33 ವರ್ಷಗಳ ಹಿಂದೆ ಐರ್ಲೆಂಡ್ ನಲ್ಲಿ ಕಣ್ಮರೆಯಾಗಿದ್ದ ಬೀಚ್ ರಾತ್ರೋರಾತ್ರಿ ಪ್ರತ್ಯಕ್ಷ ಆಗಿದ್ದು ಹೇಗೆ?

ಡಿಜಿಟಲ್ ಕನ್ನಡ ಟೀಮ್:

ಸುಮಾರು 33 ವರ್ಷಗಳ ಹಿಂದೆ, ಅಂದರೆ 1984ರಲ್ಲಿ ಐರ್ಲೆಂಡ್ ನ ಕೌಂಟಿ ಮಾಯೊ ಕೋಸ್ಟಾದ ಅಚಿಲ್ ಐಲ್ಯಾಂಡ್ ನಲ್ಲಿ ಬೀಸಿದ್ದ ಬಿರುಗಾಳಿಗೆ ಇಲ್ಲಿನ ಸಮುದ್ರ ತೀರದ ಮರಳುಗಳು ಕಣ್ಮರೆಯಾಗಿದ್ದವು. ಆದರೆ ಈಗ ರಾತ್ರೋರಾತ್ರಿ ಈ ತೀರದಲ್ಲಿ ಮರಳುಗಳು ಕಾಣಿಸಿಕೊಂಡಿದ್ದು, ಬೀಚ್ ಮರುಸೃಷ್ಟಿಯಾಗಿದೆ.

ಕಳೆದ 33 ವರ್ಷಗಳಿಂದ ಇಲ್ಲಿನ ಸಮುದ್ರ ತೀರದಲ್ಲಿ ಮರಳು ಇಲ್ಲದೆ ಕೇವಲ ಬಂಡೆಗಳು ಮಾತ್ರ ಕಾಣುತ್ತಿದ್ದವು. ಆದರೆ ಈಗ 300 ಮೀಟರ್ ಉದ್ದದಷ್ಟು ತೀರದಲ್ಲಿ ಟನ್ ಗಟ್ಟಲೆ ಮರಳು ತುಂಬಿಕೊಂಡಿದೆ. ಇಲ್ಲಿ ಮತ್ತೆ ಬೀಚ್ ಸೃಷ್ಟಿಯಾಗಿರುವುದರಿಂದ ಸ್ಥಳೀಯರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಅಚಿಲ್ ಪ್ರವಾಸೋದ್ಯಮದ ನಿರ್ದೇಶಕ ಸೀನ್ ಮೊಲಿ ಹೇಳುವುದಿಷ್ಟು… ‘ಈ ಸಮುದ್ರ ತೀರದಲ್ಲಿ ಮತ್ತೆ ಬೀಚ್ ನಿರ್ಮಾಣವಾಗಿರುವುದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. 1984ರಲ್ಲಿ ಬೀಸಿದ ಚಂಡಮಾರುತ ಈ ತೀರದಲ್ಲಿದ್ದ ಮರಳನ್ನು ಸಂಪೂರ್ಣವಾಗಿ ನುಂಗಿಹಾಕಿತ್ತು. ಅಲ್ಲಿಂದ ಇಲ್ಲಿಯವರೆಗೂ ಇಲ್ಲಿ ಕೇವಲ ಬಂಡೆಗಳು ಮಾತ್ರ ಇದ್ದವು. ಕಳೆದ ಏಪ್ರಿಲ್ ತಿಂಗಳಲ್ಲಿ ಈಸ್ಟರ್ ಹಬ್ಬ ಕಳೆಯುತ್ತಿದ್ದಂತೆ ಉತ್ತರ ಭಾಗದಿಂದ ಜೋರಾಗಿ ಗಾಳಿ ಬೀಸಲಾರಂಭಿಸಿತ್ತು. ಅಲ್ಲದೆ ಸಮುದ್ರದ ಅಲೆಗಳಲ್ಲಿ ವಿಚಿತ್ರವಾದ ಏರಿಳಿತಗಳು ಕಂಡುಬಂದಿದ್ದವು. ಇದರ ಪರಿಣಾಮವಾಗಿಯೇ ಇಲ್ಲಿ ಟನ್ ಗಟ್ಟಲೆ ಮರಳು ಸಮುದ್ರ ತೀರ ಸೇರಿವೆ.’

ಬೀಚ್ ನ ಹಿಂದಿನ ಹಾಗೂ ಈಗಿನ ಸ್ಥಿತಿ…

ಐರ್ಲೆಂಡ್ ನ ಪೂರ್ವಭಾಗದಲ್ಲಿರುವ ಅರೆದ್ವೀಪದಲ್ಲಿರುವ ಆರ್ಚಿಲ್ ಐಲ್ಯಾಂಡ್ ಗ್ರಾಮವಿದೆ. ಜರ್ಮನಿನ ಖ್ಯಾತ ನಾಜಿ ವಿರೋಧಿ ಬರಹಗಾರ ಹಾಗೂ ನೋಬೆಲ್ ಪ್ರಶಸ್ತಿ ವಿಜೇತ ಹೆನ್ರಿಚ್ ಬೊಲ್ 1950-60ರ ಅವಧಿಯಲ್ಲಿ ಈ ಗ್ರಾಮದಲ್ಲಿ ನೆಲೆಸಿದ್ದರು.

Leave a Reply