ಪ್ರವಾಹಕ್ಕೆ ತತ್ತರಿಸಿದ ಶ್ರೀಲಂಕಾ, ನೆರವಿಗೆ ಧಾವಿಸಿದ ಭಾರತ

ಡಿಜಿಟಲ್ ಕನ್ನಡ ಟೀಮ್:

ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾ ಪ್ರವಾಹಕ್ಕೆ ತ್ತತ್ತರಿಸಿದೆ. 2003ರಿಂದೀಚೆಗೆ ಎದುರಾಗಿರುವ ಭೀಕರ ಪ್ರವಾಹಕ್ಕೆ ಈಗಾಗಲೇ 100 ಮಂದಿ ಮೃತಪಟ್ಟಿದ್ದಾರೆ. ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನರಳುತ್ತಿರುವ ಲಂಕಾ ನೆರವಿಗೆ ಭಾರತ ಧಾವಿಸಿದೆ.

ಭಾರತೀಯ ನೌಕಾ ಪಡೆ ಈಗಾಗಲೇ ಲಂಕನ್ನರ ನೆರವಿಗಾಗಿ ತೆರಳಿದ್ದು, ಮೊದಲ ಹಡಗು ಈಗಾಗಲೇ ಕೊಲಂಬೊ ತಲುಪಿಗೆ. ಇನ್ನು ಎರಡನೇ ಹಡಗು ಭಾನುವಾರ ತಲುಪಲಿದೆ. ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ ಪ್ರಕಾರ ಲಂಕಾದ ಕಡಲತೀರ ಪ್ರದೇಶಗಳಲ್ಲಿ ಮತ್ತಷ್ಟು ಧಾರಾಕಾರ ಮಳೆಯಾಗಲಿದೆ. ಶ್ರೀಲಂಕಾದ ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ ಪ್ರವಾಸದ ತೀವ್ರತೆ ಹೆಚ್ಚಾಗಿರುವ ಪರಿಣಾಮ ಸುಮಾರು 52,603 ಕುಟುಂಬಗಳ 2 ಲಕ್ಷಕ್ಕೂ ಹೆಚ್ಚಿನ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 100 ಮಂದಿ ಸತ್ತಿರುವುದರ ಜತೆಗೆ 99 ಮಂದಿ ಕಾಣೆಯಾಗಿರುವುದಾಗಿ ವರದಿಗಳು ಬಂದಿವೆ. ಈ ವಿಪತ್ತು ಕಾರ್ಯದಲ್ಲಿ ಸುಮಾರು 1000ಕ್ಕೂ ಹೆಚ್ಚು ಮಂದಿ ಸೈನಿಕರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಸಂತ್ರಸ್ತರ ಜನರ ನೆರವಿಗಾಗಿ ನೆರೆಯ ರಾಷ್ಟ್ರಗಳಿಗೆ ಸಹಾಯ ಬೇಡಿದ್ದು, ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಲಹಾ ಗುಂಪಿಗೂ ಸಹಾಯ ಮಾಡುವಂತೆ ಕೋರಿದೆ. ಶ್ರೀಲಂಕಾದ ಮನವಿಗೆ ತಕ್ಷಣವೇ ಸ್ಪಂಧಿಸಿರುವ ಭಾರತ, ರಕ್ಷಣಾ ಕಾರ್ಯಕ್ಕೆ ನೆರವಾಗಲು ಐಎನ್ಎಸ್ ಕಿರ್ಚ್ ಸೇರಿದಂತೆ ನೌಕಾ ಸೇನೆಯ ಮೂರು ಹಡಗುಗಳನ್ನು ಕಳುಹಿಸಿದೆ.

Leave a Reply