ಮಲ್ಯರಂಥವರನ್ನು ಹದ ಹಾಕುವುದಕ್ಕೆ ಹೊಸ ಮಸೂದೆ, ತಲೆಮರೆಸಿಕೊಂಡ ಆರೋಪಿಯ ಆಸ್ತಿ ಮುಟ್ಟುಗೋಲು ಪ್ರಸ್ತಾವ

ಡಿಜಿಟಲ್ ಕನ್ನಡ ಟೀಮ್:

ತಲೆಮರೆಸಿಕೊಂಡ  ಆರ್ಥಿಕ ಅವ್ಯವಹಾರಿಗಳ ಮಸೂದೆ- 2017. ಹೀಗೊಂದು ಮಸೂದೆಯನ್ನು ರೂಪಿಸಿರುವ ಕೇಂದ್ರ ಸರ್ಕಾರ ಇದನ್ನು ಸಾರ್ವಜನಿಕ ಚರ್ಚೆಗೆ ಮುಕ್ತವಾಗಿರಿಸಿದೆ. ಈ ಬಗ್ಗೆ ವಿತ್ತ ಸಚಿವಾಲಯದ ಜಾಲತಾಣಕ್ಕೆ ಸಲಹೆ- ಸೂಚನೆಗಳನ್ನು ಕಳುಹಿಸಬಹುದಾಗಿದೆ.

ಮಸೂದೆಯ ಸಾರಾಂಶ ಇಷ್ಟು- ದೊಡ್ಡಮಟ್ಟದಲ್ಲಿ ಆರ್ಥಿಕ ಅವ್ಯವಹಾರಗಳನ್ನು ನಡೆಸಿ ವಿದೇಶಗಳಿಗೆ ಹೋಗಿ ಕೂರುವ ವ್ಯಕ್ತಿಯ ಇಲ್ಲಿನ ಆಸ್ತಿಪಾಸ್ತಿಗಳನ್ನು, ಆತ ಇಲ್ಲಿನ ನ್ಯಾಯಾಂಗ ವ್ಯವಸ್ಥೆಗೆ ಒಳಪಡುವುದಕ್ಕೆ ನಿರಾಕರಿಸುತ್ತಿರುವವರೆಗೂ ಸಂಪೂರ್ಣ ವಶಕ್ಕೆ ತೆಗೆದುಕೊಳ್ಳುವ ಅಧಿಕಾರ ಮಸೂದೆಯಲ್ಲಿದೆ.

ಆರ್ಥಿಕ ಅವ್ಯವಹಾರಗಳ ಸಂಬಂಧ ಈ ಹಿಂದಿದ್ದ ಕಾಯ್ದೆಗಳೆಲ್ಲವಕ್ಕೂ ಇದನ್ನೇ ಮುಂಚೂಣಿಯಾಗಿಸುವ ಪ್ರಸ್ತಾವವಿದೆ. ಹಾಗಾದರೆ ತಲೆಮರೆಸಿಕೊಂಡ ಆರ್ಥಿಕಾಪರಾಧಿ ಎಂದು ಯಾರನ್ನು ಪರಿಗಣಿಸಬಹುದು ಎಂಬುದಕ್ಕೆ ಮಸೂದೆಯಲ್ಲಿ ನೀಡಿರುವ ಉತ್ತರ- ಆರ್ಥಿಕ ಅಪರಾಧದ ಆರೋಪದ ಮೇಲೆ ತನ್ನ ವಿರುದ್ಧದ ಕ್ರಿಮಿನಲ್ ವಿಚಾರಣೆಯಲ್ಲಿ ಭಾಗವಹಿಸುವುದನ್ನು ತಪ್ಪಿಸಿಕೊಳ್ಳುವುದಕ್ಕೆ ವಿದೇಶಗಳಿಗೆ ಹೋಗಿ ಕುಳಿತವ ತಲೆಮರೆಸಿಕೊಂಡ ಆರ್ಥಿಕಾಪರಾಧಿ ಎನ್ನಿಸಿಕೊಳ್ಳುತ್ತಾನೆ.

ಆರೋಪಿಯು ತಲೆಮರೆಸಿಕೊಂಡಿರುವ ಅಪರಾಧಿ ಎಂಬುದನ್ನು ಮನದಟ್ಟು ಮಾಡಿಸಬೇಕಾದ ಜವಾಬ್ದಾರಿ ಆಡಳಿತ ಏಜೆನ್ಸಿಗಳದ್ದೇ ಆಗಿರುತ್ತದೆ.

1 COMMENT

  1. ಚಿದಂಬರಂ ಮತ್ತವರ ಮಗ ನಮ್ಮ ದೇಶಕ್ಕೆ ಚಳ್ಳೇಹಣ್ಣು ತಿನ್ನಿಸಲು ಹೊರಟ ಹೊಸಬರು. ಅವರನ್ನು ಹೇಗೆ ನಿಷ್ಟೇಷ್ಟಿತರನ್ನಾಗಿಸುತ್ತದೆ ಎಂದು ಬಹಳ ಕುತೂಹಲ ಉಂಟು. ಹೊಸ ಕಾನೂನು ಮೂಲಕವೇ ಇಲ್ಲ ಸುಗ್ರೀವಾಜ್ಞೆ ಯೇ ? ?????

Leave a Reply