ಪ್ರಥಮ್ -ಸಂಜನಾ -ಭುವನ್ ಲವ್ ಸೀಕ್ರೆಟ್ ಬಯಲು?!

ಭಾನುಮತಿ ಬಿ. ಸಿ.

ಬಿಗ್ ಬಾಸ್ ಅನ್ನೋದು ಜಗತ್ತಿನಾದ್ಯಂತ ಹೆಸರುವಾಸಿ ಆದ ರಿಯಾಲಿಟಿ ಶೋ. ಜಗತ್ತಿನ ಹಲವು ಭಾಷೆಗಳಲ್ಲಿ ಈ ಕಾರ್ಯಕ್ರಮ ತಯಾರಾಗಿ ಜನಪ್ರಿಯತೆ ಪಡೆದುಕೊಂಡಿದೆ. ಅದೇ ರೀತಿ  ಕನ್ನಡದಲ್ಲೂ ಬಿಗ್ ಬಾಸ್ ಜನಪ್ರಿಯ ರಿಯಾಲಿಟಿ ಶೋ. ಸೆಲೆಬ್ರಿಟಿ ಅನ್ನಿಸಿಕೊಂಡವರನ್ನ ಒಂದು ಮನೆಯಲ್ಲಿ ನೂರು ದಿನ ಕೂಡಿ ಹಾಕಿ ಅವರ ಬೇರೆಬೇರೆ ಬಣ್ಣಗಳನ್ನು ಹೊರಜಗತ್ತಿಗೆ ಪರಿಚಯಿಸೋದು ಇದ್ರ ಕೇಂದ್ರ ಬಿಂದು. ಯಾಕಂದ್ರೆ ತೆರೆಯ ಮೇಲೆ ಒಳ್ಳೆಯವರಂತೆ, ಭಯಂಕರ ಧೈರ್ಯಸ್ಥರಂತೆ, ನಾಯಕರಂತೆ ಕಾಣುವ ಮಂದಿ ನಿಜ ಜೀವನದಲ್ಲಿ ಹೇಗಿರ್ತಾರೆ ಅನ್ನೋ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರತ್ತೆ. ಅವರ ಸಣ್ಣತನ, ಉದಾರತೆ ಸಿಡುಕು, ತಾಳ್ಮೆ,ಅಸೂಯೆ  ಎಲ್ಲವು ಬಯಲುಗೊಂಡಂತೆ ಕಾಣುವ ಆಟಗಳನ್ನು ಸೃಷ್ಟಿಸಿ ವೀಕ್ಷಕರಿಗೆ ಕುತೂಹಲ ಹುಟ್ಟಿಸಿ , ಮನರಂಜನೆ ಕೊಟ್ಟು ಟಿ. ಆರ್.ಪಿ ಹೆಚ್ಚಿಸಿಕೊಳ್ಳೋದು ವಾಹಿನಿಗಳ ಮುಖ್ಯ ಉದ್ದೇಶ. ಅದು ಅವರಿಗೆ ಆದಾಯ ಹೆಚ್ಚಿಸೋದು ನಿಜ.

ಕನ್ನಡದ ಬಿಗ್ಬಾಸ್ ಸೀಸನ್- 3 ಬಾರಿ ಕುತೂಹಲ  ಹುಟ್ಟಿಸಿತ್ತು. ಈ ಸಾರಿ ಬಿಗ್ಬಾಸ್ ಮನೆಗೆ ಯಾರ್ಯಾರು ಬರಬಹುದು ಅನ್ನೊ ಲೆಕ್ಕಾಚಾರ ಹಾಕ್ತಾನೆ ಇದ್ರು ವೀಕ್ಷಕರು. ಚಿತ್ರರಂಗ,ರಾಜಕೀಯ ಕ್ಷೇತ್ರದ ಹಲವು ಹೆಸರುಗಳು ತೇಲ್ತಾ ಇದ್ದವು. ಆದ್ರೆ ಕೊನೆಯಲ್ಲಿ ಮನೆಯೊಳಗೆ ಬಂದವರು ಪ್ರಥಮ್, ಸಂಜನಾ,ಭುವನ್, ಎನ್ನುವಂತಹ ಗುರುತೇ ಇಲ್ಲದ ಮುಖಗಳು.

ಮೊದಲ ದಿನದಿಂದಲೇ ಪ್ರಥಮ್ ತನ್ನ ಯದ್ವಾತದ್ವಾ ನಡವಳಿಕೆಯಿಂದ  ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿ ಆಗಿದ್ದ. ಇವನ್ಯಾರಪ್ಪ ಗಂಟಲಲ್ಲೇ ಎಕೆ-47 ಗನ್ ಹಿಡ್ಕೊಂಡು ಬಂದವ್ನೆ ಅಂತ ಹುಬ್ಬೇರಿಸುವಂತೆ ಮಾಡಿದ್ದ. ಹಾಗೆಯೇ ನಿಧಾನಕ್ಕೆ ಭುವನ್,ಸಂಜನಾ, ಪ್ರಥಮ್ ನಡುವೆ ಟ್ರಯಾಂಗಲ್  ಲವ್ ಸೀನ್ ಕ್ರಿಯೇಟ್ ಆಗೋಗಿತ್ತು. ನೋಡ್ತಿದ್ದ ಪ್ರೇಕ್ಷಕರಲ್ಲಿ ಏನೋ ಕುತೂಹಲ ! ಯಾರು ಯಾರಿಗೆ ಕಾಳ್ ಹಾಕ್ತಿದಾರೆ? ಏನ್ ನಡೀತಿದೆ ಏನ್ ಕತೆ ಅಂತ ಬಿಗ್ಬಾಸ್ ಮುಗಿಯೋವರಿಗೂ ಅದೇ ಅಫೇರ್ ಸುದ್ದಿ ಸದ್ದು ಮಾಡ್ತಾ ಇತ್ತು

ಕೊನೆಯಲ್ಲಿ ಪ್ರಥಮ್ ಗೆದ್ದು ಸೆಲೆಬ್ರಿಟಿ ಆಗಿದ್ದ. ಅಲ್ಲಿಂದ ಇಲ್ಲಿವರೆಗೂ ಬಿಸಿ ಬಿಸಿ ಸುದ್ದಿ ಕೊಡ್ತಾನೆ ಬಂದಿದ್ದ.
ಬಹುಮಾನದ ದುಡ್ಡನ್ನು ದಾನ ಮಾಡ್ತೀನಿ ಅಂದಿದ್ದೂ ಸುದ್ದಿ.ನಿದ್ರೆ ಮಾತ್ರೆ ತಿಂದು ಸಾಯೋಕೆ ಹೋಗಿದ್ದು  ಸುದ್ಧಿಯೋ  ಸುದ್ದಿ . ಒಟ್ಟಿನಲ್ಲಿ ಸದಾ ಸುದ್ದಿಯಲ್ಲಿದ್ದಾನೆ  ಪ್ರಥಮ್ .

ಮಳೆ ನಿಂತರೂ ಹನಿ ನಿಲ್ಲಲ್ಲ ಅಂತಾರಲ್ಲ ಹಾಗೆ ಈ ಮೂವರ ಅಫೇರ್ ಸುದ್ದಿಯೂ ಚಾಲ್ತಿಯಲ್ಲಿತ್ತು, ಪ್ರಥಮ್ ಸಂಜನಾ ಅಲ್ಲೋದ್ರಂತೆ ಇಲ್ಲೊದ್ರಂತೆ, ಹೋಟೆಲ್ನಲ್ಲಿ ಉಳಿದಿದ್ರಂತೆ. ಪ್ರಥಮ್ ಭುವನ್ ಸಂಜನಾ ವಿಷಯದಲ್ಲಿ ಜಗಳ ಆಡಿದ್ರಂತೆ. ಭುವನ್ ಗೆ ಸಂಜನಾ ಕೈ ಕೊಟ್ಟಳಂತೆ ಅಂತ ಹಲವು ಗಾಸಿಪ್ ಗಳು ತೇಲಾಡ್ತಾ ಇದ್ವು.

ಈ ಗಾಸಿಪ್ ಹಿಂದೆ ಇತ್ತಾ  ಮಾಸ್ಟರ್ ಪ್ಲಾನ್?

ಇಷ್ಟೆಲ್ಲಾ ಗಾಸಿಪ್ ,ಸುದ್ದಿ ಹಿಂದೆ ಒಂದು ಯೋಜನೆ ಇರೋದನ್ನ ತಳ್ಳಿ ಹಾಕುವಂತಿಲ್ಲ.ಮೂಲಗಳ ಪ್ರಕಾರ  ಆ ಖಾಸಗಿ ಚಾನೆಲ್ ಮೊದಲೇ ಒಂದು ಯೋಜನೆ ರೂಪಿಸಿಕೊಂಡು ಇಂಥಾ  ಗಾಸಿಪ್ ಗಳಿಗೆ ಪುಷ್ಠಿ  ನೀಡುತ್ತಿತ್ತು. ಜೊತೆಗೆ ಅದೇ ಚಾನಲ್ ನಲ್ಲಿ ಪ್ರಸಾರವಾಗೋ ಮಜಾ ಟಾಕೀಸ್ ನಲ್ಲಿ ಸಂಜನಾ -ಭುವನ್ ಮದುವೆ ನಾಟಕವನ್ನೂ ಮಾಡಿಸಿದ್ದರು. ಅದಕ್ಕೆ ಪ್ರಥಮ್ ಖಂಡನೆಯೂ  ಜೋರಾಗಿತ್ತು.

ಇದಕ್ಕೆ ಇಂಬು ಕೊಡುವಂತೆ ಪ್ರಥಮ್,ಸಂಜನಾ, ಭುವನ್ ಕೂಡ ಅನುಮಾನ ಹುಟ್ಟಿಸುವ ರೀತಿಯಲ್ಲಿ ನಡೆದುಕೊಂಡು ಸುದ್ದಿ ಚಾಲ್ತಿಯಲ್ಲಿ ಇರುವಂತೆ ನೋಡಿಕೊಂಡಿದ್ರು! ಯಾಕಂದ್ರೆ ಈ ಮೂವರನ್ನ ಇಟ್ಕೊಂಡು ತ್ರಿಕೋನ ಪ್ರೇಮಕಥೆಯೊಂದು ರೆಡಿ ಆಗ್ತಿತ್ತು! ಅಂದ್ರೆ ಈ ಮೂವರ ಸುತ್ತ ಸುತ್ತುವ ಕತೆಯ ಸೀರಿಯಲ್ ಪ್ರಸಾರಕ್ಕೆ ರೆಡಿಯಾಗಿ ನಿಂತಿದೆ ಅದೇ…..
ಸಂಜು ಮತ್ತು ನಾನು!!

ಈ ಮಧ್ಯೆ ಪ್ರಥಮ್  ಪೇಪರ್ನಲ್ಲಿ ಸಂಜನಾ ಭುವನ್ ಫೋಟೋ ಒಟ್ಟಿಗೆ ಬಂದಿದ್ದನ್ನು  ನೋಡಿ ಭುವನ್ ಫೋಟೋ ಮೇಲೆ ಮುಖ ಕಾಣದ ಹಾಗೆ ಕೆಂಪು ಬಣ್ಣ  ಮೆತ್ತಿ  ತನ್ನ ಫೇಸ್ಬುಕ್ ನಲ್ಲಿ ಹಾಕಿಕೊಂಡಿದ್ದ.ಇದಕ್ಕೆ ಭುವನ್ ಕೂಡ ಪ್ರಥಮ್ ಮೇಲೆ ಸಿಟ್ಟಿಗೆದ್ದಂತೆ ಪ್ರತಿಕ್ರಿಯಿಸಿದ್ದ.

 ಟ್ರಯಾಂಗಲ್ ಲವ್ ಸ್ಟೋರಿ ಎಂಬ ಕಟ್ಟು ಕಥೆ !

ಸಂಜು ಮತ್ತು ನಾನು  ಸೀರಿಯಲ್ ಗೆ  ಒಳ್ಳೆ ಮೈಲೇಜ್ ಸಿಗಲಿ ಅಂತ ಇಷ್ಟೆಲ್ಲ ಪೂರ್ವ ತಯಾರಿ ನಡೆಸಿದ್ದು! ಪ್ರೇಕ್ಷಕ ನಂಬಿ ಬಾಯಿ ಬಿಟ್ಟುಕೊಂಡ್ ಈ ಸುದ್ದಿಗಳೆಲ್ಲ ನಿಜ ಎನ್ನುವಂತೆ ನಂಬಿ ಕೂತಿದ್ದ . ಅಸಲಿ ಕತೆ ಇವಾಗ ಹೊರಬಂದಿದೆ!

ಈ ಹಿಂದೆ ciniadda.com ಜೊತೆ ಮಾತನಾಡಿದ್ದ ಸಂಜನಾ ನಂಗು ಭುವನ್ ಗು ಇರೋದು ಕೇವಲ ಸ್ನೇಹ ಅಷ್ಟೇ. ನಾನು ಬೇರೆ ಹುಡುಗನ್ನ ಲವ್ ಮಾಡ್ತಿದ್ದೀನಿ. ಮದುವೆ ಆಗೋದು ಅವನನ್ನೇ. ಭುವನ್ ಜೊತೆ ಇದ್ದಿದ್ದೆಲ್ಲ ಬರೀ ಷೋಗಷ್ಟೇ ಸೀಮಿತ ಅಂದಿದ್ರು.

ಪ್ರಥಮ್ ಕೂಡ ಆಕೆ ನನ್ನ ಫ್ರೆಂಡ್ ಅಷ್ಟೇ . ಪ್ರೀತಿ ಗೀತಿ ಎಂಥಾದ್ದು ಇಲ್ಲ ಅಂದಿದ್ರು.

ಒಟ್ಟಿನಲ್ಲಿ ಟ್ರಯಾಂಗ್ಯುಲರ್ ಲವ್ ಸ್ಟೋರಿ ನೋಡಿ.. ನೋಡಿ.. ತಲೆ ಕೆರೆದುಕೊಂಡು ಯಾರ ಹೂವು ಯಾರ ಮುಡಿಗೋ ಅಂತ ಲೆಕ್ಕಾಚಾರ ಹಾಕ್ತಿದ್ದವರ ತಲೆಗೆ ಮತ್ತಷ್ಟು ಹುಳ ಬಿಟ್ಟು ಮತ್ತೊಂದು ಸುತ್ತಿನ ಯಶಸ್ಸು ಗಳಿಸೋ ಪ್ಲಾನ್ ಇರೋದಂತು  ಸತ್ಯ .

Leave a Reply