ಸಿಇಟಿ ಫಲಿತಾಂಶ ಪ್ರಕಟ, ಮಂಗಳೂರಿನ ಪ್ರತೀಕ್ ನಾಯಕ್ ಅಗ್ರಸ್ಥಾನ

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿ ಪ್ರತೀಕ್ ನಾಯಕ್ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದಾರೆ. ಮಂಗಳವಾರ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.

ಪ್ರತೀಕ್ ನಾಯಕ್ ನಂತರದ ಸ್ಥಾನದಲ್ಲಿ ಬೆಂಗಳೂರಿನ ಬಸವೇಶ್ವರ ನಗರದ ವಿವಿಎಸ್ ಸರ್ದಾರ್ ಪಟೇಲ್ ಕಾಲೇಜು ವಿದ್ಯಾರ್ಥಿ ಸುಮಂತ್ ಹೆಗಡೆ ಹಾಗೂ ಬೆಂಗಳೂರಿನ ಆರ್.ವಿ ಕಾಲೇಜು ವಿದ್ಯಾರ್ಥಿ ಅನಿರುದ್ಧ ತೃತೀಯ ಸ್ಥಾನ ಪಡೆದಿದ್ದಾರೆ. ಹೊಮಿಯೋಪತಿ ವಿಭಾಗದಲ್ಲಿ ಬೆಂಗಳೂರಿನ ಜೈನ್ ಕಾಲೇಜಿನ ರಕ್ಷಿತಾ ರಮೇಶ್ ಅಗ್ರಸ್ಥಾನ ಪಡೆದಿದ್ದಾರೆ. ಇದೇ ತಿಂಗಳು 3 ಮತ್ತು 4ರಂದು ನಡೆದ ಸಿಇಟಿ ಪರೀಕ್ಷೆಯಲ್ಲಿ 94,415 ವಿದ್ಯಾರ್ಥಿಗಳು ಹಾಗೂ 90,996 ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಹಾಜರಾಗಿದ್ದರು. ವಿವಿಧ ವಿಭಾಗಗಳ ಅಗ್ರ ಮೂವರು ಸ್ಥಾನ ಪಡೆದವರ ಪಟ್ಟಿ ಹೀಗಿದೆ…

ಬಿಎಸ್ಸಿ ಕೃಷಿ ವಿಭಾಗದಲ್ಲಿ  ಪ್ರಥಮ: ಬೆಂಗಳೂರಿನ ಮಹಾವೀರ್ ಜೈನ್ ಪಿಯು ಕಾಲೇಜಿನ ರಕ್ಷಿತಾ ರಮೇಶ್, ದ್ವಿತೀಯ- ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲಿನ ಸಂಕೀರ್ತ್ ಸದಾನಂದ್, ತೃತೀಯ- ಬೆಂಗಳೂರಿನ ಎಸ್.ವಿ.ಮಹಾವೀರ್ ಜೈನ್ ಕಾಲೇಜಿನ ಅನನ್ಯ ಬಿ.ಸಿ.

ಭಾರತೀಯ ವೈದ್ಯ ಪದ್ಧತಿಯಲ್ಲಿ  ಪ್ರಥಮ: ಬೆಂಗಳೂರಿನ ಮಹಾವೀರಜೈನ್ ಕಾಲೇಜಿನ ರಕ್ಷಿತಾ ರಮೇಶ್, ದ್ವಿತೀಯ- ದಾವಣಗೆರೆಯ ವೈಷ್ಣವಿ ಚೇತನ್ ಪಿಯು ಕಾಲೇಜಿನ ವಿಕ್ಟರ್ ಥಾಮಸ್, ತೃತೀಯ- ಬೀದರ್ ನ ಶಹೀನ್ ಸ್ವತಂತ್ರ  ಪದವಿ ಪೂರ್ವ ಕಾಲೇಜಿನ ನಾಸಿರ್ ಹುಸೇನ್.

ಪಶು ವೈದ್ಯಕೀಯ ವಿಭಾಗದಲ್ಲಿ  ಪ್ರಥಮ: ದಾವಣಗೆರೆಯ ವೈಷ್ಣವಿ ಚೇತನ್ ಪಿಯು ಕಾಲೇಜಿನ ವಿಕ್ಟರ್ ಥಾಮಸ್.ವಿ, ದ್ವಿತೀಯ- ಬೆಂಗಳೂರಿನ ಮಹಾವೀರಜೈನ್ ಕಾಲೇಜಿನ ರಕ್ಷಿತಾ ರಮೇಶ್, ತೃತೀಯ- ಮಂಗಳೂರಿನ  ಆಳ್ವಾಸ್ ಪಿಯು ಕಾಲೇಜಿನ ಭರತ್ ಕುಮಾರ್.

ಔಷಧಿ ವಿಜ್ಞಾನ (ಫಾರ್ಮಸಿ) ವಿಭಾಗದಲ್ಲಿ ಪ್ರಥಮ: ಮಂಗಳೂರಿನ ಎಕ್ಸ ಪರ್ಟ್ ಪಿಯು ಕಾಲೇಜಿನ ಪ್ರತೀಕ್  ಎಸ್.ನಾಯಕ್, ದ್ವಿತೀಯ- ಬೆಂಗಳೂರಿನ ವಿವಿಎಸ್ ಸರ್ದಾರ್ ಪಾಟೀಲ್ ಕಾಲೇಜಿನ ಸುಮಂತ್ ಆರ್.ಹೆಗಡೆ, ತೃತೀಯ- ಬೆಂಗಳೂರಿನ ಕನಕಪುರ ರಸ್ತೆಯ ದೀಕ್ಷಾ ಸಿಎಎಫ್ಎಲ್ ಪಿಯು ಕಾಲೇಜಿನ ದೃವಶ್ರೀರಾಮ.

Leave a Reply