ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ಪತಂಜಲಿಯಿಂದ ಯೋಗ ನಡಿಗೆ- ಯೋಗ ಜಾಥಾ

ಡಿಜಿಟಲ್ ಕನ್ನಡ ಟೀಮ್:

ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ಪತಂಜಲಿ ಯೋಗ ಸಮಿತಿ ನೇತೃತ್ವದಲ್ಲಿ ಬುಧವಾರ ಧಾರವಾಡ ದ ಕಲಾಭವನದಿಂದ ಆರ್.ಎನ್.ಶೆಟ್ಟಿ ಕ್ರೀಡಾಂಗಣದ ವರೆಗೆ ಅದ್ಧೂರಿಯಾಗಿ ಯೋಗ ನಡಿಗೆ ಹಾಗೂ ಯೋಗ ಜಾಥಾ ಆಯೋಜಿಸಲಾಯಿತು.

ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಗೀಡಗಳಿಗೆ ನೀರುಣಿಸುವ ಮೂಲಕ ಈ ಜಾಥಾಗೆ ಚಾಲನೆ ನೀಡಲಾಯಿತು. ಈ ಸಂಧರ್ಭದಲ್ಲಿ ಪತಂಜಲಿ ಯೋಗ ಪೀಠ, ಹರಿದ್ವಾರದ ಪತಂಜಲಿ ಆಯುರ್ವೇದ ನಿಯಮಿತದ ಮುಖ್ಯಸ್ಥರಾದ ಆಚಾರ್ಯ ಬಾಲಕೃಷ್ಣರವರು ಬರೆದಿರುವ “ ಯೋಗ ವಿಜ್ಞಾನಮ್” ಎಂಬ ಯೋಗ ಸಂಬಂಧಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪುಸ್ತಕ ಬಿಡುಗಡೆ ನಂತರ ಸರಿಸುಮಾರು 45 ನಿಮಿಷಗಳ ಕಾಲ 5000 ಕ್ಕಿಂತ ಹೆಚ್ಚು ಯೋಗ ಸಾಧಕರು ಸಾಮೂಹಿಕ ಯೋಗಾಭ್ಯಾಸ ಮಾಡಿದರು.

3ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಪೀಠ, ಕರ್ನಾಟಕದ ರಾಜ್ಯ ಪ್ರಭ್ರಾರಿ ಯೋಗಾಚಾರ್ಯ ಶ್ರೀ ಭವರಲಾಲ್ ಆರ್ಯ, ಧಾರವಾಡ ಜಿಲ್ಲಾಧಿಕಾರಿ ಶ್ರೀ ಡಾ.ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾ ಆಯುಷ್ ಅಧಿಕಾರಿ ಶ್ರೀ ಜವಹರಲಾಲ್ ಪವರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಶ್ರೀಮತಿ, ಆರ್.ಸ್ನೇಹಲ್ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಚೈತ್ರಾ ಶಿರೂರ, ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿಗಳಾದ ಎಂ. ಡಿ. ಪಾಟೀಲ, ರಮೇಶ ಸುಲಾಖೆ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು.

Leave a Reply