ವಿದ್ಯುನ್ಮಾನ ಮತಯಂತ್ರ ಹ್ಯಾಕ್ ಸಾಧ್ಯ ಎಂದ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಮುಕ್ತ ಸವಾಲು

ಡಿಜಿಟಲ್ ಕನ್ನಡ ಟೀಮ್

ವಿದ್ಯುನ್ಮಾನ ಮತಯಂತ್ರಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ರಾಜಕೀಯ ಪಕ್ಷಗಳಿಗೆ ಕೇಂದ್ರ ಚುನಾವಣಾ ಆಯೋಗವು ಈ ಯಂತ್ರಗಳನ್ನು ಹ್ಯಾಕ್ ಮಾಡಿ ಆರೋಪ ಸಾಬೀತಾಗಿಸುವುದಕ್ಕೆ ಅವಕಾಶ ತೆರೆದಿರಿಸಿದೆ.

ಮೇ 26ರ ಸಂಜೆ 5 ಗಂಟೆ ಒಳಗೆ ಈ ಸವಾಲು ಸ್ವೀಕರಿಸುವ ರಾಜಕೀಯ ಪಕ್ಷಗಳೆಲ್ಲ ನೋಂದಣಿ ಮಾಡಿಕೊಳ್ಳಬೇಕು. ಜೂನ್ 3ರ ನಂತರ ಇವರಿಗೆಲ್ಲ ವಿದ್ಯುನ್ಮಾನ ಮತಯಂತ್ರವನ್ನು ಹ್ಯಾಕ್ ಮಾಡಿ ತೋರಿಸುವುದಕ್ಕೆ ಅವಕಾಶ ನೀಡಲಾಗುತ್ತದೆ.

ಇದುವರೆಗೆ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಸಲ್ಲಿಕೆಯಾಗಿರುವ ಯಾವ ಆಕ್ಷೇಪಗಳು ಅದರ ಜತೆಯಲ್ಲಿ ಅಗತ್ಯ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ನಾಸಿಂ ಜೈದಿ ಹೇಳಿದ್ದಾರೆ.

ಭಾರತದ ಇವಿಎಂಗಳು ನೆದರ್ಲೆಂಡ್, ಜರ್ಮನಿ ಇತ್ಯಾದಿ ಮತಯಂತ್ರಗಳಿಗಿಂತಲೂ ಹೇಗೆ ಸುರಕ್ಷಿತ ಎಂಬ ಬಗ್ಗೆ  ಪತ್ರಿಕಾಗೋಷ್ಟಿಯಲ್ಲಿ ವಿವರಣೆ ನೀಡಲಾಯಿತು. ಇವಿಎಂ ಜತೆಗೆ ಪ್ರಾರಂಭಿಸಿರುವ ಮತದಾರನ ಮತ ದೃಢೀಕರಣ ಪತ್ರ ವ್ಯವಸ್ಥೆಯ ಪ್ರದರ್ಶನವನ್ನೂ ಮಾಡಲಾಯಿತು.

Leave a Reply