ಪ್ರಧಾನಿ ಮೋದಿಗೆ ಟಾಂಗ್ ಕೊಟ್ರಾ ಸಲ್ಮಾನ್..?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಅಸಹಿಷ್ಣತೆ ಕುರಿತಾದ ಚರ್ಚೆ ಸಾಕಷ್ಟು ಎದ್ದಿದ್ದವು. ಬಾಲಿವುಡ್ ನ ಮಿಸ್ಟರ್ ಫರ್ಫೆಕ್ಟ್ ಅಮೀರ್ ಖಾನ್ ನೀಡಿದ್ದ ಸಂದರ್ಶನ ಈ ಕುರಿತ ಚರ್ಚೆಯನ್ನು ದೊಡ್ಡ ಮಟ್ಟಕ್ಕೆ ವಿಸ್ತರಿಸಿತ್ತು. ಈ ಹಂತದಲ್ಲಿ ಸಲ್ಮಾನ್ ಖಾನ್, ಶಾರುಖ್, ಅಮಿತಾಬ್ ಸೇರಿದಂತೆ ಘಟಾನುಘಟಿ ನಾಯಕ ನಟರು ಮೌನ ವಹಿಸಿದ್ರು. ಆದರೆ ಈಗ ಸಲ್ಮಾನ್ ಖಾನ್ ಮೋದಿ ಅವರ ವಿರುದ್ಧ ತಮಗಿರುವ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.

ಹೌದು, ತಮ್ಮ ಮುಂದಿನ ಚಿತ್ರ ‘ಟ್ಯೂಬ್ ಲೈಟ್’ ಪ್ರೊಮೋಷನ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಲ್ಮಾನ್, ಯುದ್ಧದ ವಿಚಾರವನ್ನು ಮುಂದಿಟ್ಟುಕೊಂಡು ಮೋದಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಆ ಮೂಲಕ ಮೋದಿ ಸರ್ಕಾರದ ವಿರುದ್ಧ ತಮಗಿರುವ ಅಸಮಾಧಾನ ಹೊರ ಹಾಕಿದ್ದಾರೆ.

‘ಯುದ್ಧ ಅಂದ್ರೆ ಸಾಮಾನ್ಯವಲ್ಲ. ಆ ಕಡೆ ಹಾಗೂ ಈ ಕಡೆಯಿಂದ ಸಾವಿರಾರು ಜನರು‌ ಸಾವನ್ನಪ್ತಾರೆ. ಯುದ್ಧದ ಫಲಿತಾಂಶ ಏನೇ ಆಗಿರಲಿ‌ ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತದೆ. ಯುದ್ಧ ಘೋಷಣೆ ಮಾಡಿವುದು ಸುಲಭ. ಅದರಿಂದ ಆಗುವ ಅನಾಹುತ ಬಹಳ ದೊಡ್ಡದಿದೆ. ಹೀಗಾಗಿ ಯಾರು ಯುದ್ಧ ಘೋಷಣೆ ಮಾಡುತ್ತಾರೋ ಅವರ ಕೈಗೆ ಬಂದೂಕು ಕೊಟ್ಟು ರಣರಂಗದಲ್ಲಿ ಯುದ್ಧಮಾಡುವಂತೆ ಹೇಳಬೇಕು. ಅವರ ಕೈ ಕಾಲುಗಳು ನಡುಗುತ್ತವೆ, ಭಯ ಅನ್ನೋದು ಹೇಗಿರುತ್ತೆ. ಯುದ್ಧಕ್ಕಿಂತ ಮಾತುಕತೆಯೇ ಒಳ್ಳೆಯದು ಅನ್ನೋ ಮಹತ್ವ ತಿಳಿಯುತ್ತದೆ. ಜೊತೆಗೆ ಯುದ್ಧ ಒಂದೇ ದಿನದಲ್ಲಿ ಮುಗಿದು ಹೋಗುತ್ತದೆ’ ಎಂದಿದ್ದಾರೆ.

Leave a Reply