ಕ್ರಿಸ್ ಗೇಲ್ ಮನಗೆದ್ದ ಆಟೋ ಹಿಂದಿನ ಆ ಸಾಲು ಯಾವುದು?

ಡಿಜಿಟಲ್ ಕನ್ನಡ ಟೀಮ್:

ಪ್ರತಿನಿತ್ಯ ನಾವು ಬೆಂಗಳೂರಿನ ರಸ್ತೆಯಲ್ಲಿ ಓಡಾಡುವಾಗ ಅನೇಕ ಆಟೋಗಳ ಹಿಂದೆ ಬರೆದಿರುವ ಸಾಲುಗಳನ್ನು ಕುತೂಹಲದಿಂದ ಓದುತ್ತೇವೆ. ಇಂತಹ ಸಾಲುಗಳು ಕೆಲವೊಮ್ಮೆ ಹಾಸ್ಯವಾಗಿದ್ದರೆ, ಮತ್ತೆ ಕೆಲವೊಮ್ಮೆ ಸ್ಫೂರ್ತಿಯಾಗಿರುತ್ತವೆ. ಇಂತಹ ಒಂದು ಸಾಲು ಈಗ ವೆಸ್ಟ್ ಇಂಡೀಸ್ ಕ್ರಿಕೆಟ್ ನ ದೈತ್ಯ ಆಟಗಾರ ಕ್ರಿಸ್ ಗೇಲ್ ಅವರಿಗೂ ಇಷ್ಟವಾಗಿದೆ.

ಹೌದು, ಸುಮಾರು 7 ವರ್ಷಗಳಿಂದ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿರುವ ಕ್ರಿಸ್ ಗೇಲ್, ವರ್ಷಕ್ಕೆ ಕನಿಷ್ಟ 2 ತಿಂಗಳು ಬೆಂಗಳೂರಿನಲ್ಲೇ ಇರುತ್ತಾರೆ. ಈ ಏಳು ವರ್ಷಗಳ ಹಾದಿಯಲ್ಲಿ ಕ್ರಿಸ್ ಗೇಲ್ ಬೆಂಗಳೂರನ್ನು ಸಾಕಷ್ಟು ನೋಡಿದ್ದಾರೆ. ಹೀಗಾಗಿ ಅವರಿಗೆ ನಮ್ಮ ಆಟೋಗಳ ಹಿಂದಿರುವ ಬರಹ ಗಮನ ಸೆಳೆದಿದೆ. ಅಂದಹಾಗೆ ಕ್ರಿಸ್ ಗೇಲ್ ಅವರಿಗೆ ಇಷ್ಟವಾದ ಆಟೋ ಹಿಂದಿನ ಆ ಸಾಲು ಯಾವುದೆಂದರೆ, ‘ತಂದೆ ತಾಯಿಯ ಆಶಿರ್ವಾದ’.

ನಮ್ಮ ಅನೇಕ ಆಟೋ ಚಾಲಕರು ತಮ್ಮ ತಂದೆ ತಾಯಿಯ ಮೇಲಿನ ಪ್ರೀತಿ, ಗೌರವ ಹಾಗೂ ಅಭಿಮಾನಕ್ಕೆ ಈ ಸಾಲುಗಳನ್ನು ಬರೆಸಿಕೊಂಡಿದ್ದಾರೆ. ಈ ಸಾಲು ಕ್ರಿಸ್ ಗೇಲ್ ಅವರಿಗೆ ತುಂಬಾ ಇಷ್ಟವಾಗಿದೆ. ಅದು ಎಷ್ಟರ ಮಟ್ಟಿಗೆ ಅಂದರೆ, ಕ್ರಿಸ್ ಗೇಲ್ ಈ ಸಾಲನ್ನು ತಮ್ಮ ಬ್ಯಾಟ್ ಮೇಲೆ ಹಾಕಿಸಿಕೊಳ್ಳುವ ಆಸೆ ಹುಟ್ಟಿಸುವಷ್ಟು. ಈ ಬಗ್ಗೆ ಸ್ವತಃ ಕ್ರಿಸ್ ಗೇಲ್, ಮಿಸ್ಟರ್ ನ್ಯಾಗ್ಸ್ ಅವರ ಆರ್ ಸಿಬಿ ತಂಡದ ಇನ್ ಸೈಡರ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದು ಅದು ಹೇಗಿದೆ ಎಂಬುದನ್ನು ಮೇಲಿನ ವಿಡಿಯೋದಲ್ಲಿ ನೋಡಬಹುದು.

Leave a Reply