ಜಾಗತಿಕ ವಿಮಾನ ವಿನ್ಯಾಸ ಸ್ಪರ್ಧೆಯಲ್ಲಿ ಮಿಂಚಿದ ಪಿಇಎಸ್ ವಿವಿ ವಿದ್ಯಾರ್ಥಿಗಳು

ಡಿಜಿಟಲ್ ಕನ್ನಡ ಟೀಮ್:

ಡಿಬಿಎಫ್… ಡಿಸೈನ್, ಬಿಲ್ಡ್, ಫ್ಲೈ…

ಇದೊಂದು ಅಂತಾರಾಷ್ಟ್ರೀಯ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಸ್ಪರ್ಧೆ. ಏಪ್ರಿಲ್ 20ರಿಂದ 23ರವರೆಗೆ ಅಮೆರಿಕದ ಟುಸ್ಕಾನಿನಲ್ಲಿ ನಡೆಯಿತು.

ಹೆಮ್ಮೆಯ ಸಂಗತಿ ಎಂದರೆ ಇಂಥದೊಂದು ವಿಮಾನ ವಿನ್ಯಾಸ ಸ್ಪರ್ಧೆಯಲ್ಲಿ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡ ಭಾಗವಹಿಸಿ ಏಷ್ಯಕ್ಕೆ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಸ್ಟಾನ್ಫೋರ್ಡ್ ವಿವಿ, ಯುನಿವರ್ಸಿಟಿ ಆಫ್ ಗ್ಲಾಸ್ಗೊ ಮುಂತಾದ ವಿಶ್ವದ 140 ಪ್ರತಿಷ್ಠಿತ ವಿವಿಗಳು ಭಾಗವಹಿಸಿದ್ದ ಈ ವಿಮಾನ ವಿನ್ಯಾಸ ಸ್ಪರ್ಧೆಯಲ್ಲಿ ಜಾಗತಿಕವಾಗಿ 27ನೇ ಸ್ಥಾನ ಹಾಗೂ ಏಷ್ಯದಲ್ಲಿ ಮೂರನೇ ಸ್ಥಾನದ ಖ್ಯಾತಿ ಪಿಇಎಸ್ ವಿಶ್ವವಿದ್ಯಾಲಯದ ವಿಮಾನ ವಿನ್ಯಾಸ ಕ್ಲಬ್ ಆಗಿರುವ ಟೀಮ್ ಎಯೊಲಸ್ ಸಾಧನೆ.

Leave a Reply