ತನ್ನ ಮೊದಲ ವೇತನವನ್ನು ಉಚಿತ ಶಿಕ್ಷಣ ಯೋಜನೆಗೆ ಅರ್ಪಿಸಲು ನಿರ್ಧರಿಸಿದ ನಂದಿನಿ!

    ಡಿಜಿಟಲ್ ಕನ್ನಡ ಟೀಮ್:

    ಕೆಲ ದಿನಗಳ ಹಿಂದಷ್ಟೇ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ಸ್ಥಾನ ಪಡೆದು ನಾವೆಲ್ಲರು ಹೆಮ್ಮೆ ಪಡುವಂತೆ ಮಾಡಿದ್ದ ಕೋಲಾರದ ಹುಡುಗಿ ಕೆ.ಆರ್ ನಂದಿನಿ, ಈಗ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಅದೇನೆಂದರೆ, ನಂದಿನಿ ತಮ್ಮ ಮೊದಲ ವೇತನವನ್ನು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಗೆ ದೇಣಿಗೆಯಾಗಿ ನೀಡುತ್ತಿದ್ದು, ಉಚಿತ ಶಿಕ್ಷಣ ಯೋಜನೆಗೆ ತಮ್ಮ ನೆರವು ನೀಡಿದ್ದಾರೆ.

    ಗುರುವಾರ ತಮ್ಮ ಕುಟುಂಬ ಸದಸ್ಯರೊಂದಿಗೆ ಆಳ್ವಾಸ್ ಸಂಸ್ಥೆಗೆ ಭೇಟಿ ನೀಡಿದ್ದ ನಂದಿನಿ, ತಮ್ಮ ಈ ನಿರ್ಧಾರವನ್ನು ಹಂಚಿಕೊಂಡಿದ್ದಾರೆ. ಫೌಂಡೇಶನ್ನಿನ ಸಂಸ್ಥಾಪಕ ಅಧ್ಯಕ್ಷ ಎಂ.ಮೋಹನ್ ಆಳ್ವಾ ಅವರನ್ನು ಭೇಟಿ ಮಾಡಿದ್ದ ನಂದಿನಿ ಈ ಬಗ್ಗೆ ತಿಳಿಸಿದ್ದು, ‘ಇಲ್ಲಿನ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.’

    ನಂದಿನಿ ಅವರ ಈ ನಿರ್ಧಾರಕ್ಕೆ ಕಾರಣ ಏನು ಎಂದರೆ, ನಂದಿನಿ ಸಹ ಆಳ್ವಾಸ್ ನ ಈ ಉಚಿತ ಶಿಕ್ಷಣ ಯೋಜನೆಯ ಫಲಾನುಭವಿ. ಹೀಗಾಗಿ ಅಗತ್ಯದ ಸಂದರ್ಭದಲ್ಲಿ ತನ್ನ ಶಿಕ್ಷಣಕ್ಕೆ ನೆರವಾಗಿದ್ದ ಸಂಸ್ಥೆಗೆ ಈಗ ನಂದಿನಿ ತನ್ನ ಕೈಯಲ್ಲಾದ ನೆರವು ನೀಡಲು ಮುಂದಾಗಿದ್ದಾರೆ. ಆಕೆಯ ಈ ನಿರ್ಧಾರ ಎಲ್ಲರು ಹೆಮ್ಮೆ ಪಡುವಂತಹದ್ದಾಗಿದ್ದು, ಅನೇಕರಿಗೆ ಮಾದರಿಯಾಗಿದೆ.

    Leave a Reply