ಟಿಎಂಸಿ ನೀರು ಅಂದ್ರೇನು ಗೊತ್ತಿಲ್ಲದ ಯಡಿಯೂರಪ್ಪನವರಿಂದ ಕ್ಷುಲ್ಲಕ ಆರೋಪ: ಎಂ ಬಿ ಪಾಟೀಲ್ ತಿರುಗೇಟು

ಡಿಜಿಟಲ್ ಕನ್ನಡ ಟೀಮ್:

‘ಗಾಜಿನ ಮನೆಯಲ್ಲಿ ಕುಳಿತು ನನ್ನ ಮತ್ತು ನನ್ನ ಇಲಾಖೆಯ ಮೇಲೆ ಆರೋಪ ಹೊರಿಸಿದರೆ. ಅದಕ್ಕೆ ಪ್ರತಿಫಲವುಣ್ಣಬೇಕಾಗುತ್ತದೆ’ ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿರುಗೇಟು.

ಮಲಪ್ರಭ ನಾಲೆಯ ಕಾಮಗಾರಿಯಲ್ಲಿ ಹಗರಣ ನಡೆದಿದೆ. ನಾಲ್ಕು ನೂರು ಕೋಟಿ ಯೋಜನೆಯನ್ನು 1200 ಕೋಟಿಗೆ ಹೆಚ್ಚಿಸಲಾಗಿದೆ ಹಾಗೂ ಜಿಂದಾಲ್ ಕಂಪನಿಗೆ ಹಣಕ್ಕಾಗಿ ಏಳು ಟಿಎಂಸಿ ನೀರನ್ನು ಮಾರಿಕೊಂಡಿದ್ದಾರೆ ಎಂದು ಯಡಿಯೂರಪ್ಪನವರು ಎಂ.ಬಿ ಪಾಟೀಲ್ ಅವರ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಂಬಿ ಪಾಟೀಲ್, ಬಿಎಸ್ ವೈ ಅವರಿಗೆ ಎಚ್ಚರಿಕೆ ರವಾನಿಸಿರೋದು ಹೀಗೆ…

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗುವ ಭ್ರಮೆಯಲಿರುವ ಯಡಿಯೂರಪ್ಪ ನನ್ನ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಎಪ್ಪತ್ತೈದು ವರ್ಷ ವಯಸ್ಸಾಗಿದೆ. ಮುಂದೆ ಅವರು ಅಡ್ವಾಣಿ, ಮುರುಳಿ ಮನೋಹರ ಜೋಷಿ, ಯಶ್ವಂತ್ ಸಿನ್ಹಾ, ಜಸ್ವಂತ್ ಸಿಂಗ್ ಅವರು ಹೋದ ಜಾಗಕ್ಕೆ ಹೋಗಲಿದ್ದಾರೆ. ಹೋಗುವ ಜಾಗ ಯಾವುದು ಎಂಬುದು ಅವರ ನೆನಪಿನಲ್ಲಿರಲಿ.

ಬಿಜೆಪಿ ನಿಮ್ಮನ್ನು ಚುನಾವಣೆ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತದೆ. ಪಕ್ಷ ಅಧಿಕಾರಕ್ಕೆ ಬಂದರೂ ನಿಮಗೆ ಅಧಿಕಾರ ನೀಡುವುದಿಲ್ಲ. ಇದು ನೆನೆಪಿರಲಿ.

ಏನೂ ನಡೆಯದ ವ್ಯವಹಾರಕ್ಕೆ ಭ್ರಷ್ಟಾಚಾರದ ಹಣೆಪಟ್ಟಿ ಕಟ್ಟಲು ಹೊರಟಿದ್ದೀರಿ. ನಿಮ್ಮ ಆಡಳಿತಾವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಕಡತಗಳು ನನ್ನ ಸಮ್ಮುಖದಲ್ಲಿವೆ. ಮತ್ತೆ ನನ್ನನ್ನು ಕೆಣಕಿದರೆ, ನಿಮ್ಮ ಬಣ್ಣ ಬಯಲಾಗುತ್ತದೆ. ಅಷ್ಟು ದೊಡ್ಡ ನಾಯಕರಿಗೆ ಟಿಎಂಸಿ ಅಂದರೆ ಎಷ್ಟು ನೀರು ಎಂಬುದು ಗೊತ್ತಿಲ್ಲ ಅಂದರೆ ಅಚ್ಚರಿ ಮೂಡುತ್ತದೆ. ಜಿಂದಾಲ್ ಕಂಪನಿ ಕೇಳಿದ್ದು 0.06 ಟಿಎಂಸಿ ನೀರು ಮಾತ್ರ. ಹೀಗೆ ಬಿಡುಗಡೆ ಮಾಡುವ ನೀರಿನಲ್ಲಿ ಲಕ್ಷಾಂತರ ಜನರಿಗೆ ಕುಡಿಯುವ ನೀರು ಕೊಟ್ಟಿದ್ದೇವೆ. ಅವರಿಗೆ ಟಿಎಂಸಿ ಎಂದರೆ ಏನು ಅಂತ ಅರ್ಥವಾಗಿಲ್ಲ. ಅವರ ವಯಸ್ಸಿಗೆ ಸಹಜವಾಗಿಯೇ ಇಂತಹ ಅಸಮತೋಲನ ಬರುತ್ತದೆ. ಆದರೆ ಹಾಗಂತ ಬಾಯಿಗೆ ಬಂದಂತೆ ಮಾತನಾಡುವುದು ಅವರಿಗೆ ಗೌರವ ತರುವುದಿಲ್ಲ. ಅವರು ಹೆಚ್ಚು ಮಾತನಾಡಿದರೆ ನಾನು ಯಾರೆಂದು ತೋರಿಸುತ್ತೇನೆ.’

1 COMMENT

  1. Ide rajakiya Avaranna ivaru kenkodu ivaranna avaru kenkodu ninna na nodkotini nanna ni nodko magana nimma rajakiya jagattige gottagalla ankobedi kelavarige antu gottagirotte enu

Leave a Reply