ವಿಧಾನಸಭೆ ಕಲಾಪಕ್ಕೆ ಗೈರಾಗುತ್ತಿರುವುದಕ್ಕೆ ಅಂಬರೀಶ್ ಕೊಟ್ಟ ಕಾರಣವೇನು?

ಡಿಜಿಟಲ್ ಕನ್ನಡ ಟೀಮ್:

‘ವಿಧಾನಸಭೆಯ ಕಲಾಪದ ವೇಳೆ ಅತಿಯಾದ ಹವಾನಿಯಂತ್ರಿಣ (ಎಸಿ) ಅಳವಡಿಸಿರುವ ಕಾರಣ ಕಲಾಪದಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗುತ್ತಿಲ್ಲ…’ ಇದು ವಿಧಾನಸಭೆ ಕಲಾಪಕ್ಕೆ ಗೈರಾಗುತ್ತಿರುವ ಮಾಜಿ ಸಚಿವ ಅಂಬರೀಶ್, ಸಭಾಧ್ಯಕ್ಷರಿಗೆ ನೀಡಿರುವ ಸ್ಪಷ್ಟನೆ.

ಪದೇ ಪದೇ ಕಲಾಪಕ್ಕೆ ಗೈರು ಹಾಜರಾಗುತ್ತಿರುವ ಅಂಬರೀಶ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು, ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರು ಸಭಾಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ಮನವಿಗೆ ಮನವಿ ಸ್ಪಂದಿಸಿದ ಸಭಾಧ್ಯಕ್ಷರು ಅಂಬರೀಷ್ ಅವರಿಗೆ ವಿವರಣೆ ಕೋರಿ, ಪತ್ರ ಬರೆದಿದ್ದರು.

ಸಭಾಧ್ಯಕ್ಷರ ಪತ್ರಕ್ಕೆ ಉತ್ತರಿಸಿರುವ ಅಂಬರೀಶ್ ನೀಡಿರುವ ಸ್ಪಷ್ಟನೆ ಹೀಗಿದೆ… ‘ನನಗೆ ಅನಾರೋಗ್ಯದ ಕಾರಣ ಹೆಚ್ಚು ಕಾಲ ಎಸಿಯಲ್ಲಿ ಕೂರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಲಾಪದ ವೇಳೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಾನು ಉದ್ದೇಶಪೂರ್ವಕವಾಗಿ ಕಲಾಪಕ್ಕೆ ಗೈರು ಹಾಜರಾಗಿಲ್ಲ. ಕಳೆದ ವರ್ಷ ಸಿಂಗಾಪುರದಲ್ಲಿ ಶಸ್ತ್ರ ಚಿಕಿತ್ಸೆ ಪಡೆದಿದ್ದೆ. ನಾನು ಎಸಿಯಲ್ಲಿ ಹೆಚ್ಚು ಸಮಯ ಕೂರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನನ್ನ ಒಬ್ಬನ ಹಿತದೃಷ್ಟಿಯಿಂದ ಸದನದಲ್ಲಿ ಎಸಿಯನ್ನು ತೆಗೆದು ಹಾಕಿ ಉಳಿದ ಸದಸ್ಯರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ನಾನು ಸದನಕ್ಕೆ ಹಾಜರಾಗಿಲ್ಲ.’

Leave a Reply