ಬಿಗ್ ಬಾಸ್ ಮನೆಯ ತ್ರೀಕೋನ ಪ್ರೇಮಕಥೆಗೆ ಧಾರವಾಹಿ ಸ್ಪರ್ಶ, ಇಂದಿನಿಂದ ನಿಮ್ಮ ಮುಂದೆ ‘ಸಂಜು ಮತ್ತು ನಾನು’

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಪ್ರೇಕ್ಷಕರ ಮನಗೆದ್ದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹುಟ್ಟಿಕೊಂಡಿದ್ದ ತ್ರಿಕೋನ ಪ್ರೇಮಕಥೆ ಈಗ ಧಾರಾವಾಹಿ ರೂಪ ಪಡೆದಿದ್ದು, ಇಂದಿನಿಂದ ಕಲರ್ಸ್ ಕನ್ನಡದ ಮೂಲಕ ವೀಕ್ಷಕರ ಮುಂದೆ ಬರಲಿದೆ.

ಇತ್ತೇಚೆಗೆ ನಡೆದ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಗಳಾದ ಸಂಜನಾ, ಭುವನ್ ಹಾಗೂ ಪ್ರಥಮ್ ನಡುವಣ ತ್ರಿಕೋನ ಪ್ರೇಮಕಥೆ ಜನರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿತ್ತು. ಜನರ ಈ ಕುತೂಹಲವನ್ನೇ ಇಟ್ಟುಕೊಂಡು ಅದೇ ಮೂವರಿಂದ ಧಾರಾವಾಹಿ ರೂಪಿಸಲು ಕಲರ್ಸ ಕನ್ನಡ ಮುಂದಾಗಿದೆ. ಅಂದಹಾಗೆ ಇದು ಮೇಘಾ ಧಾರಾವಾಹಿಯಲ್ಲ. ಬದಲಿಗೆ 24 ಸಂಚಿಕೆಯ ವಾರಾಂತ್ಯದ ಧಾರಾವಾಹಿ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ವರ್ಷಾನುಗಟ್ಟಲೆ ಕಥೆಯನ್ನು ಎಳೆದು ಧಾರಾವಾಹಿ ಮಾಡುತ್ತಿರುವ ಸಂದರ್ಭದಲ್ಲಿ ಅಲ್ಪಾವಧಿಯ ಅಂದರೆ 12 ವಾರಗಳ ಕಾಲ ಮಾತ್ರ ಪ್ರಸಾರವಾಗಲಿರುವ ಈ ಪ್ರೇಮಕಥೆ ಕನ್ನಡ ಕಿರುತೆರೆ ಪಾಲಿಗೆ ಹೊಸ ಪ್ರಯತ್ನವೇ ಆಗಿದೆ.

ರಿಯಾಲಿಟಿ ಶೋ ಪ್ರಸಾರ ಮಾಡುವ ಸಮಯದಲ್ಲಿ ರಿಯಾಲಿಟಿಶೋನಲ್ಲಿ ಹುಟ್ಟುಕೊಂಡ ಪ್ರೇಮಕಥೆಯನ್ನು ಜನರ ಮುಂದೆ ಮನರಂಜನೆ ಮೂಲಕ ನೀಡುವುದು ಈ ಧಾರಾವಾಹಿ ಪ್ರಯತ್ನದ ಉದ್ದೇಶ. ಸಂಜು ಮತ್ತು ನಾನು ಶಿರ್ಷಿಕೆಯಲ್ಲೇ ಕುತೂಹಲ ಹುಟ್ಟಿದೆ ಆ ನಾನು ಎಂಬುವವರು ಯಾರು? ಭುವನ್ ಅಥವಾ ಪ್ರಥಮ್? ಎಂಬ ಪ್ರೇಕ್ಷಕರ ಈ ಕುತೂಹಲವೇ ಈ ಧಾರಾವಾಹಿಯ ದೊಡ್ಡ ಅಸ್ತ್ರ.

ಈ ಧಾರಾವಾಹಿ ಬಗ್ಗೆ ಕಲರ್ಸ್ ಕನ್ನಡ ಹಾಗೂ ಸೂಪರ್ ವಾಹಿನಿಯ ವ್ಯವಹಾರ ಮುಖ್ಯಸ್ಥ ಪರಮೇಶ್ವರ್ ಗುಡ್ಕಲ್ ಅವರ ಅಭಿಪ್ರಾಯ ಹೀಗಿದೆ, ‘ನಿಗದಿತ ಕಥಾ ಸರಣಿಯ ಕಲ್ಪನೆಗಳು ಈಗಾಗಲೇ ವಿಶ್ವದ ಅನೇಕ ಭಾಗಗಳಲ್ಲಿ ಯಶಸ್ವಿಯಾಗಿವೆ. ಈ ಕಲ್ಪನೆಯನ್ನು ಸಂಜು ಮತ್ತು ನಾನು ಮೂಲಕ ಕನ್ನಡಕ್ಕೆ ತರಲಾಗುತ್ತಿದೆ. ಹೊಸ ಪ್ರಯೋಗ ಮಾಡುವಾಗ ಓನೋ ಒಂಥರಾ ಖುಷಿ. ಬಿಗ್ ಬಾಸ್ ಮನೆಯಲ್ಲಿ ಸೃಷ್ಟಿಯಾಗಿ, ವೀಕ್ಷಕರ ಕುತೂಹಲ ಕೆರಳಿಸಿದ್ದ ಸಂಜನಾ, ಭುವನ್ ಮತ್ತು ಪ್ರಥಮ್ ನಡುವಿನ ತ್ರೀಕೋನ ಪ್ರೇಮಕತೆಯನ್ನು ಹೊಸ ಪ್ರಯತ್ನದ ಮೂಲಕ ಕಿರುತೆರೆ ಮೇಲೆ ತರಲಾಗುತ್ತಿದೆ. ವೀಕ್ಷಕರು ಈ ಹೊಸ ಪ್ರಯತ್ನ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ.’

Leave a Reply