ಗಣೇಶ್- ಶಿಲ್ಪಾ ದಂಪತಿ ಮುಂದೆ ನಿಂತು ನಟಿ ಅಮೂಲ್ಯ ಮದುವೆ ಮಾಡ್ತಿರೋದು ಯಾಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಸ್ಯಾಂಡಲ್ ವುಡ್ ನಟಿ ಅಮೂಲ್ಯ ಮದುವೆಯ ಪ್ರತಿ ಹಂತದಲ್ಲೂ ಶಿಲ್ಪಾ ಮತ್ತು ಗಣೇಶ್ ಮುಂದೆ ನಿಂತು ನಡೆಸಿಕೊಡುತ್ತಾದ್ದಾರೆ. ಹಲವು ಕಾರ್ಯಕ್ರಮದ ಖರ್ಚನ್ನೂ ನೋಡಿಕೊಂಡಿದ್ದಾರೆ. ಇದು ಬಹೆತೇಕರಿಗೆ ಗೊತ್ತಿರೋ ವಿಷಯವೇ. ಆದರೆ, ಅಮ್ಮು ಮೇಲೆ ಇಷ್ಟೊಂದ್ ಕೇರ್ ಯಾಕೆ? ಏನಿದರ ಮರ್ಮ? ಸ್ವಲ್ಪ ಕೆದಕುತ್ತಾ ಹೋದ್ರೆ ನಮಗೆ ಸಿಗುವ ಉತ್ತರ ರಾಜಕೀಯ!

ಅಮೂಲ್ಯ ಮದುವೆಗೂ ರಾಜಕೀಯಕ್ಕೂ ಏಲ್ಲಿಯ ಸಂಬಂಧ ಎಂದು ನಿಮಗೆ ಆಶ್ಚರ್ಯವಾಗಬಹುದು. ಆ ರಾಜಕೀಯ ಕಾರಣ ಹೀಗಿದೆ… ಶಿಲ್ಪಾ  ಗಣೇಶ್ ಅವರಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಚನೆ ಇದೆ. ಇದಕ್ಕಾಗಿ ಹಲವು ಕಸರತ್ತುಗಳನ್ನು ನಡೆಸ್ತಾ ಇದ್ದಾರೆ. ಗಣೇಶ್ ಬಿಜೆಪಿ ಮುಖಂಡರ ಬಳಿ ಟಿಕೆಟ್ ಕೂಡ ಕೇಳಿದ್ದಾರೆ. ಆರ್ ಎಸ್ ಎಸ್  ಮುಖಂಡರನ್ನು ಸಂಪರ್ಕಿಸಿ ಲಾಬಿ ನಡೆಸುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಗಣೇಶ್ ಮೊದಲಿನಿಂದಲೂ ಬಿಜೆಪಿಯ ಮುಖಂಡ ಯಡಿಯೂರಪ್ಪನೊಂದಿಗೆ ನಿಕಟ ಸಂಪರ್ಕದಲ್ಲಿರುವವರು. ಹೇಗಾದರೂ ಮಾಡಿ ಪತ್ನಿ ಶಿಲ್ಪಾಗೆ ಟಿಕೆಟ್ ಕೊಡಿಸಿ ಗೆಲ್ಲಿಸಬೇಕು ಅನ್ನೋದು ಗಣೇಶ್ ಪ್ಲಾನ್.

ಅಮೂಲ್ಈಯ ಮದುವೆ ಮಾಡಿದರೆ ಟಿಕೆಟ್ ಸಿಗುತ್ತಾ ಅಂತಾ ನೀವು ಪ್ರಶ್ನೆ ಹಾಕಬಹುದು. ಆದರೆ ಇಲ್ಲೇ ಇರೋದು ರಹಸ್ಯ. ಶಿಲ್ಪಾ ಅವರು ಮುಂದಿನ ಚುನಾವಣೆಯಲ್ಲಿ ಕಣ್ಣಿಟ್ಟಿರೋದು ರಾಜರಾಜೇಶ್ವರಿ ನಗರ ಕ್ಷೇತ್ರದ ಮೇಲೆ. ಇಲ್ಲಿಂದಲೇ ಚುನಾವಣೆಗೆ ನಿಲ್ಲಬೇಕು ಎಂಬ ಹಂಬಲ ಅವರದ್ದು. ಅಮ್ಮುವಿನ ಹುಡುಗ ಜಗದೀಶ್ ನ ತಂದೆ RR ನಗರದ ಕಾರ್ಪೊರೇಟರ್. ಪ್ರಭಾವಿ ಲೀಡರ್. ಅಲ್ಲಿ ಅವರ ಸಪೋರ್ಟ್ ತುಂಬಾ ಮುಖ್ಯ. ಅಲ್ಲದೆ ಅವರೂ ಕೂಡ ಎಂ.ಎಲ್.ಎ ಟಿಕೆಟ್ ಆಕಾಂಕ್ಷಿ. ಅಮ್ಮು ಮದ್ವೆ ನೆಪದಲ್ಲಿ ಅವರನ್ನು ಓಲೈಸಿ, ಟಿಕೆಟ್ ಪಡೆದು, ಅವರ ಸಪೋರ್ಟ್ ಪಡೆಯೋ ಐಡಿಯಾ!! ಅಮೂಲ್ಯ ಮದ್ವೆ ನೆಪದಲ್ಲಿ ಒಳ್ಳೆ ಜನಾಭಿಪ್ರಾಯ ಮೂಡಿಸಿ ರಾಜಕೀಯ ಹೆಜ್ಜೆ ಇಡುವುದು ಈ ಎಲ್ಲದರ ಹಿಂದಿನ ಪ್ಲಾನ್. ಈ ಪ್ಲಾನ್ ನಿಜಕ್ಕೂ ಯಶಸ್ವಿಯಾಗುತ್ತಾ ಅನ್ನೋದನ್ನು ಕಾದು ನೋಡಲೇಬೇಕು.

1 COMMENT

Leave a Reply