ಸಿಎಂ ಗೃಹ ಕಚೇರಿಯಲ್ಲಿ ಉದ್ಘಾಟನೆಯಾಯ್ತು ‘ವರುಣ’ ಸ್ಟುಡಿಯೋ

ಡಿಜಿಟಲ್ ಕನ್ನಡ ಟೀಮ್:

ವಿವಿಧ ಮಾಧ್ಯಮಗಳ ಜತೆ ಸಂವಾದ ನಡೆಸಲು ಅನುಕೂಲವಾಗಲು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಿರ್ಮಾಣ ಮಾಡಲಾಗಿರುವ ‘ವರುಣ’ ಸ್ಟುಡಿಯೋ ಅನ್ನು ಗುರುವಾರ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ಎಲ್ಲ ಮಾಧ್ಯಮಗಳ ಜೊತೆ ಮುಖ್ಯಮಂತ್ರಿಗಳ ಸಂವಾದಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಉದ್ದೇಶದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ ಈ ಸ್ಟುಡಿಯೋ ನಿರ್ಮಿಸಲಾಗಿದೆ. ಮುಖ್ಯಮಂತ್ರಿಗಳ ವಸತಿ ಮತ್ತು ಕಚೇರಿಗಳಲ್ಲಿ ಸ್ಥಳಾವಕಾಶದ ಕೊರತೆ ಇದ್ದ ಕಾರಣ ಈ ಸ್ಟುಡಿಯೊ ಅನ್ನು ಗೃಹಕಚೇರಿ ಕೃಷ್ಣಾದಲ್ಲಿ ನಿರ್ಮಿಸಲು ನಿರ್ಧರಿಸಲಾಯಿತು. ಈ ಸ್ಟುಡಿಯೋದಲ್ಲಿ ಮುಖ್ಯಮಂತ್ರಿಗಳನ್ನು ಸಂದರ್ಶಿಸಲು ಅನುಕೂಲವಾಗುವಂತೆ ಆಸನ, ಬೆಳಕಿನ ವ್ಯವಸ್ಥೆ, ಟೆಲಿಪ್ರಾಂಪ್ಟರ್, ರೆಕಾರ್ಡಿಂಗ್ ವ್ಯವಸ್ಥೆ, ಕಂಪ್ಯೂಟರ್ ಹಾಗೂ ಇತರೆ ಸೌಲಭ್ಯ ಕಲ್ಪಿಸಲಾಗಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳ ವರದಿಗಾರರು ತಮ್ಮ ಕ್ಯಾಮೆರಾಗಳ ಜತೆ ನೇರವಾಗಿ ಬಂದು ಈ ಸ್ಟುಡಿಯೋದಲ್ಲಿ ಸಂದರ್ಶನ ನಡೆಸಬಹುದು. ಇದರ ಜತೆಗೆ ಮುಖ್ಯಮಂತ್ರಿಗಳು ನೀಡುವ ಸಂದೇಶ ಹಾಗೂ ಹೇಳಿಕೆಗಳನ್ನು ಈ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡಲಾಗುವುದು.

Leave a Reply