ಕಲ್ಲಿದ್ದಲು ಹಗರಣ: ಮೂವರು ಅಧಿಕಾರಿಗಳ ಅಪರಾಧ ಸಾಬೀತು, ಮೇ 22ಕ್ಕೆ ಶಿಕ್ಷೆ ಪ್ರಕಟ

ಡಿಜಿಟಲ್ ಕನ್ನಡ ಟೀಮ್:

ಲಕ್ಷಾಂತರ ಕೋಟಿ ಮೊತ್ತದ ಕಲ್ಲಿದ್ದಲು ಹಗರಣದ ವಿಚಾರಣೆ ನಡೆಸಿರುವ ವಿಶೇಷ ನ್ಯಾಯಾಲಯ ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಹೆಚ್.ಸಿ ಗುಪ್ತಾ ಹಾಗೂ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಅಪರಾಧಿ ಎಂದು ತೀರ್ಮಾನಿಸಿದೆ.

ಗುರುವಾರ ನಡೆದ ವಿಚಾರಣೆಯಲ್ಲಿ ಈ ಆರೋಪಿಗಳನ್ನು ಅಪರಾಧಿಗಳೆಂದು ನಿರ್ಧರಿಸಿರುವ ನ್ಯಾಯಾಲಯ, ಮೇ 22 ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಈ ಪ್ರಕರಣದಲ್ಲಿ ಎಚ್.ಸಿ ಗುಪ್ತಾ ಜತೆಗೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ಎಸ್ ಕ್ರೋಫಾ ಮತ್ತು ನಿರ್ದೇಶಕ ಸಿ.ಸಮಾರಿಯಾ ಅವರನ್ನು ದೋಷಿ ಎಂದು ತೀರ್ಮಾನಿಸಿದೆ. ಈ ಮೂವರು ಮಧ್ಯ ಪ್ರದೇಶ ತೆಸ್ಗೋರಾ ಬಿ ರುದ್ರಪುರಿಯಲ್ಲಿನ ಕಲ್ಲಿದ್ದಲು ನಿಕ್ಷೇಪವನ್ನು ಅಕ್ರಮವಾಗಿ ಕೆಎಸ್ಎಸ್ ಪಿಎಲ್ ಗೆ ನೀಡಿರುವುದು ಸಾಬೀತಾಗಿದೆ. ಇನ್ನು ಕೆಎಸ್ಎಸ್ ಪಿಎಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪವನ್ ಕುಮಾರ್ ಅಹ್ಲುವಾಲಿಯಾ ಅವರನ್ನೂ ಅಪರಾಧಿ ಎಂದು ನ್ಯಾಯಾಲಯ ತೀರ್ಮಾನಿಸಿದೆ.

ಇದೇ ವೇಳೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿದ್ದ ಲೆಕ್ಕ ಪರಿಶೋಧಕ ಅಮಿತ್ ಗೋಯಲ್ ಅವರನ್ನು ನಿರ್ದೋಷಿ ಎಂದು ಕೋರ್ಟ್ ತೀರ್ಮಾನಿಸಿದೆ.

Leave a Reply