ಮಜಾ ಟಾಕೀಸ್ ನಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ ಮಾನವ ಕಂಪ್ಯೂಟರ್ ಬಸವರಾಜ್

ಡಿಜಿಟಲ್ ಕನ್ನಡ ಟೀಮ್:

ಕನ್ನಡಿಗರ ಮನೆ ಮಾತಾಗಿರುವ ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಹೊಸ ಪ್ರತಿಭೆಯೊಂದು ಕರ್ನಾಟಕದ ಜನತೆಗೆ ಪರಿಚಯವಾಗಿದೆ. ಅದು ಬೇರೆಯಾರೂ ಅಲ್ಲ, ಮಾನವ ಕಂಪ್ಯೂಟರ್ ಎಂದು ಸಾಬೀತುಪಡಿಸಿರುವ ಉತ್ತರ ಕನ್ನಡ ಜಿಲ್ಲೆಯ ವಿಶೇಷ ಚೇತನ ಬಸವರಾಜ್! ಬಸವರಾಜ್ ತಮ್ಮ ಸಾಮರ್ಥ್ಯದಿಂದ ಈತ ಲಕ್ಷಾಂತರ ಮಂದಿ ವಿಶೇಷ ಚೇತನರಿಂದ ಹಿಡಿದು ಸಾಮಾನ್ಯರವರೆಗೂ ಸ್ಫೂರ್ತಿಯ ಚಿಲುಮೆಯಾಗಿರೋದು ವಿಶೇಷ.

ಕರ್ನಾಟಕದ ಮಾನವ ಕಂಪ್ಯೂಟರ್ ಎಂದು ಹೆಸರು ಪಡೆದಿರುವ ಬಸವರಾಜ್, ಯಾವುದೇ ವ್ಯಕ್ತಿಯ ಹೆಸರು ಮತ್ತು ಅವರ ಫೋನ್ ನಂಬರ್ ಹೇಳಿ ಸುಮಾರು 10 ವರ್ಷಗಳ ಬಳಿಕ ಈ ಹೆಸರಿನ ವ್ಯಕ್ತಿ ಫೋನ್ ನಂಬರ್ ಹೇಳಿ ಅಂದ್ರೆ ತಪ್ಪಿಲ್ಲದೆ ಥಟ್ ಅಂತ ಹೇಳುವ ನೆನಪಿನ ಶಕ್ತಿ ಇವರಿಗಿದೆ. ಈಗಾಗಲೇ 10 ಸಾವಿರ ಜನರ ಫೋನ್ ನಂಬರ್ ಇವರ ಜ್ಞಾನ ಬಂಡಾರ್ ಸೇರಿದ್ದು, ಗಿನ್ನೀಸ್ ದಾಖಲೆಗೂ ಪ್ರಯತ್ನ ಮಾಡುತ್ತಿದ್ದಾರೆ.

ನಿಮಗೆಲ್ಲಾ ಗೊತ್ತಿರುವಂತೆ ಶಕುಂತಲ ದೇವಿಯವರನ್ನು ನಡೆದಾಡುವ ಕಂಪ್ಯೂಟರ್ ಅಂತ ಕರೆಯುತ್ತಾರೆ. ಅವರು ಕಂಪ್ಯೂಟರ್ ವೇಗದಲ್ಲಿ ಉತ್ತರ ಕೊಡ್ತಿದ್ರು. ಶಕುಂತಲ ದೇವಿ ಅವರ ಬಗ್ಗೆ ತಿಳಿದುಕೊಂಡ ಬಸವರಾಜ್ ಅವರು ನಾನು ಅವರಂತೆಯೇ ಏನಾದರೂ ಸಾಧಿಸಬೇಕು ಅನ್ನೋ ಛಲದಿಂದ ಈ ಸಾಧನೆ ಮಾಡಿದ್ದಾರೆ. ತಮ್ಮ ಬಾಲ್ಯದ 8 ಈ ಚತುರತೆ ಇವರಿಗೆ ಲಭಿಸಿದೆಯಂತೆ. ‘ನನಗೆ ಕಣ್ಣು ಕಾಣಲ್ಲ ಅಂತಾ ಬೇಸರ ಮಾಡಿಕೊಳ್ಳಲ್ಲ. ನನಗೆ ಕಣ್ಣು ಕಾಣಿಸಿದ್ರೆ ಈ ಸಾಧನೆ ಮಾಡಲು ಆಗುತ್ತಿತ್ತೋ ಇಲ್ವೋ ಗೊತ್ತಿಲ್ಲ. ಕಣ್ಣು ಕಾಣಿಸದೇ ಇದ್ದದ್ದು ನನಗೆ ವರವಾಗಿ ಪರಿಣಮಿಸಿದೆ’ ಅಂತ ಹೆಮ್ಮೆ ಪಡುತ್ಯಿಂತಾರೆ ಬಸವರಾಜ್.

ಕರುನಾಡಿನ ಸಾಧಕನ ಸಾಧನೆ ರಾಷ್ಟ್ರ ಮಟ್ಟಕ್ಕೂ ತಲುಪಿದೆ. ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಪಡೆದಿದ್ದಾರೆ. ಆ ಪ್ರಶಸ್ತಿಯನ್ನು ಜನಮೆಚ್ಚಿದ ನಾಯಕ, ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ಗುರು, ವಿಜ್ಞಾನಿ ಡಾ ಎಪಿಜೆ ಅಬ್ದುಲ್ ಕಲಾಂ ಅವರ ಕೈಯಲ್ಲಿ ಪಡೆದಿದಿರುವುದು ವಿಶೇಷ. ರಾಜ್ಯ ಸರ್ಕಾರವೂ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಆದರೆ ಯಾವುದೇ ಮಾಧ್ಯಮಗಳಲ್ಲಿ ಇವರ ಸಾಧನೆ ಬಗ್ಗೆ ಸುದ್ದಿಯಾಗಿಲ್ಲ ಅನ್ನೋದೆ ದುರ್ದೈವ.

Leave a Reply