ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸ್ನೇಹಿತನಂತಿರುವ ಈ ಇಮಾಮನ ಗೂಂಡಾಗಿರಿಯ ಮಾತುಗಳನ್ನು ನೀವೇ ಕೇಳಿ…

ಡಿಜಿಟಲ್ ಕನ್ನಡ ಟೀಮ್:

ಈತನ ಹೆಸರು ಮೌಲಾನಾ ನುರೂರ್ ರೆಹಮಾನ್ ಬುಖಾರಿ. ಕೋಲ್ಕತಾದ ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ (ಧಾರ್ಮಿಕ ಮುಖ್ಯಸ್ಥ) ಆಗಿರುವ ಈತ ದ್ವೇಷದ ಮಾತುಗಳಿಗೇ ಹೆಚ್ಚು ಹೆಸರುವಾಸಿ. ಈತ ಮತ್ತೆ ಸುದ್ದಿಯಾಗಿರುವುದು ಮತ್ತದೇ ದರ್ಪದ ಹೇಳಿಕೆಯಿಂದ.

ಸಾಂವಿಧಾನಿಕವಾಗಿ ಯಾವುದೇ ಹುದ್ದೆ ಇಲ್ಲದಿದ್ದರೂ ಈತನಿಗೆ ಓಡಾಡಲು ಕೆಂಪು ಗೂಟದ ಕಾರು ಬೇಕೆ ಬೇಕು. ಕೇಂದ್ರ ಸರ್ಕಾರ ಮೇ 1 ರಿಂದ ವಿಐಪಿ ಸಂಸ್ಕೃತಿ ನಿರ್ಮೂಲನೆ ಮಾಡಲು ವಿಐಪಿಗಳ ಕಾರಿನ ಮೇಲಿರುವ ಕೆಂಪು ದೀಪ ತೆಗೆದು ಹಾಕುವ ನಿಯಮ ಜಾರಿಗೆ ತಂದಿದೆ. ಆದರೆ, ಈ ಇಮಾಮ್ ಬುಖಾರಿ ಮಾತ್ರ ದೇಶದ ಜನರಿಗೆ ಒಂದು ಕಾನೂನಾದರೆ, ತನಗೆ ಒಂದು ಕಾನೂನು ಎಂಬ ಮಟ್ಟಿಗೆ ದರ್ಪ ತೋರಿ, ಕೆಂಪು ದೀಪದ ಕಾರನ್ನೇ ಬಳಸುತ್ತಿದ್ದಾನೆ. ಆ ಮೂಲಕ ಕೇಂದ್ರ ಸರ್ಕಾರದ ನಿರ್ಧಾರವನ್ನು ಧಿಕ್ಕರಿಸಿದ್ದಾನೆ.

ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಈತ ನೀಡಿದ ಪ್ರತಿಕ್ರಿಯೆ ಹೀಗಿದೆ…

‘ಶಾಹಿ ಇಮಾಮರಿಗೆ ಬ್ರಿಟೀಷರ ಕಾಲದಿಂದಲೂ ಈ ಗೌರವ ಸಿಗುತ್ತಿದೆ. ಹೀಗಾಗಿ ನಾನು ಕೆಂಪು ದೀಪದ ಕಾರನ್ನು ಬಳಸುತ್ತಿದ್ದು, ಮುಂದಿನ ದಿನಗಳಲ್ಲೂ ಬಳಸುತ್ತೇನೆ. ಶಾಹಿ ಇಮಾಮರಿಗೆ ಹೋಲಿಕೆ ಮಾಡಿದರೆ ದೇಶದ ಮಂತ್ರಿಗಳು ಕೆಳ ಮಟ್ಟದಲ್ಲಿ ನಿಲ್ಲುತ್ತಾರೆ. ಹೀಗಾಗಿ ಮಂತ್ರಿಗಳು ತಮ್ಮ ಕಾರಿನಿಂದ ಕೆಂಪು ದೀಪ ತೆಗೆದ ಮಾತ್ರಕ್ಕೆ ನಾನು ತೆಗೆಯುವುದಿಲ್ಲ. ನಾನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ನಿರಂತರ ಸಂಪರ್ಕದಲ್ಲಿರುತ್ತೇನೆ. ನನ್ನನ್ನು ಭೇಟಿಯಾಗಲು ಪ್ರಧಾನಿ ಮೋದಿ ಅವರು ಆಹ್ವಾನ ನೀಡಿದರೂ ನಾನು ಅವರನ್ನು ಭೇಟಿ ಮಾಡುವುದಿಲ್ಲ. ಮೋದಿ ನಿಮಗೆ ಪ್ರಧಾನಿಯಾಗಿರಬಹುದು ಆದರೆ ನನಗೆ ಅಲ್ಲ. ಇದು ಪಶ್ಚಿಮ ಬಂಗಾಳ ಇಲ್ಲಿ ಬೇರೆಯದೇ ಕಾನೂನು ನಡೆಯುತ್ತದೆ.’

ಕೇವಲ ಮೋದಿ ಮಾತ್ರವಲ್ಲದೇ ಬಿಜೆಪಿ ಹಾಗೂ ಆರ್ ಎಸ್ ಎಸ್ ವಿರುದ್ಧ ಕೂಡ ಈತ ದ್ವೇಷ ಕಾರುತ್ತಾನೆ. ಹೀಗಾಗಿ ಯಾವುದೇ ಮುಸಲ್ಮಾನ ಬಿಜೆಪಿ ಹಾಗೂ ಆರ್ ಎಸ್ ಎಸ್ ಗೆ ಬೆಂಬಲಿಸಿದರೆ ಆತನನ್ನು ಹೊಡೆದುಹಾಕಬೇಕು ಎಂದು ಕರೆ ಕೊಟ್ಟಿದ್ದಾನೆ.

‘ಯಾವುದೇ ಮುಸಲ್ಮಾನ ಆರ್ ಎಸ್ ಎಸ್ ಅಥವಾ ಬಿಜೆಪಿಯನ್ನು ಸೇರಬಾರದು. ಜತೆಗೆ ಇವುಗಳ ಪರವಾಗಿ ಕೆಲಸವನ್ನು ಮಾಡಬಾರದು. ಒಂದುವೇಳೆ ಮಾಡಿದರೆ ಅಂತಹವರನ್ನು ಚೆನ್ನಾಗಿ ಹೊಡೆದು ಧರ್ಮದಿಂದ ಹೊರಹಾಕುವ ಮೂಲಕ ಶಿಕ್ಷೆ ನೀಡಬೇಕು. ಮುಸಲ್ಮಾನರು ಬಿಜೆಪಿ ಹಾಗೂ ಆರ್ ಎಸ್ ಎಸ್ ಹೊರತು ಪಡಿಸಿ ಉಳಿದ ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಬಹುದು. ಬಿಜೆಪಿ ಹಾಗೂ ಆರ್ ಎಸ್ ಎಸ್ ಜತೆಯಾಗಿ ಇರುವುದರಿಂದ ಯಾವುದೇ ಮುಸಲ್ಮಾನ ಇವುಗಳ ಪರ ಕೆಲಸ ಮಾಡುವಂತಿಲ್ಲ. ಬಿಜೆಪಿಯು ಆರ್ ಎಸ್ ಎಸ್ ನಿಂದ ದೂರವಾದರೆ ಮಾತ್ರ ಮುಸಲ್ಮಾನರು ಬಿಜೆಪಿ ಪರ ಕೆಲಸ ಮಾಡಬಹುದು. ಮಸೀದಿ ಹೊರಗೆ ಯಾರಾದರು ಜೈ ಶ್ರೀರಾಮ್ ಎಂದು ಜಪಿಸಿದರೆ ಅಂತಹವರನ್ನು ನಪುಂಸಕರು ಎಂದು ಪರಿಗಣಿಸಲಾಗುವುದು. ಇಂತಹವರನ್ನು ಮುಸಲ್ಮಾನರು ಎಲ್ಲಿಯವರೆಗೂ ಮೌನ ವಹಿಸಿ ಸಹಿಸಿಕೊಂಡಿರುತ್ತಾರೊ ನನಗೆ ತಿಳಿದಿಲ್ಲ.’

ಮೋದಿಯ ವಿರುದ್ಧ ಈ ಇಮಾಮ್ ಇದೇ ಮೊದಲ ಬಾರಿಗೆ ಕಿಡಿಕಾರಿಲ್ಲ. ಕಳೆದ ವರ್ಷ ಮೋದಿ ವಿರುದ್ಧ ಫಾತ್ವಾ (ಧಾರ್ಮಿಕ ಆದೇಶ) ಹೊರಡಿಸಿ, ‘ಮೋದಿಯ ಗಡ್ಡ ಹಾಗೂ ತಲೆ ಕೂದಲನ್ನು ಬೋಳಿಸಿದವರಿಗೆ ನಗದು ಬಹುಮಾನ ನೀಡಲಾಗುವುದು’ ಎಂಬ ಘೋಷಣೆ ಮಾಡಿದ್ದ.

ಹೀಗೆ ತಮ್ಮ ದ್ವೇಷದ ಮಾತುಗಳಿಂದಲೇ ಸುದ್ದಿಯಾಗುತ್ತಿರುವ ಇಮಾಮ್, ಇಷ್ಟೆಲ್ಲಾ ಮಾತನಾಡಿದರೂ ಕೇಂದ್ರ ಸರ್ಕಾರದ ನಿರ್ಧಾರವನ್ನು ಉಲ್ಲಂಘಿಸಿದರು ಈತನನ್ನು ಕೇಳುವವರಿಲ್ಲದಂತಾಗಿದೆ. ಧರ್ಮಗುರು ಎಂದು ಹೇಳಿಕೊಂಡು ಪದೇ ಪದೇ ಧರ್ಮಗಳ ನಡುವೆ ದ್ವೇಷ ಬಿತ್ತುತ್ತಿರುವ ಈತನ ವಿರುದ್ಧ ಪಶ್ಚಿಮ ಬಂಗಾಳದ ಸರ್ಕಾರ ದಿವ್ಯ ಮೌನ ವಹಿಸಿದೆ.

Leave a Reply