ಕೆ ಜಿ ಎಫ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಲುಕ್ ಹೇಗಿದೆ?

ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ ಸಿನಿಮಾ ಕೆ.ಜಿ.ಎಫ್ . ಪ್ರತೀ  ಚಿತ್ರದಲ್ಲೂ ತನ್ನ ಅಭಿನಯ, ಸ್ಟೈಲಿಶ್ ಲುಕ್ ನಿಂದ ಪ್ರೇಕ್ಷಕರಿಗೆ  ಹುಚ್ಚು ಹಿಡಿಸುವ ಯಶ್ ತಮ್ಮ ಹೊಸ ಸಿನಿಮಾದಲ್ಲಿ ಭಾರೀ ಕಟ್ಟುಮಸ್ತಾಗಿ , ಖಡಕ್ಕಾಗಿ ಬರ್ತಿದ್ದಾರೆ ಅನ್ನೋದನ್ನ ಹೇಳ್ತಾ ಇದೆ ಕೆ.ಜಿ.ಎಫ್ ಚಿತ್ರೀಕರಣದ ಚಿತ್ರಗಳು. ಜೊತೆಗೆ ಅಲ್ಲಿರುವ ಗುಡಿಸಲುಗಳು  ,ಹರಿದ ಬಟ್ಟೆ ತೊಟ್ಟ  ಮಕ್ಕಳು ಎಲ್ಲವೂ ಹೊಸ ದೃಶ್ಯ ಸಮೀಕರಣಗಳನ್ನು ಸೃಷ್ಟಿಸಿವೆ.

ಕನ್ನಡ ಚಿತ್ರರಂಗ ಹಿಂದೆಂದೂ ಕಂಡರಿಯದ ರೀತಿಯಲ್ಲಿ ತೆರೆಯ ಮೇಲೆ ಅದ್ದೂರಿಯಾಗಿ ಬರಲಿದೆ ಕೆ.ಜಿ.ಎಫ್ . ಅಷ್ಟೇ ಅಲ್ಲ ಭಾರತೀಯ ಚಿತ್ರರಂಗ ಕೂಡ ಕೆ.ಜಿ.ಎಫ್ ಕಡೆ ನೋಡುವ ಹಾಗೆ  ಹಾಲಿವುಡ್ ರೇಂಜ್ ನಲ್ಲಿ ಅಂದ್ರೆ ತಾಂತ್ರಿಕವಾಗಿ  ಅದ್ಭುತವಾಗಿ ತರುವ ಸಕಲ ಸಿದ್ಧತೆಗಳು ನಡೆಯುತ್ತಿವೆ.

ಅಂದಹಾಗೆ ಹೊಂಬಾಳೆ ಫಿಲಂಸ್ ನ  ವಿಜಯ್ ಕಿರಗಂದೂರು ನಿರ್ಮಿಸಿ , ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡ್ತಾ ಇದ್ದಾರೆ.  ಕೆ.ಜಿ.ಎಫ್  ಚಿತ್ರ ಎಪ್ಪತ್ತರ ದಶಕದಲ್ಲಿ  ಕೆ.ಜಿ.ಎಫ್ ನಲ್ಲಿ ನಡೆದ ನೈಜ ಘಟನೆಯ ಕಥೆಯನ್ನು ಒಳಗೊಂಡಿದೆ. ಯಶ್ ಮಹತ್ವಾಕಾಂಕ್ಷಿ ಯುವಕನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

Leave a Reply