ಇಂದಿರಾ ತುರ್ತು ಪರಿಸ್ಥಿತಿ ಕತೆಯನ್ನು ಪರದೆಯಲ್ಲಿ ಹೇಳಲು ಇಷ್ಟು ವರ್ಷಗಳೇ ಬೇಕಾದವು, ಈಗ ಬರ್ತಿದೆ ಇಂದು ಸರ್ಕಾರ್

ಡಿಜಿಟಲ್ ಕನ್ನಡ ಟೀಮ್

ತುರ್ತು ಪರಿಸ್ಥಿತಿ ಎಂಬ ಶಬ್ದವನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಈ ಪದಗುಚ್ಛ ನಿಜಾರ್ಥದಲ್ಲಿ ಅನುಷ್ಠಾನಕ್ಕೆ ಬಂದಿದ್ದು 1975-77ರ ಅವಧಿಯಲ್ಲಿ. ಆಗಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಜನರ ಹಕ್ಕುಗಳನ್ನೇ ಮೊಟಕುಗೊಳಿಸಿದರು. ರಾಜಕೀಯ ಎದುರಾಳಿಗಳನ್ನು, ಅಭಿವ್ಯಕ್ತಿ ಸ್ವಾತಂತ್ರ್ಯ ಬಯಸಿದವರನ್ನು ಮುಲಾಜಿಲ್ಲದೇ ಜೈಲಿಗೆ ತಳ್ಳಲಾಯಿತಲ್ಲದೇ ಹಿಂಸಾಮಾರ್ಗವನ್ನು ತುಳಿದು ನ್ಯಾಯ ನಿರಾಕರಣೆ ಮಾಡಲಾಯಿತು.

ತುರ್ತು ಪರಿಸ್ಥಿತಿಯ ಇಂಥ ಎಲ್ಲ ವಿವರಗಳು ಆಗಿನ ಪ್ರತಿಪಕ್ಷ ಸದಸ್ಯರ ಭಾಷಣಗಳಲ್ಲಿ, ಕೆಲವು ಬರಹಗಳಲ್ಲಿ ಲಭ್ಯವೇ ಹೊರತು ಆ ವಸ್ತುವನ್ನಿರಿಸಿಕೊಂಡು ಇಲ್ಲಿಯವರೆಗೆ ಯಾರೂ ಸಿನಿಮಾ ಮಾಡುವ ಗೋಜಿಗೆ ಹೋಗಿರಲಿಲ್ಲ.

ಅಧಿಕಾರದ ಅಂಗಳದಲ್ಲಿ ಕಾಂಗ್ರೆಸ್ಸಿನ ಬಲ ಗಣನೀಯವಾಗಿ ತಗ್ಗಿರುವ ಈ ಹಂತದಲ್ಲಷ್ಟೇ ಅದು ಸಾಕಾರವಾಗುತ್ತಿದೆ. ನಿರ್ದೇಶಕ ಮಧುರ್ ಭಂಡಾರ್ಕರ್ ಅವರ ‘ಇಂದು ಸರ್ಕಾರ್’ ಜುಲೈ ಅಂತ್ಯದಲ್ಲಿ ತೆರೆ ಕಾಣಲಿದ್ದು, ಇದೀಗ ಟ್ರೈಲರ್ ಬಿಡುಗಡೆ ಆಗಿದೆ.

ಟ್ರೈಲರ್ ಆಸಕ್ತಿ ಕೆರಳಿಸುವಂತಿದೆ. ತುರ್ತು ಪರಿಸ್ಥಿತಿ ಕಾಲದ ವಿವಾದಾತ್ಮಕ ಕ್ರಮ ಬಲವಂತದ ಸಂತಾನಹರಣವನ್ನು ಚರ್ಚಾ ವಸ್ತುವನ್ನಾಗಿಸಿದಂತಿದೆ. ಇಂದಿರಾ ಗಾಂಧಿಗಿಂತ ಹೆಚ್ಚಾಗಿ ಮಗ ಸಂಜಯ್ ಗಾಂಧಿಯ ಅಧಿಕಾರ ದುರುಪಯೋಗವನ್ನೇ ಇದು ಕೇಂದ್ರೀಕರಿಸಿದಂತಿದೆ. ಸಂಜಯ್ ಪಾತ್ರದಲ್ಲಿ ನೀಲ್ ನಿತಿನ್ ಮುಖೇಶ್ ಅಭಿನಯವು ಟ್ರೈಲರಿನಲ್ಲಂತೂ ಚೆಂದವಾಗಿ ಮೂಡಿಬಂದಿದೆ.

Leave a Reply