ಆಕೆ ಸ್ಫೋಟಕ್ಕೆ ಆಹುತಿಯಾಗುತ್ತಿದ್ದಾಗ ಕ್ಲಿಕ್ಕಿಸಿದ ಬಿಂಬ… ಜಗತ್ತನ್ನು ಕಲಕುತ್ತಿರುವ ಚಿತ್ರವಿದು

ಡಿಜಿಟಲ್ ಕನ್ನಡ ಟೀಮ್:

ನಾಲ್ಕು ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ನಡೆದ ಆಕಸ್ಮಿಕ ಬಾಂಬ್ ಸ್ಫೋಟದಲ್ಲಿ ಹಿಲ್ಡಾ ಕ್ಲೇಟನ್ ಎಂಬ ಯುದ್ಧ ಛಾಯಗ್ರಾಹಕಿಯೊಬ್ಬರು ಹತರಾಗಿದ್ದರು. ಈ ಸಂದರ್ಭದಲ್ಲಿ ಆಕೆ ಸೆರೆ ಹಿಡಿದಿದ್ದ ಅಂತಿಮ ಚಿತ್ರವನ್ನು ಅಮೆರಿಕ ತನ್ನ ಸೇನಾ ನಿಯತಕಾಲಿಕೆಯಲ್ಲಿ ಪ್ರಕಟಿಸಿದೆ.

2013ರಲ್ಲಿ ಅಫ್ಘಾನಿಸ್ತಾನದಲ್ಲಿ ಶಸ್ತ್ರಭ್ಯಾಸ ನಡೆಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಂಬ್ ಸ್ಫೋಟಗೊಂಡಿತ್ತು. ಈ ಅನಾಹುತದಲ್ಲಿ ನಾಲ್ವರು ಅಫ್ಘಾನಿಸ್ತಾನ ಸೈನಿಕರು ಸೇರಿದಂತೆ ಶಸ್ತ್ರಭ್ಯಾಸವನ್ನು ಸೆರೆ ಹಿಡಿಯುತ್ತಿದ್ದ ಹಿಲ್ಡಾ ಸಹ ಮೃತಪಟ್ಟಿದ್ದರು. ತಮ್ಮ ಸಾವಿನ ಕ್ಷಣದಲ್ಲಿ ಹೀಲ್ಡಾ ಅವರು ಅಫ್ಘಾನಿಸ್ತಾನದ ಸೈನಿಕ ಸ್ಫೋಟದ ಸಂದರ್ಭದಲ್ಲಿ ಹಾರುತ್ತಿರುವ ಚಿತ್ರವನ್ನು ಸೆರೆ ಹಿಡಿದಿದ್ದರು. ಈ ಚಿತ್ರವನ್ನು ಸೋಮವಾರವಷ್ಟೇ ಅಮೆರಿಕ ಪ್ರಕಟಿಸಿದೆ. ಜತೆಗೆ ‘ಯುದ್ಧ ಹಾಗೂ ಶಸ್ತ್ರಾಸ್ತ್ರ ತರಬೇತಿ ಸಂದರ್ಭದಲ್ಲಿ ಪುರುಷರಂತೆ ಮಹಿಳಾ ಸೈನಿಕರು ಸಹ ಎಂತಹ ಅಪಾಯಕಾರಿ ಪರಿಸ್ಥಿತಿಗಳನ್ನು ಎದುರಿಸುತ್ತಾರೆ ಎಂಬುದನ್ನು ಹಿಲ್ಡಾ ಕ್ಲೇಟನ್ ಅವರ ಸಾವು ಪ್ರತಿನಿಧಿಸುತ್ತದೆ’ ಎಂಬ ಬರಹದೊಂದಿಗೆ ಈ ಚಿತ್ರವನ್ನು ಪ್ರಕಟಿಸಿದೆ.

Leave a Reply