85ನೇ ವಸಂತಕ್ಕೆ ಕಾಲಿಟ್ಟ ದೇವೇಗೌಡ್ರು

ಡಿಜಿಟಲ್ ಕನ್ನಡ ಟೀಮ್:

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಇಂದು 85ನೇ ವಸಂತಕ್ಕೆ ಕಾಲಿಟ್ಟರು. ನಿನ್ನೆ ಸಂಜೆ ಕುಟುಂಬ ಸದಸ್ಯರೊಂದಿಗೆ ವಿಶೇಷ ವಿಮಾನದಲ್ಲಿ ತಿರುಪತಿಗೆ ತೆರಳಿದ್ದ ಗೌಡರು, ಇಂದು ಬೆಳಗ್ಗೆ ತಿರುಮಲದಲ್ಲಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಪತ್ನಿ ಚನ್ನಮ್ಮ, ಪುತ್ರ ರೇವಣ್ಣ, ಪುತ್ರಿಯರಾದ ಅನುಸೂಯ, ಶೈಲಜಾ, ಸೊಸೆ ಭವಾನಿ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಸಿ.ಎನ್ ಮಂಜುನಾಥ್, ಅಳಿಯ ಶ್ರೇಯಸ್ ಗೌಡರ ಜತೆ ತಿರುಪತಿಯಲ್ಲಿ ದರ್ಶನ ಪಡೆದರು. ನಂತರ ಪದ್ಮಾವತಿ ದೇವಿ ದರ್ಶನ ಪಡೆದು ಬೆಂಗಳೂರಿಗೆ ಮರಳಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳದೇ ತಮ್ಮ ನಿವಾಸದಲ್ಲಿ ಕುಟುಂಬ ಸದಸ್ಯರೊಂದಿಗೆ ಸರಳವಾಗಿ ಆಚರಿಸಿಕೊಂಡರು. ಅವರ ನಿವಾಸಕ್ಕೆ ಭೇಟಿ ನೀಡಿದ್ದ ಪಕ್ಷದ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಪುಷ್ಟಗುಚ್ಛ ನೀಡಿ ಗೌಡರಿಗೆ ಶುಭಾಶಯ ಕೋರಿದರು.

Leave a Reply