲೋಕಪಾಲ್ ಬಿಲ್ ಅನ್ನು ಆದಷ್ಟು ಬೇಗ ಜಾರಿಗೆ ತನ್ನಿ. ಇಂತಹ ಮಹತ್ವದ ಮಸೂದೆ ಜಾರಿಗೆ ತರಲು ವಿಳಂಬ ಮಾಡುವುದು ಸರಿಯಲ್ಲ… ಇದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಿರುವ ಕಿವಿಮಾತು.

ಈ ಮಸೂದೆ ವಿಷಯವಾಗಿ ಕಾಮನ್ ಕಾಸ್ ಅಂಡ್ ಅದರ್ಸ್ ಎಂಬ ಸರ್ಕಾರೇತರ ಸಂಸ್ಥೆಯ ಅರ್ಜಿ ವಿಚಾರಣೆಯನ್ನು ಶುಕ್ರವಾರ ನಡೆಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯಪೀಠ, ‘ಈ ಮಸೂದೆಯನ್ನು ಜಾರಿಗೆ ತರಲು ಯಾವುದೇ ಅಡೆತಡೆಗಳಿಲ್ಲ. ಅಲ್ಲದೆ ಈ ಮಸೂದೆ ವಿಷಯವಾಗಿ ಯಾವುದೇ ರೀತಿಯ ಕಾನೂನು ನಿಬಂಧನೆಗಳನ್ನು ಹೇರಬೇಡಿ. 2013ರ ಲೋಕಪಾಲ್ ಹಾಗೂ ಲೋಕಾಯುಕ್ತ ಮಸೂದೆ ಹಾಗೂ ಸಂಸದೀಯ ಸಮಿತಿಯ ಅಭಿಪ್ರಾಯಗಳು ಈ ಕಾಯ್ದೆ ಜಾರಿಗೊಳಿಸಲು ಯಾವುದೇ ಕಾನೂನಿನ ಸಮಸ್ಯೆ ಎದುರಿಸಬಾರು ಎಂಬ ಉದ್ದೇಶವನ್ನೇ ಹೊಂದಿವೆ. ಹೀಗಾಗಿ ಈ ಮಸೂದೆಯನ್ನು ಪ್ರಸ್ತುತ ಸ್ವರೂಪದಲ್ಲೇ ಜಾರಿಗೊಳಿಸಿ. ಈ ವಿಚಾರದಲ್ಲಿ ನ್ಯಾಯಮೂರ್ತಿ ಕೃಷ್ಣ ಐಯರ್ ಅವರ ಹೇಳಿಕೆಯನ್ನು ನೆನಪಿಸಲು ಇಚ್ಛಿಸುತ್ತೇನೆ. 1978ರ ವಿಶೇಷ ನ್ಯಾಯಾಲಯ ಮಸೂದೆ ಮತ್ತು ಈ ಮಸೂದೆಯನ್ನು ಪ್ರಸ್ತುತ ಸ್ಥಿತಿಯಲ್ಲಿ ಜಾರಿ ಮಾಡುವ ಅಗತ್ಯವಿದೆ. ಈ ಮಸೂದೆ ಜಾರಿಯನ್ನು ವಿಳಂಬ ಮಾಡುವುದಕ್ಕೆ ಯಾವುದೇ ಸಮರ್ಥನೆಗಳು ಸೂಕ್ತವಲ್ಲ. ಅಷ್ಟೇ ಅಲ್ಲದೆ, ಈ ಮಸೂದೆಯಲ್ಲಿ ಯಾವುದೇ ತಿದ್ದುಪಡಿ ತರುವ ಅಗತ್ಯವೂ ಇಲ್ಲ.’ ಎಂದಿದೆ.

Leave a Reply