‘ಕಾಶ್ಮೀರದಲ್ಲಿ ಬರೀ ಆಜಾದಿ ಸಾಕೆನ್ನುವ ಹುರಿಯತ್ ವ್ಯಕ್ತಿಗಳ ತಲೆ ಕಡೀತೇವೆ, ನಮಗೆ ಬೇಕಿರುವುದು ಇಸ್ಲಾಂ ಸಾಮ್ರಾಜ್ಯ’

ಡಿಜಿಟಲ್ ಕನ್ನಡ ಟೀಮ್:

ಈ ಮೇಲಿನ ವಾಕ್ಯವನ್ನು ಯಾರು- ಯಾರಿಗೆ ಹೇಳಿದರು ಎಂಬುದು ಮಾತ್ರ ಕೌತುಕದ್ದಾಗಿದೆ. ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳಾದ ಹುರಿಯತ್ ನ ನಾನಾ ಬಣಗಳ ಗಿಲಾನಿ, ಉಮರ್ ಫರೂಕ್, ಯಾಸಿನ್ ಮಲಿಕ್ ಎಲ್ಲರಿಗೂ ಹಿಜ್ಬುಲ್ ಉಗ್ರ ಸಂಘಟನೆ ಮುಖ್ಯಸ್ಥ ಜಕೀರ್ ಮುಸಾನಿಂದ, ಆಡಿಯೋ ಟೇಪ್ ಒಂದರ ಮೂಲಕ ಈ ಸಂದೇಶ ರವಾನೆಯಾಗಿದೆ.

ಜಮ್ಮು-ಕಾಶ್ಮೀರದ ಕಲ್ಲು ತೂರಾಟಗಾರರನ್ನು ಸಹಾನುಭೂತಿಯಿಂದ ನೋಡುತ್ತಿದ್ದವರಿಗೆ ವಾಸ್ತವದ ಅರಿವು ಮೂಡಿಸುವ ವಿದ್ಯಮಾನವಿದು. ಉದಾರವಾದಿಗಳು, ಇಸ್ಲಾಂ ಬೆಂಬಲಿಗರು ಏನೇ ಅನುಕಂಪದ ಮಾತನಾಡಲಿ, ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ ಸ್ವಾಯತ್ತೆಗಾಗಲೀ, ಸ್ವಾತಂತ್ರ್ಯಕ್ಕಾಗಲೀ ಅಲ್ಲ ಎಂಬುದು ಒಂದು ಸಾಮಾನ್ಯ ಜ್ಞಾನ. ಏಕೆಂದರೆ ಇಸ್ಲಾಮಿನ ವಿಸ್ತರಣೆಯಾಗಿದ್ದೇ ಹಿಂಸಾಚಾರದ ಮೂಲಕ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಇದೀಗ, ಬುರ್ಹಾನ್ ವಾನಿ ನಂತರ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ನೇತೃತ್ವ ವಹಿಸಿಕೊಂಡಿರುವ ಮುಸಾ ಹೇಳುತ್ತಿರುವುದು ಇದನ್ನೇ.

ಪ್ರತ್ಯೇಕತಾವಾದಿಗಳು, ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಇವೆಲ್ಲವೂ ಜಮ್ಮು-ಕಾಶ್ಮೀರದ ವಿಚಾರಕ್ಕೆ ಬಂದಾಗ ‘ಇಲ್ಲಿ ಅಭಿವೃದ್ಧಿ ಮಂತ್ರವೆಲ್ಲ ನಡೆಯುವುದಿಲ್ಲ, ರಾಜಕೀಯ ಪರಿಹಾರ ನೀಡಬೇಕು’ ಎನ್ನುತ್ತಿದ್ದರು. ಈ ರಾಜಕೀಯ ಪರಿಹಾರ ಒಬ್ಬೊಬ್ಬರ ವ್ಯಾಖ್ಯಾನದಲ್ಲಿ ಒಂದೊಂದು ಬಗೆಯದ್ದಾಗಿದೆ. ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನಿ ಕಾರ್ಯಸೂಚಿ ಅನುಸರಿಸುವ ಧಾವಂತ, ಅಬ್ದುಲ್ಲಾಗಳಿಗೆ ಹಾಗೂ ಮುಫ್ತಿಗಳಿಗೆ ತಮ್ಮ ಅಸ್ತಿತ್ವ ಉಳಿಸಿಕೊಂಡು ಅತ್ತ ಪಾಕಿಸ್ತಾನ ಮತ್ತು ಇತ್ತ ಭಾರತ ಇಬ್ಬರನ್ನೂ ಆಟವಾಡಿಸಿಕೊಂಡು ಧಂದೆ ಮಾಡಿಕೊಂಡಿರೋಣ ಎಂಬ ಆಶಯ, ಕಾಂಗ್ರೆಸ್ಸಿಗೆ ಮುಸ್ಲಿಮರನ್ನು ಓಲೈಸಿ ಪುಳಕಗೊಳ್ಳುವ ಶತಮಾನಗಳ ವ್ಯಾಧಿ.

ಆದರೆ ಹಿಜ್ಬುಲ್ ಉಗ್ರರಿಗೆ, ಕಾಶ್ಮೀರಿಗರ ಕೈಯಲ್ಲಿ ಕಲ್ಲು ಹಿಡಿಸುತ್ತಿರುವವರಿಗೆ ಉದ್ದೇಶ ಸ್ಪಷ್ಟವಿದೆ. ಜಗತ್ತಿನಲ್ಲೆಡೆ ಶರಿಯಾ ಕಾಯ್ದೆಯ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪಿಸುವುದಕ್ಕೆ ಜಮ್ಮು-ಕಾಶ್ಮೀರ ಅವರಿಗೊಂದು ಬಾಗಿಲಷ್ಟೆ. ಅಲ್ಲಿಗೆ ಹಿಂಸಾಚಾರ ಮುಗಿಯದು. ದೆಹಲಿ ಬೇಕು, ದೆಹಲಿ ನಂತರ ಇಡೀ ಭಾರತ ಬೇಕು..

ಇದನ್ನೇ ಆಡಿಯೊ ಟೇಪಿನಲ್ಲಿ ಸ್ಪಷ್ಟವಾಗಿ ಹೇಳಿರುವ ಹಿಜ್ಬುಲ್ ಉಗ್ರ ಮುಸಾ, ಕೇವಲ ರಾಜಕೀಯ ಪರಿಹಾರದ ಬೇಡಿಕೆ ಇಡುತ್ತಿರುವ ಹುರಿಯತ್ ಮುಖಂಡರ ತಲೆಗಳನ್ನು ಕಡಿದು ಲಾಲ್ ಚೌಕದಲ್ಲಿ ಪ್ರದರ್ಶನಕ್ಕೆ ಇರಿಸಲಾಗುವುದು ಎಂದಿದ್ದಾನೆ. ಕೆಲದಿನಗಳ ಹಿಂದೆ ಹುರಿಯತ್ ಮುಖಂಡರು ಹೇಳಿಕೆ ಬಿಡುಗಡೆ ಮಾಡಿ, ‘ಕಾಶ್ಮೀರ ಹೋರಾಟಕ್ಕೂ ಐಸಿಸ್, ಅಲ್ ಕಾಯಿದಾಗಳಿಗೂ ಸಂಬಂಧವಿಲ್ಲ. ಇದು ರಾಜಕೀಯ ಹೋರಾಟವೇ ಹೊರತು ಧಾರ್ಮಕವಾದುದಲ್ಲ’ ಎಂದಿದ್ದರು. ಈ ಬಗ್ಗೆ ಕಿಡಿ ಕಾರಿರುವ ಹಿಜ್ಬುಲ್ ಉಗ್ರ ‘ಕಾಶ್ಮೀರದ ಹೋರಾಟ ಇಸ್ಲಾಂ ಕಾಲಿಫತ್ ಸ್ಥಾಪನೆಯದ್ದು. ಈ ಬೂಟಾಟಿಕೆಯವರು ಏಕೆ ಅದನ್ನು ಅಲ್ಲಗಳೆಯುತ್ತಾರೆ. ಹಾಗಾದರೆ ಕಾಶ್ಮೀರದಲ್ಲಿ ಕೂಗುವ ಘೋಷಣೆಗಳಾದ  ‘ಕಾಶ್ಮೀರದ ಆಜಾದಿ ಅರ್ಥವೇನು- ಲಾ ಇಲಾಹ ಇಲ್ಲಲ್ಲಾಹ’ ‘ಪಾಕಿಸ್ತಾನದ ಜತೆಗಿನ ಸಂಬಂಧ- ಲಾ ಇಲಾಹ ಇಲ್ಲಲ್ಲಾಹ ’ಎಂಬುದರ ಅರ್ಥವೇನು? ಅಲ್ಲಾಹು ಬಿಟ್ಟು ಬೇರೇನೂ ಇಲ್ಲ ಎಂಬುದೇ,, ’

ಅಲ್ಲಿಗೆ ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರುವವರ ಬಗ್ಗೆಯೂ ಅನುಕಂಪ ಇರಿಸಿಕೊಂಡಿರುವ ಕೆಲ ದೇಶವಾಸಿಗಳನ್ನು ಏನೆಂದು ಕರೆಯಬೇಕು ಎಂಬ ಪ್ರಶ್ನೆ ಏಳುತ್ತದೆ. ಕಾಶ್ಮೀರಿ ಪಂಡಿತರ ಹತ್ಯಾಕಾಂಡ ನಡೆಸಿ ಕಣಿವೆಯಿಂದ ಹೊರದಬ್ಬಿದಾಗಲೇ ಅಲ್ಲಿನವರ ಇಸ್ಲಾಂ ಸಾಮ್ರಾಜ್ಯವಾದ ಸ್ಪಷ್ಟವಾಗಿತ್ತು.

ಭಾರತದ ದುರಂತವೇನೆಂದರೆ ಹೀಗೆ ಹೊಳೆಯುತ್ತಿರುವ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೂ ವಿತಂಡವಾದ ಮಾಡುವ ಮಾಧ್ಯಮ, ರಾಜಕಾರಣಿ, ಬುದ್ಧಿಜೀವಿ ಬಳಗ ನಮ್ಮ ನಡುವೆ ಇದೆ.

Leave a Reply