ಸಾಲ ಮನ್ನಾ ಆದ ಖುಷಿಯಲ್ಲಿದ್ದ ರೈತರಿಗೆ ಸರ್ಕಾರದಿಂದ ಷರತ್ತಿನ ಶಾಕ್!

ಡಿಜಿಟಲ್ ಕನ್ನಡ ಟೀಮ್:

ವ್ಯಾಪಕ ಒತ್ತಡದ ನಡುವೆ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ರೈತರ ಸಾಲ ಮನ್ನಾ ಮಾಡುವ ನಿರ್ಧಾರವನ್ನು ಘೋಷಿಸಿದ್ದರು. ಸಹಕಾರಿ ಬ್ಯಾಂಕುಗಳಲ್ಲಿನ ರೈತರ ₹ 50 ಸಾವಿರ ಸಾಲವನ್ನು ಮಾಡುವುದಾಗಿ ತಿಳಿಸಿದ್ದರು. ಮುಖ್ಯಮಂತ್ರಿಗಳ ಈ ಮಾತು ಕೇಳಿ ಬಹುತೇಕ ರೈತರು ಸಂಭ್ರಮದಲ್ಲಿದ್ದರು. ಆದರೆ ಅವರ ಈ ಸಂಭ್ರಮಕ್ಕೆ ಷರತ್ತುಗಳನ್ನು ವಿಧಿಸುವ ಮೂಲಕ ಸರ್ಕಾರ ಬ್ರೇಕ್ ಹಾಕಿದೆ.

ಸಾಲ ಮನ್ನಾ ಆದೇಶದ ಕುರಿತಂತೆ ಇಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು, 14 ಷರತ್ತುಗಳನ್ನು ವಿಧಿಸಿದೆ. ಆ ಪೈಕಿ ಕೆಲವು ಷರತ್ತುಗಳು ರೈತರಿಗೆ ಶಾಕ್ ನೀಡಿವೆ. ಆ ಪೈಕಿ ಪ್ರಮುಖವಾದ ಕೆಲವು ಷರತ್ತುಗಳು ಹೀಗಿವೆ…

  • 50 ಸಾವಿರಕ್ಕಿಂತ ಹೆಚ್ಚು ಸಾಲ ಪಡೆದವರು. ಮುಂದಿನ ಒಂದು ವರ್ಷದೊಳಗೆ ಅಂದರೆ 2018ರ ಜೂನ್ ವೇಳೆಗೆ ಅಸಲು ಪಾವತಿಸಿದರೆ ಮಾತ್ರ 50 ಸಾವಿರ ಸಾಲ ಮನ್ನಾ ಆಗಲಿದೆ. ಇಲ್ಲವಾದರೆ ಸಾಲ ಮನ್ನಾ ಇಲ್ಲ.
  • ಪಶುಭಾಗ್ಯ ಸಾಲ, ಕೃಷಿಯೇತರ ಸಾಲ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಪಡೆದವರಿಗೆ ಈ ಸಾಲ ಮನ್ನಾ ಇಲ್ಲ.
  • ರೈತ ಸೈಲ ಪಡೆದ ನಂತರ ಮೃತಪಟ್ಟಿದ್ದರೆ, ಆತನ ವಾರಸುದಾರರು ಉಳಿದ ಸಾಲವನ್ನು ಪಾವತಿಸಿದರೆ ಮಾತ್ರ ಈ ಸಾಲ ಮನ್ನಾ ಸೌಲಭ್ಯ ಸಿಗಲಿದೆ.
  • ರೈತರು ಅಲ್ಪಾವಧಿಯ ಸಾಲದಲ್ಲಿ ಸುಸ್ತಿ ಬಾಕಿ ಇಟ್ಟುಕೊಂಡಿದ್ದರೆ ಅವರು ಈ ವರ್ಷ ಡಿಸೆಂಬರ್ 31ರ ಒಳಗಾಗಿ ಮರುಪಾವತಿ ಮಾಡಿದರೆ ಮಾತ್ರ ಈ ಸಾಲ ಮನ್ನಾ ಸೌಲಭ್ಯ ಸಿಗುತ್ತದೆ. ಅಂದಹಾಗೆ, ಅಸಲು ಹಾಗೂ ಬಡ್ಡಿ ಎರಡು ಸೇರಿ 50 ಸಾವಿರ ಮನ್ನಾ ಮಾಡಲಾಗುವುದು.
  • ಒಬ್ಬ ರೈತ ಒಂದಕ್ಕಿಂತ ಹೆಚ್ಚು ಸಹಕಾರಿ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೆ, ಆತ ಪಡೆದಿರುವ ಒಂದು ಬ್ಯಾಂಕಿನ ಸಾಲದಲ್ಲಿ ಮಾತ್ರ 50 ಸಾವಿರ ಮನ್ನಾ ಆಗಲಿದೆ.
  • ಸಾಲ ಮನ್ನಾ ಸೌಲಭ್ಯ ಪಡೆದವರಿಗೆ ಸಾಲ ಮನ್ನಾ ದಿನಾಂಕದ ಗಡುವಿನ ಬಳಿಕವೇ ಮತ್ತೆ ಸಾಲ ಕೊಡಲಾಗುವುದು.

Leave a Reply