ಮೈಥಿಕ್ ಸೊಸೈಟಿ ಗೌರವ ಅಧ್ಯಕ್ಷರಾದ ಎಂಕೆ.ಎಲ್.ಎನ್ ಶಾಸ್ತ್ರಿ ನಿಧನ

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರಿನ ಸುಪ್ರಸಿದ್ಧ ‘ದಿ ಮೈಥಿಕ್ ಸೊಸೈಟಿ’ಯ ಗೌರವ ಅಧ್ಯಕ್ಷರಾದ ಡಾ.ಎಂಕೆ.ಎಲ್.ಎನ್ ಶಾಸ್ತ್ರಿ ಅವರು ಶನಿವಾರ ಬೆಳಗ್ಗೆ 6 ಗಂಟೆಗೆ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಅಧ್ಯಯ ಮಾಡಿರುವ ಡಾ.ಶಾಸ್ತ್ರಿಯವರು, ಖರಗ್ಪುರದ ಐಐಟಿ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದ್ದರು. ಬೆಂಗಳೂರಿನ ಸುಪ್ರಸಿದ್ಧ ಯುವಿಸಿಇಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿಯ ಸೇವೆಸಲ್ಲಿಸಿದ್ದರು.

ಸುಮಾರು 40 ವರ್ಷಗಳಿಗೂ ಹೆಚ್ಚು ಕಾಲ ದಿ ಮೈಥಿಕ್ ಸೊಸೈಟಿ ಜತೆ ನಿಕಟ ಸಂಬಂಧ ಹೊಂದಿದ್ದ ಶಾಸ್ತ್ರಿ ಅವರು, 30 ವರ್ಷಗಳ ಕಾಲ ಸಂಸ್ಥೆಯ ಕಾರ್ಯದರ್ಶಿಯಾಗಿ, ಕಳೆದ 12 ವರ್ಷಗಳಿಂದ ಅಧ್ಯಕ್ಷರಾಗಿದ್ದರು. ಸಂಸ್ಥೆಯ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಶಾಸ್ತ್ರಿ ಅವರು ಪತ್ನಿ, ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

Leave a Reply