8 ವಿಧಾನ ಪರಿಷತ್ ಸದಸ್ಯರ ವಿರುದ್ಧ ಸಭಾಪತಿಗೆ ದೂರು- ಕಾರಣ ಏನು?

ಡಿಜಿಟಲ್ ಕನ್ನಡ ಟೀಮ್:

ವಿಧಾನ ಪರಿಷತ್ತಿನ 8 ಸದಸ್ಯರನ್ನು ತಮ್ಮ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ದೂರು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ 6 ಹಾಗೂ ಜೆಡಿಎಸ್ ಪಕ್ಷದ 2 ಸದಸ್ಯರ ವಿರುದ್ಧ ಪದ್ಮನಾಭ ರೆಡ್ಡಿ ಅವರು ಇಂದು ಸಭಾಪತಿ ಅವರಿಗೆ ದೂರು ಸಲ್ಲಿಸಿದ್ದಾರೆ.

ಅಲ್ಲಂ ವಿರಭದ್ರಪ್ಪ, ಆರ್.ಬಿ ತಿಮ್ಮಾಪುರ, ರಘು ಆಚಾರ್, ಎನ್.ಎಸ್ ಬೋಸರಾಜು, ಎಸ್.ರವಿ, ಎಂ.ಡಿ ಲಕ್ಷ್ಮಿನಾರಾಯಣ ಮತ್ತು ಅಪ್ಪಾಜಿ ಗೌಡ ಅವರ ವಿರುದ್ಧ ಈ ದೂರು ದಾಖಲಿಸಿದ್ದು, ಪದ್ಮನಾಭ ರೆಡ್ಡಿ ಅವರು ದೂರಿನಲ್ಲಿ ಮಾಡಿರುವ ಆರೋಪಗಳು ಹೀಗಿವೆ…

‘ಈ ವಿಧಾನ ಪರಿಷತ್ ನಾಯಕರು ಬೆಂಗಳೂರಿನ ನಿವಾಸಿಗಳೆಂದು ಹೇಳಿ 2016ರ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕ್ಷೇತ್ರಗಳಿಂದ ಬಂದು ವಿಧಾನ ಪರಿಷತ್ ಕಲಾಪದಲ್ಲಿ ಪಾಲ್ಗೊಂಡಿದ್ದೇವೆ ಎಂದು ಕಾರಣ ನೀಡಿ ಪ್ರಯಾಣ ಭತ್ಯೆ ಪಡೆದಿದ್ದಾರೆ.’

Leave a Reply