ಗೋವಾದಲ್ಲಿ 150 ಹಿಂದೂ ಸಂಘಟನೆಗಳು ಸಮಾವೇಶ ನಡೆಸುತ್ತಿರುವುದೇಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಇದೇ ತಿಂಗಳು 14ರಿಂದ 17ರವರಗೆ ಗೋವಾದಲ್ಲಿ ನಡೆಯಲಿರುವ ಸಮಾವೇಶದಲ್ಲಿ 150ಕ್ಕೂ ಹೆಚ್ಚು ಹಿಂದೂ ಸಂಘಟನೆಗಳು ಭಾಗವಹಿಸುತ್ತಿವೆ. ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಲಿರುವ ಪ್ರಮುಖ ಅಂಶವೇನೆಂದರೆ 2023ರ ವೇಳೆಗೆ ‘ಹಿಂದೂ ರಾಷ್ಟ್ರ’ ಪರಿಕಲ್ಪನೆ ಸಕಾರಗೊಳಿಸುವುದು.

ಸನಾಥನ ಸಂಸ್ಥಾದ ಅಂಗವಾಗಿರುವ ಹಿಂದೂ ಜನಜಾಗೃತಿ ಸಮಿತಿಯು ಈ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಸಮಾವೇಶದ ಬಗ್ಗೆ ಮಾತನಾಡಿರುವ ಹಿಂದೂ ಜನ ಜಾಗೃತಿ ಸಮಿತಿ ವಕ್ತಾರ ಉದಯ್ ಧುರಿ ಹೇಳಿದಿಷ್ಟು, ‘ಇತ್ತೀಚೆಗೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಭರ್ಜರಿ ಅಂತರದಿಂದ ಗೆದ್ದು ಹಿಂದೂ ರಾಷ್ಟ್ರದ ಪ್ರತಿಪಾದಕ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿರುವುದು, ಜನರು ಇಂಡಿಯಾವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಇಚ್ಛೆ ತೋರಿದ್ದಾರೆ. ಈ ಹಿಂದೂ ರಾಷ್ಟ್ರದ ಗುರಿ ಯಶಸ್ವಿಯಾಗಲು ಸಾಗಬೇಕಿರುವ ಹಾದಿಯನ್ನು ತೋರಲು ಈ ಸಮಾವೇಶ ನೆರವಾಗಲಿದೆ. 2023ರ ವೇಳೆಗೆ ಈ ಗುರಿ ಸಕಾರವಾಗಲಿದ್ದು, ಅಲ್ಲಿಯವರೆಗೂ ಎಲ್ಲಾ ಹಿಂದೂ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ.’

ಅಂದಹಾಗೆ ಈ ಸನಾಥನಾ ಸಂಸ್ಥಾದ ಮೇಲೆ ವಿಚಾರವಾದಿಗಳ ಕೊಲೆ ಸಂಬಂಧ ಆರೋಪಗಳು ಬಂದಿದ್ದನ್ನು ಇಲ್ಲಿ ಉಲ್ಲೇಖಿಸಬೇಕು.

Leave a Reply