ಸಾರ್ಕ್ ಉಪಗ್ರಹ ಯಶಸ್ವಿ ಉಡಾವಣೆ, ಪಾಕ್ ಹೊರತಾಗಿ ಸಾರ್ಕ್ ಇತರೆ ರಾಷ್ಟ್ರಗಳಿಗೆ ಮೋದಿಯ ಉಡುಗೊರೆ

ಡಿಜಿಟಲ್ ಕನ್ನಡ ಟೀಮ್:

ದಕ್ಷಿಣ ಏಷ್ಯಾದ ನೆರೆಯ ರಾಷ್ಟ್ರಗಳಿಗೆ ಸಂವಹನ ಉಪಗ್ರಹವನ್ನು ಉಡುಗೊರೆಯಾಗಿ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಶುಕ್ರವಾರ ಸಂಜೆ 4.57ರ ಸುಮಾರಿಗೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಉಡಾವಣಾ ಕೇಂದ್ರದಲ್ಲಿ ಜಿಸ್ಯಾಟ್-9 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಯಿತು.

2014ರಲ್ಲಿ ಕಠ್ಮಂಡುವಿನಲ್ಲಿ ನಡೆದ ಸಾರ್ಕ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಉಪಗ್ರಹ ಉಡಾವಣೆಯ ಘೋಷಣೆ ಮಾಡಿದ್ದು, ಇದನ್ನು ‘ಗಿಫ್ಟ್ ಟು ಇಂಡಿಯಾಸ್ ನೈಬರ್ಸ್’ ಎಂದು ಬಣ್ಣಿಸಿದ್ದರು. ಈ ಉಪಗ್ರಹ ನಿರ್ಮಾಣಕ್ಕೆ ಒಟ್ಟು ₹ 235 ಕೋಟಿ ವೆಚ್ಚವಾಗಿದ್ದು, ಉಡಾವಣೆ ಸೇರಿದಂತೆ ಒಟ್ಟಾರೆ ₹ 450 ಕೋಟಿ ಖರ್ಚಾಗಿದೆ. ಈ ಉಪಗ್ರಹವನ್ನು ಸಾರ್ಕ್ ರಾಷ್ಟ್ರಗಳು ಬಳಸಿಕೊಂಡು ಸಂಪರ್ಕ ಸೌಲಭ್ಯ ಪಡೆಯಬಹುದಾಗಿದ್ದು, ಪಾಕಿಸ್ತಾನ ಈ ಯೋಜನೆಯಿಂದ ಹೊರಗುಳಿದಿದೆ. ಈ ಕುರಿತ ವಿವರವಾದ ವರದಿಯನ್ನು ಡಿಜಿಟಲ್ ಕನ್ನಡ ಈ ಹಿಂದೆಯೇ ಪ್ರಕಟಿಸಿತ್ತು.

Leave a Reply