‘ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಪಾಠ ಅಗತ್ಯವಿಲ್ಲ’: ಎನ್ಡಿಟಿವಿ ಮೇಲಿನ ದಾಳಿ ವಿರೋಧಿಸಿದವರಿಗೆ ಸಿಬಿಐ ಕೊಟ್ಟ ಉತ್ತರ

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ವಾಹಿನಿ ಎನ್ಡಿಟಿವಿ ಮಾಲೀಕ ಪ್ರಣೊಯ್ ರಾಯ್ ಅವರ ಆಸ್ತಿಯ ಮೇಲೆ ಸಿಬಿಐ ದಾಳಿ ನಡೆಸಿದ್ದು, ಅದಕ್ಕೆ ಸಿಬಿಐ ವಿರುದ್ಧ ಕೇಳಿ ಬಂದ ಆರೋಪಗಳ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಹೀಗೆ ಆರೋಪ ಮಾಡುತ್ತಿರುವವರಿಗೆ ಸಿಬಿಐ ಉತ್ತರ ಕೊಟ್ಟಿದ್ದು, ‘ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಪಾಠ ಕಲಿಯುವ ಅಗತ್ಯ ನಮಗಿಲ್ಲ’ ಎಂದಿದೆ.

ಸಿಬಿಐ ದಾಳಿಯ ಕುರಿತಾಗಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಸಂಪಾದಕೀಯದಲ್ಲಿ ‘ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ ಭಾರತೀಯ ಮಾಧ್ಯಮಗಳನ್ನು ಹತ್ತಿಕ್ಕುತ್ತಿರುವುದಕ್ಕೆ ಎಚ್ಚರಿಕೆ ಗಂಟೆ’ ಎಂಬ ಲೇಖನವನ್ನು ಪ್ರಕಟಿಸಿತ್ತು. ಈ ಲೇಖನವನ್ನು ನಿರಾಕರಿಸಿರುವ ಸಿಬಿಐ, ‘ಇದೊಂದು ಏಕಪಕ್ಷೀಯ ಲೇಖನವಾಗಿದೆ. ಈ ಲೇಖನದಲ್ಲಿ ಎನ್ಡಿಟಿವಿ ಮಾಲೀಕತ್ವದ ಮತ್ತೊಂದು ಕಂಪನಿ ಆರ್ಆರ್ಪಿಆರ್ ವಿರುದ್ಧ ಭಾರತದ ವಿವಿಧ ತೆರಿಗೆ ಹಾಗೂ ಕಾನೂನು ಸಂಸ್ಥೆಗಳು ನಡೆಸುತ್ತಿರುವ ತನಿಖೆಯ ಇತಿಹಾಸದ ಬಗ್ಗೆ ಯಾವುದೇ ಅಂಶ ಸೇರಿಸಿಲ್ಲ. ಟೈಮ್ಸ್ ಪತ್ರಿಕೆಯಿಂದ ಭಾರತ ಪತ್ರಿಕಾ ಸ್ವಾತಂತ್ರ್ಯವನ್ನು ಕಲಿಯುವ ಅವಶ್ಯಕತೆ ಇಲ್ಲ. ನಮ್ಮ ದೇಶದ ವೈವಿಧ್ಯಮಯ ಸಂಸ್ಕೃತಿ, ಇತಿಹಾಸ, ಸಿದ್ಧಾಂತಗಳನ್ನು ನಮ್ಮ ಸಂಸ್ಥೆಗಳು ಮೈಗೂಡಿಸಿಕೊಂಡಿವೆ’ ಎಂದು ತಿರುಗೇಟು ನೀಡಿದ್ದಾರೆ ಸಿಬಿಐ ವಕ್ತಾರ ಆರ್.ಕೆ ಗೌರ್.

1 COMMENT

  1. WE ARE OF FREE COUNTRY> SO FOREIGN JOURNALISTS MAY BE COMMENTED ON WRONG STEP I FEEL> SO SUCH EXPLANATION BY CBI> FIRST FEEL INDIA THEN THE REMAIN WORLD FOR INDIANS IS THE DIGNITY OF THE NATION > DO U AGREE!

Leave a Reply