ಫಿಲಿಪ್ಪೀನ್ಸ್ ನಲ್ಲಿ ಉಗ್ರರ ದಾಳಿ, ನಗರ ತೊರೆದ ಸಾವಿರಾರು ನಾಗರೀಕರು

ಡಿಜಿಟಲ್ ಕನ್ನಡ ಟೀಮ್:

ಉಗ್ರರ ಉಪಟಳ ದಿನೇ ದಿನೆ ಹೆಚ್ಚುತ್ತಲೇ ಇದೆ. ಮೊನ್ನೆಯಷ್ಟೇ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ಆತ್ಯಹತ್ಯಾ ಬಾಂಬ್ ದಾಳಿಯ ಬೆನ್ನಲ್ಲೇ ಈಗ ಫಿಲಿಪ್ಪೀನ್ಸ್ ಕೆಲವು ನಗರಗಳಲ್ಲಿ ಉಗ್ರರು ಪ್ರವೇಶಿಸಿದ್ದು ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದಾರೆ. ಉಗ್ರರ ಆಕ್ರಮಣದಿಂದ ಭಯಭೀತರಾಗಿ ಸಾವಿರಾರು ನಾಕರೀಕರು ಗುಂಪು ಗುಂಪಾಗಿ ಆ ಪ್ರದೇಶದಿಂದ ಪಲಾಯನ ಮಾಡಿದ್ದಾರೆ. ಈ ಕೃತ್ಯದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.

ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಭಾಗವಾಗಿರುವ ಮೌತ್ ಎಂಬ ಸಂಘಟನೆಯ ಉಗ್ರರು ಮಂಗಳವಾರ ದಾಳಿ ನಡೆಸಿ ಕೆಲವು ನಾಗರೀಕರನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ದಾಳಿ ಮಾಡಿದ ಕೆಲವೇ ಹೊತ್ತಿನಲ್ಲಿ ಉಗ್ರರು ನಗರದ ಪ್ರಮುಖ ಕಟ್ಟಡ, ಸೇತುವೆ, ಆಸ್ಪತ್ರೆ, 2 ಜೈಲು, ಚರ್ಚ್ ಹಾಗೂ ಕಾಲೇಜ್ ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಉಗ್ರರ ದಾಳಿಯ ಪರಿಣಾಮವಾಗಿ ರಷ್ಯಾ ಪ್ರವಾಸವನ್ನು ಮೊಟಕುಗೊಳಿಸಿ ವಾಪಸ್ಸಾಗಿರುವ ಅಧ್ಯಕ್ಷ ರೊಡ್ರಿಗೊ ಡ್ಯುಟರ್ಟ್, ಮರ್ವಾಯ್ ಹಾಗೂ ಮಿಂಡಾನಾವ್ ದ್ವೀಪಗಳಲ್ಲಿ ಮಿಲಿಟಲಿ ಕಾನೂನು ಜಾರಿಗೆ ತಂದಿದ್ದಾರೆ. ಈ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ರೊಡ್ರಿಗೊ, ‘ಮರ್ವಾಯ್ ನಗರ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ದ್ವೀಪ ಈ ಪ್ರದೇಶದಲ್ಲಿ ತೀವ್ರವಾದ ಹೆಚ್ಚಾಗದಂತೆ ನೋಡಿಕೊಳ್ಳಬೇಕಿದೆ. ಹೀಗಾಗಿ ಮಿಲಿಟರಿ ಕಾನೂನು ಜಾರಿಗೆ ತರಲಾಗಿದ್ದು, ಯಾವುದೇ ವ್ಯಕ್ತಿ ಗನ್ ಅಥವಾ ಇತರೆ ಶಸ್ತ್ರಾಸ್ತ್ರ ಹಿಡಿದಿದ್ದರೆ ಅಥವಾ ಹಿಂಸಾಚಾರಕ್ಕೆ ಮುಂದಾದರೆ ಅಂತಹವರನ್ನು ಸದೆಬಡಿಯಲು ಆದೇಶ ನೀಡಿದ್ದೇನೆ. ನಿಮ್ಮನ್ನು ನಿರ್ಣಾಮ ಮಾಡಬೇಕು ಎಂದು ನಾನು ನಿರ್ಧರಿಸಿದ್ದೇನೆ, ನೀವು ನಿರ್ಣಾಮವಾಗುತ್ತೀರಿ. ಕಾನೂನು ಉಲ್ಲಂಘಿಸಿದರೂ ನೀವು ಸಾಯುತ್ತೀರಿ’ ಎಂದು ಉಗ್ರರಿಗೆ ಎಚ್ಚರಿಕೆ ರವಾನಿಸಿದ್ದಾರೆ.

ಸದ್ಯ ಮಿಲಿಟರಿ ಪಡೆಗಳು ನಗರದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಈಗಾಗಲೇ ಶಾಲೆ, ಆಸ್ಪತ್ರೆ ಗಳಿಂದ 120 ಮಂದಿಯನ್ನು ಸುರಕ್ಷಿತವಾಗಿ ಕಾಪಾಟಲಾಗಿದೆ ಎಂಬ ವರದಿಗಳು ಬಂದಿವೆ.

Leave a Reply