ಮೋದಿ ಸಾವಿಗೆ ಉತ್ಸುಕಳಾಗಿದ್ದೇನೆ ಎಂದಿದ್ದ ಪತ್ರಕರ್ತೆಯ ಪುಸ್ತಕ ಬಿಡುಗಡೆ ಮಾಡಿ ಸುದ್ದಿಯಾದ್ರು ಕೇಂದ್ರ ಸಚಿವ ಅರುಣ್ ಜೇಟ್ಲಿ!

ಡಿಜಿಟಲ್ ಕನ್ನಡ ಟೀಮ್:

ಮೋದಿ ಅವರ ಸಾವಿನ ವಿಚಾರವಾಗಿ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದ ಪತ್ರಕರ್ತೆ ಸುನೇತ್ರಾ ಚೌಧರಿ ಅವರ ‘ಬಿಹೈಂಡ್ ಬಾರ್ಸ್’ ಎಂಬ ಹೊಸ ಪುಸ್ತಕವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಿಡುಗಡೆS ಮಾಡಿರುವುದು ಟ್ವಿಟರ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಕಾರಣ ಏನಂದ್ರೆ,

ನರೇಂದ್ರ ಮೋದಿ 2009ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಹಕ್ಕಿ ಜ್ವರಕ್ಕೆ ತುತ್ತಾಗಿದ್ದರು. ರಷ್ಯಾ ಪ್ರವಾಸ ಮುಗಿಸಿ ವಾಪಸ್ಸಾದ ಬಳಿಕ ಮೋದಿ ಅವರ ಆರೋಗ್ಯ ಕೆಟ್ಟಿತ್ತು. ನಂತರ ಅವರಿಗೆ ಹಕ್ಕಿ ಜ್ವರ ಇರುವುದನ್ನು ವೈದ್ಯಕೀಯ ಪರೀಕ್ಷೆಗಳು ಧೃಡಪಡಿಸಿದ್ದವು. ಆಗಿನ ಸಂದರ್ಭದಲ್ಲಿ ಹಕ್ಕಿ ಜ್ವರಕ್ಕೆ ಸರಿಯಾದ ಔಷಧ ಲಭ್ಯವಿಲ್ಲದೆ ಸಾಕಷ್ಟು ಜನರನ್ನು ಬಲಿಯಾಗಿದ್ದರು. ಹೀಗಾಗಿ ಮೋದಿ ಅವರಿಗೆ ಹಕ್ಕಿಜ್ವರವಿರುವ ಸುದ್ದಿ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಅತಂಕ ಮೂಡಸಿತ್ತು. ಇಂತಹ ಸಂದರ್ಭದಲ್ಲಿ ಸುನೇತ್ರಾ ಚೌಧರಿ ‘ಮೋದಿ ಅವರಿಗೆ ಹಕ್ಕಿ ಜ್ವರ ಬಂದಿದೆ. ಈ ವಿಷಯ ಕೇಳಿ ನಾನು ಉಲ್ಲಾಸಿತಳಾಗಿದ್ದೇನೆ’ ಎಂದು ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದರು. ಅವರ ಟ್ವೀಟ್ ಹೀಗಿದೆ…

ಈ ಟ್ವೀಟ್ ಮೂಲಕ ಸುನೇತ್ರಾ ಚೌಧರಿ ಅವರು ಪರೋಕ್ಷವಾಗಿ ನರೇಂದ್ರ ಮೋದಿ ಅವರ ಸಾವನ್ನು ಬಯಸುತ್ತಿದ್ದಾರೆ ಎಂದು ಬಲಪಂಥಿಯರು ಸಿಟ್ಟಾಗಿದ್ದರು. ನಂತರ ಈ ಟ್ವೀಟ್ ಬಗ್ಗೆ ಸಾಕಷ್ಟು ವಿವಾದ ಸೃಷ್ಟಿಯಾದರೂ ಸುನೇತ್ರಾ ಅವರು ಆ ಟ್ವೀಟ್ ಅನ್ನು ತೆಗೆದು ಹಾಕುವುದಾಗಲಿ ಅಥವಾ ಅದಕ್ಕೆ ಯಾವುದೇ ಸ್ಪಷ್ಟನೆಯನ್ನಾಗಲಿ ನೀಡಿರಲಿಲ್ಲ.

ಸುನೇತ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರ ಸಾವಿನ ಬಗ್ಗೆ ವಿವಾದ ಮಾಡಿದ್ದರೂ ಮೊನ್ನೆ ಮೊನ್ನೆಯಷ್ಟೇ ಬಿಜೆಪಿಯ ಹಿರಿಯ ನಾಯಕ ಹಾಗೂ ಮೋದಿ ಅವರ ಸರ್ಕಾರದ ಸಂಪುಟದಲ್ಲಿ ಸಚಿವರಾಗಿರುವ ಅರುಣ್ ಜೇಟ್ಲಿ ಪುಸ್ತಕ ಬಿಡುಗಡೆ ಮಾಡಿರುವುದು ಸಹಜವಾಗಿಯೇ ಬಲಪಂಥಿಯರನ್ನು ಕೆರಳುವಂತೆ ಮಾಡಿದೆ.

ನಿಜ, ಅರುಣ್ ಜೇಟ್ಲಿ ಅವರು ಈ ವಿವಾದಗಳ ಹೊರತಾಗಿ ಕಾರ್ಯಕ್ರಮಕ್ಕೆ ಹೋಗಿ ಪುಸ್ತಕ ಬಿಡುಗಡೆ ಮಾಡುವ ಅವಕಾಶ, ಸ್ವಾತಂತ್ರ್ಯ ಹೊಂದಿದ್ದಾರೆ. ಆದರೆ, ಖ್ಯಾತನಾಮ ವ್ಯಕ್ತಿಗಳು ಜೈಲು ಸೇರಿದ್ದರ ಕುರಿತಾಗಿ ಬರೆದಿರುವ ಈ ಪುಸ್ತಕಕ್ಕೂ, ಆರ್ಥಿಕತೆಗೂ ಯಾವುದೇ ಸಂಬಂಧವಿಲ್ಲದಿದ್ದರೂ ಕೇಂದ್ರ ಹಣಕಾಸು ಸಚಿವಾಲಯದ ಟ್ವಿಟರ್ ಖಾತೆ ಮಾತ್ರ ಅರುಣ್ ಜೇಟ್ಲಿ ಅವರು ಈ ಪುಸ್ತಕ ಬಿಡುಗಡೆ ಮಾಡಿರುವುದನ್ನು ಟ್ವೀಟ್ ಮಾಡಿದೆ.

ಸರ್ಕಾರಿ ಇಲಾಖೆಯ ಸಾಮಾಜಿಕ ಜಾಲತಾಣ ವೇದಿಕೆ ಬಳಸಿಕೊಂಡು ಆ ಪುಸ್ತಕಕ್ಕೆ ಪ್ರಚಾರ ನೀಡಿರುವುದು ಬಲಪಂಥಿಯರ ಕೋಪ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

Leave a Reply