“ಸಂಜು ಮತ್ತು ನಾನು” ನಲ್ಲಿ ಪ್ರಥಮ್ -ಭುವನ್ ಮಧ್ಯೆ ಬರುವ ‘ಅವನು’ ಯಾರು ?

ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ನಿಗದಿತ ಕಂತುಗಳ ಸಂಜು ಮತ್ತು ನಾನು ವಾರಾಂತ್ಯದ ಕತೆಯಲ್ಲಿ ತಿರುವು ಕಾಣಿಸಲಿದೆ. ಇಲ್ಲಿಯವರೆಗೂ ಸಂಜನಾ ಮತ್ತು ಭುವನ್ ಪ್ರೀತಿಗೆ ಅಡ್ಡಿಯೊಡ್ಡುತ್ತಿರುವುದೇ ಪ್ರಥಮ್, ಎಂದುಕೊಂಡಿದ್ದವರಿಗೆ ಉತ್ತರವೇ ಬೇರೆ ಇದೆ.

ಈ ವಾರ ಜೂನ್ 10ರಂದು ರಾತ್ರಿ 9 ಗಂಟೆಗೆ ಮೂಡಿಬರುವ ಸಂಚಿಕೆಯಲ್ಲಿ ಸಂಜನಾಳನ್ನು ಕಾಡುತ್ತಿರುವ ವ್ಯಕ್ತಿ ಪ್ರಥಮ್ ಅಲ್ಲ ಕಾರ್ತಿಕ್ ಎಂದು ತಿಳಿಯುತ್ತದೆ. ಹಾಗಾದ್ರೆ ಈ ಕಾರ್ತಿಕ್ ಯಾರು? ಕಾರ್ತಿಕ್ ಗೆ ತನ್ನ ಕಾಲೇಜ್ ದಿನಗಳಿಂದಲೂ ಸಂಜನಾಳ ಮೇಲೆಎಲ್ಲಿಲ್ಲದ ಪ್ರೀತಿ. ಕಾರ್ತಿಕ್‍ನಿಗೆ ಫಸ್ಟ್ ಲವ್ ಆಗಿದ್ದು ಸಂಜನಾ ಮೇಲೆ. ಇಂದಿಗೂ ಅವನ ಕನಸಿನ ರಾಣಿ ಅವಳು.

ಕಾರ್ತಿಕ್‍ಗೆ ಭುವನ್ ಮತ್ತು ಪ್ರಥಮ್ ಮೇಲೆ ಯಾವುದೇ ರೀತಿ ದ್ವೇಷ, ಅಸೂಯೆ ಇಲ್ಲ. ಭುವನ್, ಪ್ರಥಮ್ ಸಂಜನಾಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಅಭಿಪ್ರಾಯ ಕಾರ್ತಿಕನದ್ದು. ತನ್ನ ಪ್ರೀತಿಯ ಹುಡುಗಿ ಸಂಜನಾಳನ್ನು ವರಿಸಲು ಯಾರೇ ಪ್ರಯತ್ನಿಸಿದರೂ ಅವರು ಅವಳಿಗೆ ತೊಂದರೆ ಕೊಡುತ್ತಿದ್ದಾರೆ ಎಂತಲೇ ತಿಳಿಯುತ್ತಾನೆ ಅವರನ್ನು ನಾಶ ಮಾಡುವುದೇ ಅವನ ಉದ್ದೇಶ.

ಸಂಜನಾ ಮತ್ತು ಕಾರ್ತಿಕ್ ಭೇಟಿಯಾಗುತ್ತಾರಾ?

ಹೌದು. ಸಂಜನಾ ಮತ್ತು ಕಾರ್ತಿಕ್ ಒಬ್ಬರಿಗೊಬ್ಬರು ಭೇಟಿಯಾಗುತ್ತಾರೆ ಆದ್ರೆ ಕಾರ್ತಿಕ್‍ನನ್ನು ಸಂಜನಾ ಗುರುತು ಹಿಡಿಯುವುದಿಲ್ಲ. ಅವರು ಮಾತನಾಡುತ್ತಾ ಮೊದಲಿನ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಆದ್ರೆ ಸಂಜನಾಳಿಗೆ ಕಾರ್ತಿಕ್‍ನಷ್ಟು ನೆನಪು ಮರುಕಳಿಸದಿದ್ದರು ಅವನ ಕಂಪನಿ ಎಂಜಾಯ್ ಮಾಡ್ತಾಳೆ ಸಂಜನಾ. ನಿಜವಾಗಿಯೂ ಕಾರ್ತಿಕ್ ಯಾರು ಎಂದು ಯಾಕೆ ಸಂಜನಾಳಿಗೆ ತಿಳಿಯುವುದೇ ಇಲ್ಲ? ಎನ್ನುವುದೇ ಮುಂದಿನ ಸಂಚಿಕೆಗೆ ಮತ್ತೆ ಕುತೂಹಲ ಹುಟ್ಟಿಸುತ್ತೆ.

Leave a Reply