ರಂಜಾನ್ ಕಾರಣಕೊಟ್ಟು ಮುಸ್ಲಿಂಮೇತರ ವಿದ್ಯಾರ್ಥಿಗಳನ್ನು ಉಪವಾಸ ಕೆಡವಿದ ಅಲಿಘರ್ ಮುಸ್ಲಿಂ ವಿವಿ

ಡಿಜಿಟಲ್ ಕನ್ನಡ ಟೀಮ್:

ಉತ್ತರ ಪ್ರದೇಶದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಇಸ್ಲಾಮೇತರ ವಿದ್ಯಾರ್ಥಿಗಳಿಗೆ ಬಲವಂತವಾಗಿ ಉಪವಾಸ ಕೆಡವಲಾಗುತ್ತಿದೆ. ಇದಕ್ಕೆ ವಿಶ್ವವಿದ್ಯಾಲಯದವರು ನೀಡುತ್ತಿರುವ ಕಾರಣ, ಇಸ್ಲಾಂ ಸಮುದಾಯದವರಿಗೆ ಪವಿತ್ರ ರಂಜಾನ್ ತಿಂಗಳು ಆಚರಣೆ.

ಹೌದು ರಂಜಾನ್ ತಿಂಗಳು ನಡೆಯುತ್ತಿರುವ ಸಂದರ್ಭದಲ್ಲಿ ಈ ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟವನ್ನು ನೀಡುತ್ತಿಲ್ಲ. ಇದರಿಂದ ಇತರೆ ಧರ್ಮ ಹಾಗೂ ಸಮುದಾಯದ ವಿದ್ಯಾರ್ಥಿಗಳು ಹಗಲಿನಲ್ಲಿ ಹಸಿದುಕೊಂಡಿರಬೇಕಾದ ಪರಿಸ್ಥಿತಿ ಎದುರಾಗಿದೆ. ಈ ವಿಷಯ ಸಾಮಾಜಿಕ ಜಾಲ ತಾಣ ಟ್ವಿಟರ್ ನಲ್ಲಿ ಪ್ರಕಟವಾಗುತ್ತಿದ್ದಂತೆ ವ್ಯಾಪಕವಾದ ಟೀಕೆಗಳು ವ್ಯಕ್ತವಾಗಿವೆ.

ಕೇಂದ್ರ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಹಾಸ್ಟೆಲ್ ನ ಕ್ಯಾಂಟೀನ್ ಸಮಯವನ್ನು ಬದಲಿಸಲು ಅನುಮತಿ ನೀಡಿದ್ದೇಕೆ? ಒಂದು ಸಮುದಾಯದವರ ಆಚರಣೆ ಅನುಗುಣವಾಗಿ ನಡೆದುಕೊಳ್ಳುತ್ತಿರುವುದೇಕೆ? ಎಂದು ಪ್ರಶ್ನಿಸಲಾಗಿದೆ. ವಿವಿಯ ಈ ತೀರ್ಮಾನದಿಂದ ಇತರೆ ಧರ್ಮಿಯರಿಗೆ ಆಹಾರ ನೀಡದಿರುವುದು ಜಾತ್ಯತೀತತೆ ಮಾಯಾವಾಗಿದೆ ಎಂದು ಟೀಕಿಸಲಾಗಿದೆ.

ವಿವಿಯ ತೀರ್ಮಾನವನ್ನು ವಿರೋಧಿಸುವ ಟ್ವೀಟ್ ಗಳು ಹೀಗಿವೆ…

  • ರಾಣಾ ಸಾಫ್ವಿ: ಗಲ್ಫ್ ದೇಶಗಳಲ್ಲಿ ರಂಜಾನ್ ತಿಂಗಳ ವೇಳೆ ರೋಜಾ ಸಮಯದಲ್ಲಿ ಸಾರ್ವಜನಿಕವಾಗಿ ಊಟ, ಆಹಾರ ದೊರೆಯುವುದಿಲ್ಲ. ಎಲ್ಲ ಹೊಟೇಲ್, ಅಂಗಡಿಗಳು ಮುಚ್ಚಿರುತ್ತವೆ. ಹೀಗಿದ್ದರೂ ಅಲ್ಲಿರುವ ಲಕ್ಷಾಂತರ ಇಸ್ಲಾಮೇತರ ನೌಕರರಿಗೆ ಊಟಕ್ಕೆ ತೊಂದರೆಯಾಗುವುದಿಲ್ಲ. ಆದರೆ ಈ ವಿಶ್ವವಿದ್ಯಾಲಯದಲ್ಲಿ ಯಾಕೆ ತೊಂದರೆ ನೀಡಲಾಗುತ್ತಿದೆ.?
  • ಪ್ರೊ.ರಾಕೇಶ್ ಸಿನ್ಹಾ: ಅಲಿಘರ್ ವಿಶ್ವವಿದ್ಯಾಲಯದಲ್ಲಿ ಇತರೆ ಧರ್ಮಿಯರಿಗೆ ಸಮಯಕ್ಕೆ ಸರಿಯಾಗಿ ಊಟ ಮಾಡುವ ಕನಿಷ್ಠ ಹಕ್ಕು ಇಲ್ಲವೇ? ಈ ಬಗ್ಗೆ ಯಾರು ಏಕೆ ಮಾತನಾಡುತ್ತಿಲ್ಲ?

ಈ ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಿರುವ ಮಾಹಿತಿಯಲ್ಲಿ, ‘ರಂಜಾನ್ ತಿಂಗಳ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಎಲ್ಲಾ ಬೋಧಕ ಮತ್ತು ಬೋಧಕೇತರ ಚಟುವಟಿಗೆಗಳ ವೇಳಾಪಟ್ಟಿಯನ್ನು ಉಪ ಕುಲಪತಿಗಳ ಒಪ್ಪಿಗೆ ಆಧಾರದ ಮೇಲೆ ಬದಲಿಸಲಾಗಿದೆ’ ಎಂದು ತಿಳಿಸಿದೆ.

Leave a Reply