ಎಸಿಬಿ ಬಲೆಗೆ ಬಿದ್ದವು ನಾಲ್ಕು ಕುಳಗಳು

ಡಿಜಿಟಲ್ ಕನ್ನಡ ಟೀಮ್:

ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಇಂದು ತಮ್ಮ ಕಾರ್ಯಾಚರಣೆ ಮಾಡುವ ಮೂಲಕ ನಾಲ್ವರು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿಕೊಂಡಿದ್ದಾರೆ.

ಬಿಬಿಎಂಪಿ ಪೂರ್ವವಲಯದ ಜಂಟಿ ಆಯುಕ್ತ ಡಾ.ಕೆ.ಸಿ.ಯತೀಶ್ ಕುಮಾರ್, ರಾಮನಗರ ತಹಶೀಲ್ದಾರ್ ಎನ್.ರಘುಮೂರ್ತಿ, ಕೆಪಿಟಿಸಿಎಲ್ ನಿರ್ದೇಶಕ ಎಚ್.ನಾಗೇಶ್ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಸೂಪರಿಂಡೆಂಟ್ ರಾಮಕೃಷ್ಣಾರೆಡ್ಡಿ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳಾಗಿದ್ದಾರೆ. ಎಸಿಬಿ ಅಧಿಕಾರಿಗಳು ಬುಧವಾರ ಬೆಳಗ್ಗೆಯೇ ಈ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ರಾಮಕೃಷ್ಣ ರೆಡ್ಡಿ ಮನೆಯಲ್ಲಿ ₹ 20 ಲಕ್ಷ ನಗದು ಮತ್ತು ಒಂದು ಬಿಎಂಡಬ್ಲ್ಯೂ ಕಾರು ಪತ್ತೆಯಾಗಿದೆ.

ಇನ್ನು ಎಚ್.ನಾಗೇಶ್ ಅವರ ಮನೆಯಲ್ಲಿ ₹ 90 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾದರೆ, ತಹಶೀಲ್ದಾರ್ ಎನ್.ರಘುಮೂರ್ತಿ ಅವರ ಮನೆಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ದಾಖಲೆಗಳು ಸಿಕ್ಕಿವೆ. ಅಲ್ಲದೆ ಒಂದು ಕೋಟಿ 35 ಲಕ್ಷ ರೂ. ಠೇವಣಿ ಇಟ್ಟಿರುವ ದಾಖಲೆಗಳು ಪತ್ತೆಯಾಗಿವೆ. ನಾಗರಬಾವಿಯಲ್ಲಿರುವ ಬಿಬಿಎಂಪಿ ಜಂಟಿ ಆಯುಕ್ತ ಡಾ.ಯತೀಶ್ ಕುಮಾರ್ ಅವರ 1.5 ಕೋಟಿ ರೂ.ಮೌಲ್ಯದ ಮನೆ, ಬಿಟಿಎಂ ಲೇಔಟ್‍ನಲ್ಲಿ ಒಂದುವರೆ ಕೋಟಿ ಮೌಲ್ಯದ ಫ್ಲಾಟ್, ಮೈಸೂರಿನಲ್ಲಿ ಎರಡು ಸೈಟ್, ₹ 4 ಲಕ್ಷ ನಗದು, 25 ಲಕ್ಷ ಮೌಲ್ಯದ ಚಿನ್ನಾಭರಣ, ಹೊಂಡಾ ಕ್ರಿಯೆಟಾ ಮತ್ತು ಪೈಟ್ ಕಾರುಗಳು ಸಿಕ್ಕಿವೆ. ಈ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a Reply