ಸಮಾಧಿಯಲ್ಲಿ ಮೊದಲ ರಾತ್ರಿ ಹೇಗಿದ್ದೀತು? ಕರುಳು ಹಿಂಡುತ್ತಿದೆ ಆ ಮೃತಯೋಧ ಬರೆದಿಟ್ಟುಹೋದ ವಾಕ್ಯ

ಡಿಜಿಟಲ್ ಕನ್ನಡ ಟೀಮ್

ಶುಕ್ರವಾರ ಜಮ್ಮು-ಕಾಶ್ಮೀರದ ಆವಂತಿಪೊರಾದಲ್ಲಾದ ಶಂಕಿತ ಲಷ್ಕರ್ ದಾಳಿಯಲ್ಲಿ ಮೃತರಾದ ಆರು ಪೊಲೀಸರ ಪೈಕಿ ಫಿರೋಜ್ ಅಹ್ಮದ್ ಧರ್ ಸಹ ಒಬ್ಬರು.

ಸಾವಿನ ಬಗ್ಗೆ ಇವರು ಈ ಮೊದಲು ಹಂಚಿಕೊಂಡಿದ್ದ ಫೇಸ್ಬುಕ್ ಬರಹವೊಂದು ಎಲ್ಲರ ಎದೆ ಹಿಂಡುವಂತೆ ಕಾಡುತ್ತಿದೆ.

2013ರ ಜನವರಿಯಲ್ಲಿ ಧರ್ ಹೀಗೆ ಬರೆದುಕೊಂಡಿದ್ದರು- ‘ಕ್ಷಣ ನಿಧಾನಿಸಿ ನಿಮ್ಮನ್ನು ನೀವೇ ಒಮ್ಮೆ ಕೇಳಿಕೊಂಡಿದ್ದೀರಾ… ಸಮಾಧಿಯಲ್ಲಿ ನನ್ನ ಮೊದಲ ರಾತ್ರಿ ಹೇಗಿರುತ್ತದೆ ಅಂತ? ನಿಮ್ಮ ದೇಹವನ್ನು ತೊಳೆದು ಸಮಾಧಿಗೆ ಒಯ್ಯುವ ಕ್ಷಣಗಳನ್ನು ನೆನಪಿಸಿಕೊಳ್ಳಿ. ಜನರು ನಿಮ್ಮನ್ನು ಸ್ಮಶಾನಕ್ಕೆ ಒಯ್ಯುವ, ನಿಮ್ಮ ಕುಟುಂಬ ಅಳುತ್ತಿರುವ ಆ ಕ್ಷಣಗಳನ್ನು ನೆನಪಿಸಿಕೊಳ್ಳಿ.’

ಹೀಗೆಲ್ಲ ಬರೆದುಕೊಂಡು ಕಾಶ್ಮೀರ ಸಹಜತೆಗೆ ಬರಲೆಂದು ಹಪಹಪಿಸಿದ್ದವ, ತನ್ನದೇ ಬರಹದ ಮಾದರಿಯಲ್ಲಿ ಸ್ಮಶಾನಕ್ಕೆ ಸಾಗಿದ್ದು ಅದೆಂಥ ದುರಂತ? ಫಿರೋಜ್ ಅಹ್ಮದರ ವಯೋವೃದ್ಧ ತಾಯಿ-ತಂದೆ ಎದೆಬಡಿದುಕೊಂಡು ಅಳುತ್ತಿದ್ದರೆ ಅದಕ್ಕೆ ಜತೆಯಾಗಿದ್ದರು ಹೆಂಡತಿ ಮುಬೀನಾ ಅಖ್ತರ್. ಇನ್ನು ಫಿರೋಜರ ಇಬ್ಬರು ಹೆಣ್ಣು ಮಕ್ಕಳಾದ ಆರು ವರ್ಷದ ಅಧಾ ಹಾಗೂ 2 ವರ್ಷದ ಸಿಮ್ರಾನ್ ಗೆ ಸಾವನ್ನು ತಿಳಿದುಕೊಳ್ಳುವ ವಯಸ್ಸಲ್ಲ. ಅದೇಕೆ ಮನೆಗೆ ಇಷ್ಟೆಲ್ಲ ಜನ ಬಂದಿದ್ದಾರೆಂಬ ಅಚ್ಚರಿ ಮತ್ತು ಅವ್ಯಕ್ತ ಆಘಾತದಲ್ಲಿದ್ದವು ಆ ಕಂದಮ್ಮಗಳು…

ಸಮಾಧಿಯಲ್ಲಿ ಜಾರಿದ ಸಿಪಾಯಿಗೆ ಕುಟುಂಬದ ಬಿಕ್ಕಳಿಕೆಗಳಷ್ಟೇ ಅಲ್ಲ, ನಮ್ಮ ಅಭಿಮಾನದ ಕಂಬನಿಯೂ ಕಾಣುವಂತಾಗಲಿ.

1 COMMENT

Leave a Reply