ಜಮ್ಮು ಕಾಶ್ಮೀರದಲ್ಲಿ ವಿಧ್ವಂಸ ಸೃಷ್ಟಿಸುತ್ತಿರುವ ಪಾಕಿಸ್ತಾನ- ಸೌದಿಯ ಕೊಂಡಿ ನಿಮಗೆ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚಿನ ದಿನಗಳಲ್ಲಿ ಜಮ್ಮು ಕಾಶ್ಮೀರದ ಪರಿಸ್ಥಿತಿ ಹದಗೆಟ್ಟು ಶಾಂತಿ ಕದಡಿರುವುದರ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕಣಿವೆ ರಾಜ್ಯದಲ್ಲಿ ಈ ರೀತಿಯಾಗಿ ಗಲಭೆ ಸೃಷ್ಟಿಸಲು ಪಾಕಿಸ್ತಾನ ಹೇಗೆಲ್ಲಾ ಆಟ ಆಡುತ್ತಿದೆ ಎಂಬುದು ಗಂಭೀರವಾಗಿ ಗಮನಿಸಬೇಕಾದ ವಿಷಯ.

ಇತ್ತೀಚಿನ ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಯುವಕರನ್ನು ತಮ್ಮತ್ತ ಸೆಳೆದು ಭಾರತೀಯ ಸೈನಿಕರ ವಿರುದ್ಧ ಕಲ್ಲು ತೂರಾಟ ಮಾಡಲು ಛೂ ಬಿಟ್ಟಿದ್ದಾರೆ. ಇಲ್ಲಿನ ನಾಗರೀಕರು ಭಾರತೀಯ ಸೈನಿಕರ ಮೇಲೆ ಹೀಗೆ ವಿಷಕಾರುತ್ತಿರುವುದಾದರು ಏಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅದಕ್ಕೆ ಉತ್ತರ, ಜಮ್ಮು ಕಾಶ್ಮೀರದ ಕೇಬಲ್ ಆಪರೇಟರ್ ಗಳು. ಹೌದು, ಕಣಿವೆ ರಾಜ್ಯದಲ್ಲಿನ ಕೇಬಲ್ ಆಪರೇಟರ್ ಗಳು ಅಕ್ರಮವಾಗಿ ಪಾಕಿಸ್ತಾನ ಹಾಗೂ ಸೌದಿ ಅರೆಬಿಯಾದ ಸುದ್ದಿ ವಾಹಿನಿಗಳನ್ನು ಪ್ರಸಾರ ಮಾಡುತ್ತಿರುವುದು ಬೆಳಕಿಗೆ ಬಂದಿವೆ. ಈ ರಾಷ್ಟ್ರಗಳು ಸುದ್ದಿವಾಹಿನಿಗಳು ಕಣಿವೆ ರಾಜ್ಯದ ಜನರನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಪ್ರಯತ್ನದಲ್ಲಿ ನಿರತವಾಗಿದ್ದು, ಭಾರತದ ವಿರುದ್ಧ ದ್ವೇಷವನ್ನು ಬಿತ್ತುವ ಪ್ರಯತ್ನ ಮಾಡುತ್ತಿವೆ.

ಇತ್ತೀಚೆಗೆ ಭಾರತೀಯ ಸೇನೆ ಆರಂಭಿಸಿದ ತಪಾಸಣಾ ಕಾರ್ಯದಲ್ಲಿ ಈ ವಿಷಯ ಬೆಳಕಿಗೆ ಬಂದಿದ್ದು, ಇಂತಹ ಕೇಬಲ್ ಆಪರೇಟರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಪಾಕಿಸ್ತಾನ ಹಾಗೂ ಸೌದಿ ಅರೆಬಿಯಾದ ಸುದ್ದಿ ವಾಹಿನಿಗಳು ಅಕ್ರಮವಾಗಿ ಪ್ರಸಾರವಾಗುತ್ತಿರುವ ಬೆನ್ನಲ್ಲೇ ಇದರ ಹಿಂದೆ ಕೊಂಡಿಯಾಗಿರುವ ಮತ್ತೊಂದು ಸ್ವಾರಸ್ಯಕರ ಅಂಶ ಇದೆ. ಅದೇನೆಂದರೆ ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ರಾಹೀಲ್ ಶರೀಫ್. ಹೌದು, ಪಾಕ್ ಸೇನಾ ಮುಖ್ಯಸ್ಥ ಸ್ಥಾನದಿಂದ ನಿವೃತ್ತಿ ಪಡೆದ ನಂತರ ಶರೀಫ್ ಎಲ್ಲಿ ಹೋದರು? ಎಂಬ ಪ್ರಶ್ನೆಗೆ ನಮಗೆ ಸಿಗುವ ಉತ್ತರ, ಸೌದಿ ಅರೇಬಿಯಾ. ರಾಹೀಲ್ ಶರೀಫ್ ನಿವೃತ್ತಿ ಪಡೆಯುತ್ತಿದ್ದಂತೆ ಅವರನ್ನು ಸೌದಿ ಅರೆಬಿಯಾ ನೇತೃತ್ವದ 39 ಮುಸ್ಲಿಂ ರಾಷ್ಟ್ರಗಳ ಸಹಯೋಗದಲ್ಲಿ ರೂಪಿತವಾಗಿರುವ ಸೇನಾ ಪಡೆಗೆ ನೇಮಕ ಮಾಡಲಾಗಿದೆ. ರಾಹೀಲ್ ಶರೀಫ್ ಎಷ್ಟು ಪ್ರಭಾವಶಾಲಿ ಎಂದರೆ, ಈ ಸೇನಾ ಪಡೆಗೆ ನೇಮಕವಾಗುತ್ತಿದ್ದಂತೆ ತನಗೆ ಆಗದ ಸೌದಿ ಅರೆಬಿಯಾದ ಸೇನಾಧಿಕಾರಿಗಳನ್ನು ಪ್ರತಿಷ್ಠಿತ ಹುದ್ದೆಯಿಂದ ಕೆಳಗಿಳಿಸಿದ್ದಾರೆ. ಆ ಮೂಲಕ ಈ ಸೇನೆಯ ಮೇಲೆ ರಾಹೀಲ್ ಶರೀಫ್ ಮಹತ್ವದ ನಿಯಂತ್ರಣ ಸಾಧಿಸಿದ್ದಾರೆ. ಹೀಗಾಗಿ ರಾಹೀಲ್ ಶರೀಫ್ ಸೌದಿಯ ಸೇನಾ ಪಡೆಗೆ ನೇಮಕವಾಗಿರುವುದಕ್ಕೂ ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ರಮವಾಗಿ ಸುದ್ದಿ ವಾಹಿನಿಗಳ ಪ್ರಸಾರ ಮಾಡಿ ಭಾರತದ ವಿರುದ್ಧ ಜನರನ್ನು ಎತ್ತಿಕಟ್ಟಲು ನಡೆಸುತ್ತಿರುವ ಪ್ರಯತ್ನಕ್ಕೂ ನಂಟು ಇರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.

ಇನ್ನು ಪಾಕಿಸ್ತಾನದ ಪ್ರತ್ಯೇಕತಾವಾದಿಗಳಿಗೆ ಹಾಗೂ ಕಲ್ಲುತೂರಾಟಗಾರರ ಬೆನ್ನಿಗೆ ಪಾಕಿಸ್ತಾನ ನಿಂತಿದೆ ಎಂಬುದರ ಬಗ್ಗೆ ಈ ಹಿಂದೆಯೇ ಭಾರತ ಸಾಕಷ್ಟು ಬಾರಿ ಬಹಿರಂಗವಾಗಿ ಹೇಳಿದೆ. ಈಗ ಅದಕ್ಕೆ ಸಾಕ್ಷಿಯೂ ಸಿಕ್ಕಿದೆ. ಅದೇನೆಂದರೆ, ಹುರಿಯತ್ ನಾಯಕರಿಗೆ ಹಾಗೂ ಕಲ್ಲುತೂರಾಟಗಾರರಿಗೆ ಆರ್ಥಿಕ ಸಹಾಯ ನೀಡುತ್ತಿರುವುದೇ ಪಾಕಿಸ್ತಾನ. ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯಿಂದಲೇ ಹುರಿಯತ್ ನಾಯಕರಿಗೆ ಹಣ ಪೂರೈಕೆಯಾಗುತ್ತಿರುವುದು ಈಗ ದಾಖಲೆಗಳ ಸಮೇತ ಬೆಳಕಿಗೆ ಬಂದಿದೆ.

ಪಾಕಿಸ್ತಾನ ತನ್ನ ಗುಪ್ತಚರ ಸಂಸ್ಥೆ  ಐಎಸ್ಐ ಮೂಲಕ ಶ್ರೀನಗರದಲ್ಲಿರುವ ಹುರಿಯತ್ ನಾಯಕರಿಗೆ ಹಣ ರವಾನೆ ಮಾಡಿದೆ. ಅಲ್ಲದೆ ರಾಯಭಾರಿ ಕಚೇರಿ ಮೂಲಕ ಕುಪ್ವಾರ, ಅನಂತನಾಗ್ ಹಾಗೂ ಪುಲ್ವಾಮ ಗೆ ಹಣ ಕಳುಹಿಸಲಾಗಿದೆ. ಟೈಮ್ಸ್ ನೌ ಸುದ್ದಿ ವಾಹಿನಿಗೆ ಸಿಕ್ಕಿರುವ ದಾಖಲೆಗಳ ಪ್ರಕಾರ ರಾವಲ್ಪಿಂಡಿಯಲ್ಲಿರುವ ಐಎಸ್ಐ ಮುಖ್ಯಕಚೇರಿಯಿಂದ ಐಎಸ್ಐ ಸದಸ್ಯ ಅಹ್ಮದ್ ಸಗರ್ ಗೆ ₹ 70 ಲಕ್ಷ ಹಣ ಸಂದಾಯವಾಗಿದ್ದು, ಆತ ಆ ಹಣವನ್ನು ಶ್ರೀನಗರದಲ್ಲಿರುವ ಹುರಿಯತ್ ನಾಯಕ ಶಬ್ಬೀರ್ ಶಾಗೆ ರವಾನಿಸಿದ್ದಾನೆ. ಶಬ್ಬೀರ್ ಈ ಹಣವನ್ನು ಕಾಶ್ಮೀರದಲ್ಲಿ ಯೋಧರ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಹಂಚಿರುವುದು ಸ್ಪಷ್ಟವಾಗಿದೆ. ಇನ್ನು ಇತ್ತೀಚೆಗೆ ಬಂಧನವಾದ ಐಎಸ್ಐ ಎಜೆಂಟ್ ನೀಡಿರುವ ಮಾಹಿತಿ ಪ್ರಕಾರ ಅವರು ಭಾರತದ ರಾಯಭಾರಿ ಕಚೇರಿಯಲ್ಲಿರುವ ಪಾಕಿಸ್ತಾನ ಅಧಿಕಾರಿ ಅಬ್ದುಲ್ ಬಸಿತ್ ಅವರಿಂದ ನಿರಂತರವಾಗಿ ಹಣ ಪೂರೈಕೆಯಾಗುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗೆ ಕುತಂತ್ರಿ ಪಾಕಿಸ್ತಾನ ಅಡ್ಡ ದಾರಿಯ ಮೂಲಕ ಜಮ್ಮು ಕಾಶ್ಮೀರದಲ್ಲಿ ಆಟವಾಡುತ್ತಿರುವುದು ಈಗ ಸಾಕ್ಷಿ ಸಮೇತ ಬಯಲಾಗಿದೆ.

1 COMMENT

  1. Bomb Saudi Arabia to ashes. Only one nuclear bomb could resolve more than 3/4th of the world’s problems and that first ever nuke bomb must be dropped on Saudi. It’s the one scoundrel state that is creating havoc Islamic insurgency, brainwashing all innocent, educated and dumb Muslims, destroying culture of other nations from back door (India, Indonesia, Malaysia, etc are scapegoats of Saudi’s toxic wahabi funding).

Leave a Reply