ಡ್ರಗ್ಸ್ ಜಾಲದಲ್ಲಿ ಸೆರೆಸಿಕ್ಕವ ಸಮಾಜವಾದಿ ಶಾಸಕನ ಸಂಬಂಧಿ!

(ಸಮಾಜವಾದಿ ಶಾಸಕ ಅಬು ಅಜ್ಮಿ)

ಡಿಜಿಟಲ್ ಕನ್ನಡ ಟೀಮ್

ದೇಶದ ತಥಾಕಥಿತ ಸೆಕ್ಯುಲರ್ ಬ್ರಿಗೇಡ್ ಸಂಕಟದಲ್ಲಿರುವುದು ಹೌದು. ಲಾಲು ಆಸ್ತಿಗಳ ತಪಾಸಣೆ, ಎನ್ಡಿಟಿವಿ ಮಾಲೀಕರ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ದಾಳಿ, ಸೋನಿಯಾ-ರಾಹುಲ್ ಸುತ್ತ ಸುತ್ತಿಕೊಳ್ಳುತ್ತಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣ… ಇಂಥ ದೊಡ್ಡ ದೊಡ್ಡ ವಿದ್ಯಮಾನಗಳಿಗೆ ಕೆಲವು ಚಿಕ್ಕ ಪ್ರಕರಣಗಳೂ ಸೇರಿಕೊಳ್ಳುತ್ತಿವೆ.

ಬುಧವಾರ ದೆಹಲಿಯ ಸ್ಪೆಷಲ್ ಪೊಲೀಸ್ ವಿಭಾಗವು ಅಂತಾರಾಷ್ಟ್ರೀಯ ಮಾದಕ ವಹಿವಾಟು ಜಾಲವೊಂದನ್ನು ಭೇದಿಸಿದೆ. ಇದರಲ್ಲಿ ಅಬು ಅಸ್ಲಮ್ ಕಾಸಿಂ ಅಜ್ಮಿ ಎಂಬಾತನ ಬಂಧನವಾಗಿದೆ. ಈತ ಸಮಾಜವಾದಿ ಶಾಸಕ ಅಬು ಅಜ್ಮಿಯ ಸಂಬಂಧಿ ಎಂಬುದು ಗಮನಿಸಬೇಕಾದ ವಿಚಾರ. ಈತನ ಜತೆ ಬಂಧಿಸಲಾದ ಇನ್ನೂ ಮೂವರಿಂದ ಸೇರಿ ₹40 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಬು ಅಜ್ಮಿಯ ಕಿರಿಯ ಸಹೋದರನ ಪುತ್ರ ಈ ಅಸ್ಲಮ್. ಅಬು ಅಜ್ಮಿ ಸಂಬಂಧಿಯಾದರೂ ರಾಜಕೀಯ ಕುಟುಂಬದಿಂದ ಈತ ಬೇರೆಯೇ ಇದ್ದ ಎಂದೂ ವರದಿಗಳು ಹೇಳುತ್ತಿವೆ.

ಆದಾಗ್ಯೂ, ಈತ ಬೃಹತ್ ಜಾಲವೊಂದನ್ನು ನಡೆಸಿಕೊಂಡು ಬರುವುದಕ್ಕೆ ಯಾರ ಬೆಂಬಲವಿತ್ತು ಎಂಬುದು ಶೋಧಿಸಬೇಕಾದ ವಿಚಾರ. ಏಕೆಂದರೆ ಇವರ ಗ್ಯಾಂಗು ಮಹಾರಾಷ್ಟ್ರದಿಂದ ಮುಂಬೈ, ಚಂಡೀಘಡ ಹಾಗೂ ದೆಹಲಿಯ ರೇವ್ ಪಾರ್ಟಿಗಳಿಗಲ್ಲದೇ ಯುಕೆ, ಅಮೆರಿಕ ಮತ್ತು ಮಧ್ಯಪ್ರಾಚ್ಯಗಳಿಗೂ ಮಾದಕ ವಸ್ತು ಸರಬರಾಜು ಮಾಡುತ್ತಿದ್ದುದಾಗಿ ಪೊಲೀಸರು ಹೇಳಿದ್ದಾರೆ.

Leave a Reply