ಅಂತೂ ಜಾರಿಯಾದ ಮಲ್ಟಿಪ್ಲೆಕ್ಸ್ ಟಿಕೆಟ್ ದರ: ವಿಳಂಬಕ್ಕೆ ಕಾರಣವೇನೆಂಬುದರ ಹಿಂದೆ ಸ್ವಾರಸ್ಯದ ಕತೆಗಳು!

ಡಿಜಿಟಲ್ ಕನ್ನಡ ಟೀಮ್:

ಬಜೆಟ್ ನಲ್ಲಿ ಮಲ್ಟಿಪ್ಲೆಕ್ಸ್ ಗಳಿಗೆ ಮೂಗುದಾರ ಹಾಕುವ ಘೋಷಣೆ ಮಾಡಿ ಜಾರಿಗೆ ತರದೇ, ₹1050 ತೆತ್ತು ಬಾಹುಬಲಿ ನೋಡಿಕೊಂಡು ಬಂದಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಟೀಕೆಗಳ ಮಳೆ ಸುರಿದಿತ್ತು. ಅದರ ಬೆನ್ನಲ್ಲೇ ಮಂಗಳವಾರ ಬಜೆಟ್ ನಲ್ಲಿ ಆದೇಶಿಸಿದ್ದ ಗರಿಷ್ಠ ₹200 ದರ ನಿಗದಿಗೆ ಸಹಿ ಬಿದ್ದು ಆದೇಶವಾಗಿ ಮಾರ್ಪಟ್ಟಿದೆ.

ಟೀಕೆಯ ನಂತರವಷ್ಟೇ ಈ ಕ್ರಮ ಅನುಸರಿಸಬೇಕಾಯಿತೇ ಎಂಬುದು ಈಗಿನ ಪ್ರಶ್ನೆ. ಇಲ್ಲ… ಇಲ್ಲ, ಬಾಹುಬಲಿ ಆದಷ್ಟು ಬಾಚಿಕೊಳ್ಳಲಿ ಎಂದೇ ಬಿಟ್ಟಿದ್ದರು ಎಂಬುದು ಕೇಳಿಬರುತ್ತಿರುವ ಒಂದು ಕುಹಕ. ಆದರೆ ಮೂಲಗಳ ಕತೆ ಪ್ರಕಾರ, ಮುಖ್ಯಮಂತ್ರಿ ತಮ್ಮ ಬಜೆಟ್ ಘೋಷಣೆಯ ಆದೇಶಕ್ಕೆ ಸಹಿ ಹಾಕಬೇಕಿದ್ದಾಗ, ‘ಗೋಲ್ಡ್ ಕ್ಲಾಸ್’ಗೆ ಏನ್ ಮಾಡೋದು ಸಾರ್ ಎಂಬ ಪ್ರಶ್ನೆ ಬಂದಿದೆ. ‘ಏನ್ಲಾ ಅದು ಗೋಲ್ಡ್ ಕ್ಲಾಸ್. ವಿಚಾರ ಮಾಡಿ ಹೇಳಿ’ ಎನ್ನುವುದರೊಂದಿಗೆ ಅಲ್ಲಿಗೇ ನೆನೆಗುದಿಗೆ ಬಿದ್ದಿತ್ತು ಆದೇಶ.

ಇದೀಗ ಅತಿ ಸುಖಾಸೀನದ ಗೋಲ್ಡ್ ಕ್ಲಾಸ್ ಹೊರತುಪಡಿಸಿಯೇ ಮಲ್ಟಿಪ್ಲೆಕ್ಸ್ ಗಳಲ್ಲಿ ₹200ರ ಗರಿಷ್ಠ ದರ ನಿಗದಿಪಡಿಸಲಾಗಿದೆ. ಐ ಮ್ಯಾಕ್ಸ್ ಮತ್ತು 4ಡಿಎಕ್ಸ್ ಚಿತ್ರಮಂದಿರಗಳನ್ನು ಹೊರಗಿಡಲಾಗಿದೆ. ಅಂತೆಯೇ ಶೇ. 10ರಷ್ಟು ಸೀಟುಗಳಿಗೆ ಮಲ್ಟಿಪ್ಲೆಕ್ಸ್ ನವರು ಅವರದ್ದೇ ದರಗಳನ್ನು ವಿಧಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.

Leave a Reply