ಅಕ್ರಮ-ಸಕ್ರಮ, ಬಾಂಗ್ಲಾದಿಂದ ಬಂದು ಭಾರತೀಯರಾದವರಿಗೆ ಪರಿಶಿಷ್ಟ ಜಾತಿಯಲ್ಲಿ ಸ್ಥಾನ…: ರಾಜ್ಯ ಸಂಪುಟ ನಿರ್ಣಯಗಳಿವು

ಡಿಜಿಟಲ್ ಕನ್ನಡ ಟೀಮ್

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರಿಗೆ ಹತ್ತು ಸಾವಿರ ರೂ. ದಂಡ ವಿಧಿಸಿ, ಸಕ್ರಮಗೊಳಿಸುವ ಮಹತ್ವದ ನಿರ್ಧಾರವನ್ನು ಇಂದಿಲ್ಲಿ ಸೇರಿದ್ದ ರಾಜ್ಯ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. 30×40 ಚದರಡಿ ಇಲ್ಲವೆ ಅದಕ್ಕಿಂತ ಕಡಿಮೆ ವಿಸ್ತೀರ್ಣದಲ್ಲಿ  ನಿರ್ಮಿಸಿಕೊಂಡಿರುವ ಮನೆಗಳು ಸಕ್ರಮಗೊಳ್ಳಲಿವೆ.

ಸಾಮಾನ್ಯ ವರ್ಗ ಹತ್ತು ಸಾವಿರ ರೂ., ಪರಿಶಿಷ್ಟ ಜಾತಿ, ವರ್ಗದವರಿಗೆ ಐದು ಸಾವಿರ ರೂ. ನಿಗದಿ ಮಾಡಲಾಗಿದ್ದು, ಈ ಹಣವನ್ನು ಸ್ಥಳೀಯ ಸಂಸ್ಥೆಗಳಿಗೆ ಪಾವತಿಸಿ, ಹಕ್ಕು ಪತ್ರ ಪಡೆಯಬಹುದಾಗಿದೆ.  ಬೆಂಗಳೂರು, ಮೈಸೂರು, ದಾವಣಗೆರೆ, ಸೇರಿದಂತೆ ಮಹಾನಗರಗಳ ವ್ಯಾಪ್ತಿಯ 18 ಕಿಲೋ ಮೀಟರ್, ನಗರ ಸಭೆ, ಹತ್ತು ಕಿಲೋ ಮೀಟರ್, ಪುರಸಭೆ, ಐದು ಹಾಗೂ ಪಟ್ಟಣ ಪಂಚಾಯಿತಿನ ಮೂರು ಕಿಲೋ ಮೀಟರ್‍ನ ವ್ಯಾಪ್ತಿಯಿಂದ ಹೊರಗೆ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿಕೊಂಡವರಿಗೆ ಇದರ ಲಾಭ ದೊರೆಯಲಿದೆ.

ಉಳಿದಂತೆ ನಿರ್ಣಯಗಳು:

  • ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ವಿವಿಧ ಜಾತಿಗಳ ಹೆಸರಿನಲ್ಲಿ ಬಂದು ನೆಲೆಸಿರುವ ಎಂಟು ಸಾವಿರಕ್ಕೂ ಹೆಚ್ಚು ಬಾಂಗ್ಲಾ ದೇಶೀಯರನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ. ಇವರು ಮೂಲತ: ಪಶ್ಚಿಮ ಬಂಗಾಳದವರು. ಅಲ್ಲಿಂದ ಬಾಂಗ್ಲಾಕ್ಕೆ ಹೋಗಿದ್ದವರು, 1964 ರಲ್ಲಿ ಇಲ್ಲಿಗೆ ಬಂದು ನೆಲೆಸಿದವರು. ಅವರಿಗೆ ಈಗಾಗಲೇ ಭಾರತೀಯ ಪೌರತ್ವ ನೀಡಲಾಗಿದೆ.ಮತದಾನ ಪ್ರಕ್ರಿಯೆಯಲ್ಲೂ ಅವರು ತೊಡಗಿದ್ದಾರೆ.
  • ಕೆ.ಆರ್.ಎಸ್.ಹಾರಂಗಿ,ಹೇಮಾವತಿ,ಆಲಮಟ್ಟಿ,ಭದ್ರಾ ಸೇರಿದಂತೆ ರಾಜ್ಯದ ವಿವಿಧ ಅಣೆಕಟ್ಟುಗಳನ್ನು ಪುನಶ್ಚೇತನ ಮತ್ತು ಅಭಿವೃದ್ಧಿ. ₹581 ಕೋಟಿ ಪರಿಶ್ಕೃತ ಅಂದಾಜು.
  • ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿರುವ ಜಾಗೃತ ಸಮಿತಿಗಳ ಸದಸ್ಯರಿಗೆ ಮಾಸಿಕ 150 ರೂ ಗೌರವಧನ.
  • ದಾಸೋಹ ಯೋಜನೆಯಡಿ ರಾಜ್ಯದ ಅನಾಥಾಶ್ರಮಗಳು, ಅಂಗವಿಕಲರು, ವಿಧವೆಯರು,ವಯೋವೃದ್ಧರ ಆಶ್ರಮಗಳಿಗೆ ಉಚಿತವಾಗಿ ಅಕ್ಕಿ ಹಾಗೂ ಗೋಧಿ. ವಾರ್ಷಿಕ 35.04 ಕೋಟಿ ರೂ ವೆಚ್ಚ.
  • ಅಬ್ಕಾರಿ ಬಾಕಿ ಪಾವತಿಗೆ ಸಂಬಂಧಿಸಿದಂತೆ ವಿಧಿಸಲಾಗಿದ್ದ ಗಡುವನ್ನು ಮಾರ್ಚ್ 31 ರಿಂದ ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದೆ.
  • ಮಳೆಗಾಲದ ವಿಧಾನ ಮಂಡಲದ ಅಧಿವೇಶನ ಜೂನ್ 5 ರಿಂದ ಹತ್ತು ದಿನಗಳ ಕಾಲ ನಡೆಸಲು ತೀರ್ಮಾನ. ಅಗತ್ಯ ಬಿದ್ದರೆ ಅವಧಿ ವಿಸ್ತರಣೆ.
  • ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಅನ್ನು ಇಡುವಕ್ಕಿ ಬಳಿ ಆರು ನೂರು ಎಕರೆಯಲ್ಲಿ ನಿರ್ಮಿಸಲು 138.69 ಕೋಟ ರೂಗಳನ್ನು ಮಂಜೂರು ಮಾಡಲು ನಿರ್ಧಾರ.
  • ಕೊಪ್ಪಳ ಜಿಲ್ಲೆ ಗಂಗಾವತಿಯ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ

Leave a Reply