ಗಾಂಧಿ ಟೋಪಿಯಿಂದ ಕಾಂಡೊಮ್ ವರೆಗೂ ಜಿಎಸ್ಟಿಯಲ್ಲಿ ತೆರಿಗೆ ವಿನಾಯಿತಿ ಪಡೆದ ವಸ್ತುಗಳಾವುವು ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಕಳೆದ ಶನಿವಾರವಷ್ಟೇ ಸರಕು ಮತ್ತು ಸೇವಾ ತೆರಿಗೆ ಸಮಿತಿ (ಜಿಎಸ್ಟಿ ಸಮಿತಿ) ತೆರಿಗೆ ವಿನಾಯಿತಿ ಪಡೆಯಲಿರುವ ಪದಾರ್ಥಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಗಾಂಧಿ ಟೋಪಿಯಿಂದ ಹಿಡಿದು ನಿರೋಧ್ ವರೆಗೂ ಅನೇಕ ಮೂಲಭೂತ ಸಾಮಾಗ್ರಿಗಳಿಗೆ ಕೇಂದ್ರ ಸರ್ಕಾರ ವಿನಾಯಿತಿ ನೀಡಿದೆ.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಅವರ ಸಚಿವಾಲಯದ ತಂಡ ಹಲವು ತಿಂಗಳುಗಳಿಂದ ಜಿಎಸ್ಟಿ ಪದ್ಧತಿ ಜಾರಿಗೆ ತರಲೇಬೇಕೆಂಬ ಪಣತೊಟ್ಟು ಸಕಲ ತಯಾರಿ ನಡೆಸುತ್ತಿದ್ದು, ಬಹುತೇಕ ಎಲ್ಲ ಸರಕು ಮತ್ತು ಸೇವೆಗಳನ್ನು ಶೇ. 5, 12, 18 ಹಾಗೂ 28 ರಷ್ಟು ತೆರಿಗೆ ವ್ಯಾಪ್ತಿಗೆ ಸೇರಿಸಿದೆ. ವ್ಯಕ್ತಿ, ಸಂಸ್ಥೆ ಹಾಗೂ ಅಧಿಕಾರಿಗಳಿಗೆ ಅಗತ್ಯವಾಗಿರುವ ಕೆಲವು ಮೂಲಭೂತ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಿದ್ದು, ಆ ವಸ್ತುಗಳು ಹೀಗಿವೆ…

ಗಾಂಧಿ ಟೋಪಿ ಜತೆಗೆ ಭಾರತದ ಧ್ವಜ, ಖಾದಿ ನೂಲುಗಳು. ಪೂಜಾ ಸಾಮಾಗ್ರಿಗಳಾದ ರುದ್ರಾಕ್ಷಿ, ಪವಿತ್ರ ದಾರ ಅಥವಾ ತಾಯತ, ಮಣ್ಣಿನ ಮಡಿಕೆ. ಮಹಿಳೆಯರು ಬಳಸುವ ಕುಂಕುಮ, ಬಿಂದಿ, ಸಿಂಧೂರ, ಸುರಕ್ಷಿತ ಲೈಂಗಿಕತೆಗೆ ಅಗತ್ಯವಾಗಿರುವ ನಿರೋಧ್, ಗರ್ಭನಿರೋಧಕಗಳು. ಮಾಹಿತಿ ಹಾಗೂ ಜ್ಞಾನ ವೃದ್ಧಿಗೆ ಅಗತ್ಯವಿರುವ ಮುದ್ರಿತ ಪುಸ್ತಕ, ದಿನಪತ್ರಿಕೆಗಳು, ಕೈ ಮಗ್ಗ ವಸ್ತುಗಳು, ಆಹಾರ ಪದಾರ್ಥಗಳಾದ ತಾಜಾ ತರಕಾರಿಗಳು ಹಾಗೂ ಹಣ್ಣುಗಳು.

ಈ ಎಲ್ಲ ಪದಾರ್ಥಗಳನ್ನು ಕೊಳ್ಳುವಾಗ ನೀವು ತೆರಿಗೆ ಕಟ್ಟುವಂತಿಲ್ಲ. ಈ ಪದಾರ್ಥಗಳನ್ನು ಹೊರತುಪಡಿಸಿ ಉಳಿದ ಯಾವುದೇ ಪದಾರ್ಥ ಅಥವಾ ವಸ್ತುವನ್ನು ನೀವು ಕೊಂಡರೆ ಅವುಗಳಿಗೆ ಈ ಮೇಲೆ ನಿಗದಿ ಪಡೆಸಿರುವಷ್ಟು ತೆರಿಗೆಯನ್ನು ಕಟ್ಟಬೇಕಿದೆ.

Leave a Reply