ಸಿಬಿಎಸ್ಸಿ 12ನೇ ತರಗತಿ ಫಲಿತಾಂಶ ಪ್ರಕಟ, ಅಗ್ರ ಮೂರು ಸ್ಥಾನಗಳಲ್ಲಿ ತಿರುವನಂತಪುರ- ಚೆನ್ನೈ- ದೆಹಲಿ

ಡಿಜಿಟಲ್ ಕನ್ನಡ ಟೀಮ್:

ಸಿಬಿಎಸ್ಸಿಯ 12ನೇ ತರಗತಿಯ ಪರೀಕ್ಷೆಯ ಫಲಿತಾಂಶವನ್ನು ಭಾನುವಾರ ಪ್ರಕಟಿಸಲಾಗಿದ್ದು, ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ಈ ಬಾರಿಯ ಫಲಿತಾಂಶದಲ್ಲಿ ಶೇ.1.03ರಷ್ಟು ಕುಸಿತವಾಗಿದೆ.

ಈ ವರ್ಷ ಸುಮಾರು 10,673 ಶಾಲೆಗಳಿಂದ 10,76,761 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ನೊಯಿಡಾ ಮೂಲದ ರಕ್ಷಾ ಗೋಪಾಲ್ ಎಂಬ ವಿದ್ಯಾರ್ಥಿನಿ ಶೇ.99.6 ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆದಿದ್ದಾಳೆ. ಇನ್ನು ತಿರುವನಂತಪುರ, ಚೆನ್ನೈ ಮತ್ತು ದೆಹಲಿ ವಲಯವಾರು ವಿಭಾಗದಲ್ಲಿ ಅತಿ ಹೆಚ್ಚು ಫಲಿತಾಂಶ ಪಡೆದಿವೆ. ತಿರುವನಂತಪುರ ಶೇ.95.62, ಚೆನ್ನೈ ಶೇ.92.60 ಮತ್ತು ದೆಹಲಿ ಶೇ.88.37 ರಷ್ಟು ಫಲಿತಾಂಶ ಪಡೆದಿವೆ. ಇನ್ನು ಬಾಲಕ ಮತ್ತು ಬಾಲಕಿಯರ ನಡುವಣ ಶೇಕಡಾವಾರು ಫಲಿತಾಂಶ ನೋಡುವುದಾದರೆ, ಬಾಲಕಿಯರು ಶೇ.87.6 ಮೇಲುಗೈ ಸಾಧಿಸಿದ್ದು, ಬಾಲಕರು ಶೇ.78 ರಷ್ಟು ಫಲಿತಾಶ ಪಡೆದಿದ್ದಾರೆ.

ಸಿಬಿಎಸ್ಸಿ ಫಲಿತಾಂಶ ಬಿಡುಗಡೆಯಾಗಿರುವುದರಿಂದ ಈಗಾಗಗಲೇ ಮುಂದೂಡಲ್ಪಟ್ಟಿರುವ ಸಿಇಟಿ ಫಲಿತಾಂಶ ಮೇ 30ರಂದು ಪ್ರಕಟವಾಗುವುದು ಸ್ಪಷ್ಟವಾಗಿದೆ.

 

Leave a Reply