ಇನ್ಫೋಸಿಸ್ ನಿಂದ 10 ಸಾವಿರ ಅಮೆರಿಕನ್ನರಿಗೆ ಉದ್ಯೋಗ, ತನ್ನ ನಿರ್ಧಾರಕ್ಕೆ ಬೆನ್ನು ತಟ್ಟಿಕೊಳ್ತಿದ್ದಾರೆ ಟ್ರಂಪ್

ಡಿಜಿಟಲ್ ಕನ್ನಡ ಟೀಮ್:

ಮುಂದಿನ ಎರಡು ವರ್ಷ ಅವಧಿಯಲ್ಲಿ 10 ಸಾವಿರ ಅಮೆರಿಕನ್ನರಿಗೆ ಉದ್ಯೋಗ ನೀಡಲು ವಿಶ್ವದ ಖ್ಯಾತ ಐಟಿ ಕಂಪನಿ ಇನ್ಫೋಸಿಸ್ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು ತನ್ನ ರಾಜಕೀಯ ವಿಜಯ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ.

ನಿನ್ನೆಯಷ್ಟೇ ಇನ್ಫೋಸಿಸ್ ಸಂಸ್ಥೆ ಅಮೆರಿಕದ ನೂತನ ಹೆಚ್1-ಬಿ ವಿಸಾ ನೀತಿಯ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅಮೆರಿಕದ ವಿವಿಧ ವಿವಿಧ ಸ್ಥಳಗಳಲ್ಲಿರುವ ಇನ್ಫೋಸಿಸ್ ಕಂಪನಿಯಲ್ಲಿ ಅಮೆರಿಕನ್ನರಿಗೆ ಉದ್ಯೋಗ ನೀಡುವ ಬಗ್ಗೆ ನಿರ್ಧಾರ ಪ್ರಕಟಿಸಿತ್ತು. ಈ ನಿರ್ಧಾರವನ್ನು ಸ್ವಾಗತಿಸಿ ಶ್ವೇತಭವನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ‘ಅಮೆರಿಕನ್ನರಿಂದ ಉದ್ಯೋಗವನ್ನು ಕಸಿದುಕೊಳ್ಳುತ್ತಿದ್ದ ವ್ಯವಸ್ಥೆ ಅಂತ್ಯವಾಗುತ್ತಿದೆ. ಈಗ ಇನ್ಫೋಸಿಸ್ ನಂತಹ ಕಂಪನಿಗಳು ಅಮೆರಿಕನ್ನರಿಗೆ ಉದ್ಯೋಗ ನೀಡುವ ಬಗ್ಗೆ ಅವಕಾಶ ನೀಡಿರುವುದರಿಂದ ಅಮೆರಿಕದ ಆರ್ಥಿಕತೆ ಪ್ರಗತಿಗೆ ಉತ್ತಮ ಬೆಳವಣಿಗೆಯಾಗಿದೆ. ನಮ್ಮ ಆರ್ಥಿಕತೆಯ ಅಭಿವೃದ್ಧಿ ನಿರ್ಧಾರಕ್ಕೆ ಸಿಕ್ಕ ಜಯ ಇದಾಗಿದೆ’ ಎಂದು ತಿಳಿಸಲಾಗಿದೆ.

Leave a Reply