ಯಶಸ್ವಿಯಾಯ್ತಂತೆ ರಷ್ಯಾದ ಶಬ್ದಾತೀತ ವೇಗದ ಕ್ಷಿಪಣಿ ಪರೀಕ್ಷೆ, ಪಾಶ್ಚಿಮಾತ್ಯ ರಾಷ್ಟ್ರಗಳ ಮಿಲಿಟರಿಯನ್ನು ಮೂಲೆಗುಂಪಾಗಿಸುವ ಈ ಕ್ಷಿಪಣಿ ವಿಶೇಷತೆ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಪಾಶ್ಚಿಮಾತ್ಯ ರಾಷ್ಟ್ರಗಳ ಕ್ಷಿಪಣಿಗಿಂತ ಶಕ್ತಿಶಾಲಿಯಾಗಿರುವ ಶಬ್ದಾತೀತ ವೇಗದ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ್ದೇವೆ ಎಂದು ರಷ್ಯಾ ಪ್ರಕಟಿಸಿದೆ. ಒಂದು ವೇಳೆ ರಷ್ಯಾ ಈ ಕ್ಷಿಪಣಿಯ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವುದು ನಿಜವೇ ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳ ಮಿಲಿಟರಿ ಬಲವನ್ನೇ ಮೂಲೆಗುಂಪಾಗಿಸಲಿದೆ ಎನ್ನುತ್ತಿದ್ದಾರೆ ಮಿಲಿಟರಿ ತಜ್ಞರು.

ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ನೀಡಿರುವ ವರದಿಯಲ್ಲಿ ಈ ಅಂಶ ಪ್ರಕಟವಾಗಿದ್ದು, ‘ಜಿರ್ಕಾನ್’ ಎಂಬ ಈ ಕ್ಷಿಪಣಿ ಮುಂದಿನ ವರ್ಷದಿಂದ ಬಳಕೆಗೆ ಲಭ್ಯವಾಲಿದೆ. ಈ ಕ್ಷಿಪಣಿಯ ಪರಿಕ್ಷಾರ್ಥ ಉಡಾವಣೆಯನ್ನು 2018ರಲ್ಲಿ ನಡೆಸಲು ರಷ್ಯಾ ನಿರ್ಧರಿಸಿತ್ತು. ಆದರೆ ನಿಗದಿತ ಅವಧಿಗೂ ಒಂದು ವರ್ಷ ಮುನ್ನವೇ ಸದ್ದಿಲ್ಲದೇ ರಷ್ಯಾ ಈ ಕ್ಷಿಪಣಿಯ ಪರೀಕ್ಷೆ ನಡೆಸಿಬಿಟ್ಟಿದೆ. ಈ ಕ್ಷಿಪಣಿಯನ್ನು ರಷ್ಯಾದ ಪ್ಯೊಟರ್ ವೆಲಿಕಿ ಎಂಬ ಅಣ್ವಸ್ತ್ರ ಕ್ಷಿಪಣಿ ಉಡಾವಣಾ ಹಡಗಿನಲ್ಲಿ ಬಳಸಲು ನಿರ್ಧರಿಸಲಾಗಿದೆ. ಈ ಕ್ಷಿಪಣಿಯ ವಿಶೇಷತೆ ಏನೆಂದರೆ, ಈ ಕ್ಷಿಪಣಿಯ ವೇಗವನ್ನು ಎದುರಾಳಿಗಳು ಅಳೆದು ಅದಕ್ಕೆ ತಕ್ಕ ಪ್ರತ್ಯಸ್ತ ಹೂಡುವುದು ಕಷ್ಟ. ಕಾರಣ, ಇದು ಪ್ರತಿ ಗಂಟೆಗೆ 46,000 ಮೈಲುಗಳ ವೇಗದಲ್ಲಿ ಸಾಗಲಿದೆ. ಇದು ಶಬ್ದದ ವೇಗಕ್ಕಿಂತ 66 ಪಟ್ಟು ಹೆಚ್ಚಿನ ವೇಗದ್ದಾಗಿದೆ.

Leave a Reply