ಮೋದಿಯದು ಯೂಟರ್ನ್ ಸರ್ಕಾರ- ಸಿದ್ದು ಟೀಕೆ

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ 3 ವರ್ಷಗಳ ಅವಧಿಯಲ್ಲಿ ಎಲ್ಲಾ ವಿಚಾರಗಳಲ್ಲಿ `ಯೂ ಟರ್ನ್’ ಧೋರಣೆ ಅನುಸರಿಸಿದೆ ಎಂದು ಟೀಕೆ ಮಾಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯನವರು ಹೇಳಿದಿಷ್ಟು…

‘ಆಧಾರ್, ನರೇಗಾ, ಜಿಎಸ್ ಟಿ ಯೋಜನೆಗಳನ್ನು ವಿರೋಧಿಸಿದ್ದ ಮೋದಿ, ಇದೀಗ ಅವುಗಳನ್ನೇ ಹಾಡಿ ಹೊಗಳುತ್ತಾ ಮಾತು ಬದಲಾಯಿಸಿದ್ದಾರೆ. ಅವರುದು ಯೂ ಟರ್ನ್ ಸರ್ಕಾರ. ಯುಪಿಎ ಸರ್ಕಾರ ಯೋಜನೆಗಳಾದ ನಿರ್ಮಲ್ ಭಾರತ್- ಸ್ವಚ್ಚ ಭಾರತ್, ರಾಜೀವ್ ಗಾಂಧಿ ವಿದ್ಯುದ್ದೀಕರಣ- ದೀನ್ ದಯಾಳ್ ವಿದ್ಯುದ್ದೀಕರಣ, ಇಂದಿರಾ ಅವಾಜ್- ಪ್ರಧಾನಮಂತ್ರಿ ಅವಾಜ್, ನರ್ಮ್- ಅಮೃತ್ ಇದೇ ರೀತಿ ಹೆಸರುಗಳನ್ನು ಬದಲಾವಣೆ ಮಾಡಿ, ಪ್ರಚಾರ ಪಡೆಯುತ್ತಿದ್ದಾರೆ. ಸ್ವಚ್ಚ ಭಾರತ್ ಯೋಜನೆಗೆ ಪಡೆದ ಮೈಲೇಜ್ ಹಾಗೂ ಪ್ರಚಾರ ಈ ಹಿಂದೆ ಯಾರೂ ಪಡೆದಿರಲಿಲ್ಲ. ಒಂದು ಕಡೇ 14ನೇ ಹಣಕಾಸು ಆಯೋಗದ ಅನ್ವಯ ರಾಜ್ಯಗಳಿಗೆ ಕೇಂದ್ರದ ಅನುದಾನ ನೀಡುವುದಾಗಿ ಹೇಳುತ್ತಾರೆ. ಇನ್ನೊಂದಡೆ ಕೇಂದ್ರದ ಯೋಜನೆಗಳಿಗೆ ನೀಡುತ್ತಿದ್ದ ಶೇ 75, 80, 90 ಹಣವನ್ನು ಶೇಕಡಾವಾರು 25, 30, ಹಾಗೂ 40ಕ್ಕೆ ಕಡಿತಗೊಳಿಸಿದ್ದಾರೆ.’

Leave a Reply