ಎಫ್16 ಯುದ್ಧ ವಿಮಾನ ಉತ್ಪಾದನೆಗೆ ವಿದೇಶಿ ಕಂಪನಿ ಜತೆ ಟಾಟಾ ಸಾಥ್, ಏನಿದರ ಮಹತ್ವ?

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ವಾಯು ಸೇನೆಯ ಬಲ ವೃದ್ಧಿಸಲು ಎಫ್16 ಯುದ್ಧವಿಮಾನಗಳನ್ನು ಭಾರತದಲ್ಲೇ ಉತ್ಪಾದಿಸುವ ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಕಂಪನಿಯು ಅಮೆರಿಕದ ಕಂಪನಿ ಲಾಕ್ಹೀಡ್ ಮಾರ್ಟೀನ್ ಕಂಪನಿ ಜತೆ ಒಪ್ಪಂದಕ್ಕೂ ಸಹಿ ಹಾಕಲಾಗಿದೆ.

ಇದೇ ತಿಂಗಳು 26ರಂದು ಭಾರತ ಪ್ರಧಾನಿ ನರೇಂದ್ರ ಮೋದಿ ವಾಶಿಂಗ್ಟನ್ ಪ್ರವಾಸ ಕೈಗೊಳ್ಳಲಿದ್ದು, ಈ ಪ್ರವಾಸಕ್ಕೂ ಒಂದು ವಾರ ಮುಂಚಿತವಾಗಿ ಈ ಒಪ್ಪಂದಕ್ಕೆ ಸಹಿ ಹಾಕಿರುವುದು ವಿಶೇಷ. ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಎಫ್16 ಯುದ್ಧ ವಿಮಾನವನ್ನು ಭಾರತದಲ್ಲೇ ಉತ್ಪಾದಿಸಲಾಗುತ್ತದೆ. ಈ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಈ ಬಗ್ಗೆ ಮಾತನಾಡಿರುವ ಉಭಯ ಕಂಪನಿಗಳು ಹೇಳಿದಿಷ್ಟು…

‘ಎಫ್ 16 ಯುದ್ಧ ವಿಮಾನ ವಿಶ್ವದ ಅತ್ಯಂತ ಅತ್ಯಧುನಿಕ ಹಾಗೂ ವಿಶ್ವದ ಯಶಸ್ವಿ ಬಹುಪಯೋಗಿ ಯುದ್ಧ ವಿಮಾನವಾಗಿದೆ. ವಿಶ್ವದ ದೊಡ್ಡ ರಕ್ಷಣಾ ಉತ್ಪನ್ನ ಕಂಪನಿಯು ಭಾರತದ ಪ್ರಮುಖ ಕಂಪನಿ ಜತೆ ಕೈಜೋಡಿಸಿ ಎಫ್16 ಯುದ್ಧ ವಿಮಾನ ಉತ್ಪಾದನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಈ ಒಂದು ಒಪ್ಪಂದದಿಂದ ಎಫ್16 ಪೂರೈಕೆಗೆ ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಯಾಗುವುದರ ಜತೆಗೆ ಭಾರತದಲ್ಲೂ ಯುದ್ಧ ವಿಮಾನ ತಯಾರಿಕೆಯಿಂದ ಉದ್ಯೋಗ ಸೃಷ್ಟಿಯಾಗಲಿದೆ. ಮೇಕ್ ಇನ್ ಇಂಡಿಯಾ ಯೋಜನೆ ಈ ಎರಡು ಕಂಪನಿಗಳು ಒಟ್ಟಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಭಾರತದ ಮಾಯುಸೇನೆಗೆ ಅಗತ್ಯವಿರುವ ಯುದ್ಧ ವಿಮಾನ ಪೂರೈಕೆ ಸಾಧ್ಯವಾಗಲಿದೆ. ಈಗಾಗಲೇ ಟಿಎಎಸ್ಎಲ್ ಕಂಪನಿಯು ಸಿ-130ಜೆ ಯುದ್ಧ ವಿಮಾನ ಹಾಗೂ ಎಸ್-92 ಹೆಲಿಕಾಪ್ಟರ್ ನಿರ್ಮಾಣಕ್ಕೆ ಕೆಲವು ಭಾಗಗಳನ್ನು ನಿರ್ಮಿಸಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಹೀಗಾಗಿ ಈ ಎರಡು ಕಂಪನಿಗಳ ನಡುವೆ ಒಪ್ಪಂದ ಸುಲಭವಾಗಿ ಸಾಗಿದೆ.’

Leave a Reply