ಜಿಎಸ್ಟಿ ಜಾರಿಗೆ ಹೊಟೇಲ್ ಮಾಲೀಕರ ವಿರೋಧ, ಮೇ 30 ಹೊಟೇಲ್- ಲಾಡ್ಜ್ ಗಳು ಬಂದ್

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸರ್ಕಾರ ವಿಧಿಸಲು ಮುಂದಾಗಿರುವ ಜಿಎಸ್ಟಿ ತೆರಿಗೆ ನೀತಿ ವಿರೋಧಿಸಿ ಮೇ 30ರಂದು ಹೊಟೇಲ್ ಗಳು ಹಾಗೂ ಲಾಡ್ಜ್ ಗಳು ಸಂಪೂರ್ಣ ಬಂದ್ ಆಚರಿಸುತ್ತಿವೆ. ಈ ಬಗ್ಗೆ ಹೊಟೇಲ್ ಗಳ ಸಂಘ ಅಧಿಕೃತ ಹೇಳಿಕೆ ನೀಡಿದೆ.

‘ಜಿಎಸ್ಟಿ ತೆರಿಗೆ ಜಾರಿಯಿಂದ ಗ್ರಾಹಕರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ. ಹೊಟೇಲ್ ಮತ್ತು ರೆಸ್ಟೊರೆಂಟ್ ಗಳಲ್ಲಿ ₹ 100 ಬಿಲ್ ಗೆ ಗ್ರಾಹಕರು ಹೆಚ್ಚುವರಿಯಾಗಿ ₹ 12 ಪಾವತಿಸಬೇಕಿದೆ. ಪಾರ್ಸಲ್ ಪಡೆಯುವವರು ₹ 18 ಹೆಚ್ಚುವರಿ ಹಣ ಕೊಡಬೇಕು. ಇದು ಜನಸಾಮಾನ್ಯರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೊಟೇಲ್ ಗೆ ಆಗಮಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಈ ವಲಯಕ್ಕೆ ವಿನಾಯಿತಿ ನೀಡಿಲ್ಲ. ಆದರೆ ಲಾಡ್ಜ್ಗಳಿಗೆ ತೆರಿಗೆಯಲ್ಲಿ ಸ್ವಲ್ಪ ವಿನಾಯಿತಿ ನೀಡಿದ್ದು, ಅಲ್ಲಿಗೆ ಬರುವ ಗ್ರಾಹಕರ ಸಂಖ್ಯೆ ತೀರಾ ಕಡಿಮೆ ಇದೆ. ತೆರಿಗೆ ಜಾರಿಗೂ ಮೊದಲೇ ಕೇಂದ್ರ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿದರೂ ಪರಿಗಣಿಸಿಲ್ಲ’ ಎಂಬುದು ಇವರ ದೂರು.

Leave a Reply