ಯೋಗಿ ಆಡಳಿತದಲ್ಲಿ ಕ್ರೈಮ್ ಕಡಿಮೆಯಾಗಿದೆಯೇ? ಕಾನೂನು ಸುವ್ಯವಸ್ಥೆ ಕಥೆ ಏನಾಗಿದೆ?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯ ವಿಷಯವನ್ನೇ ಪ್ರಮುಖ ಅಸ್ತ್ರವಾಗಿಟ್ಟುಕೊಂಡು ಗೆದ್ದು ಅಧಿಕಾರಕ್ಕೆ ಬಂದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಮಾತನ್ನು ಉಳಿಸಿಕೊಂಡಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ.

ರಾಜ್ಯದಲ್ಲಿನ ಗೂಂಡಾಗಿರಿಯನ್ನು ಮಟ್ಟ ಹಾಕಿ ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುವ ವಾತಾವರಣ ಕಲ್ಪಿಸುವುದಾಗಿ ಬಿಜೆಪಿ ಚುನಾವಣೆಗೂ ಮುನ್ನ ಜನರಿಗೆ ಆಶ್ವಾಸನೆ ನೀಡಿತ್ತು. ಅದಕ್ಕೆ ತಕ್ಕಂತೆ ಅಧಿಕಾರಕ್ಕೆ ಬರುತ್ತಿದ್ದಂತೆ ಯೋಗಿ ಅವರ ಸರ್ಕಾರ ಪುಂಡರಿಂದ ಹೆಣ್ಣು ಮಕ್ಕಳ ರಕ್ಷಣೆಗೆ ಆಯಂಟಿ ರೋಮಿಯೋ ಸ್ಕ್ವಾಡ್ ರಚನೆ ಮಾಡಿ ಸದ್ದು ಮಾಡಿತ್ತು. ಅದಾದ ನಂತರ ಇತರೆ ವಿಚಾರಗಳಲ್ಲಿ ಯೋಗಿ ಸರ್ಕಾರ ಎಷ್ಟು ಪರಿಣಾಮಕಾರಿಯಾಗಿ ಅಪರಾಧ ಪ್ರಮಾಣ ಕಡಿಮೆಯಾಗಿದೆ ಹಾಗೂ ಕಾನೂನು ಸುವ್ಯವಸ್ಥೆ ನಿಜಕ್ಕೂ ಸುಧಾರಿಸಿದೆಯೇ ಎಂಬುದನ್ನು ನೋಡಿದರೆ, ನಮಗೆ ‘ಹೌದು’ ಎಂಬ ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪುಷ್ಠಿ ನೀಡುವ ಪ್ರಮುಖ ವಿದ್ಯಮಾನಗಳು ಹೀಗಿವೆ.

  • ಮೇ 02: ಯೋಗಿ ಆದಿತ್ಯನಾಥ್ ಅವರ ಸರ್ಕಾರ ರಚನೆಯಾಗುತ್ತಿದ್ದಂತೆ ಅವರೇ ಸ್ಥಾಪಿಸಿದ ಹಿಂದೂ ಯುವ ವಾಹಿನಿ ಎಂಬ ಸಂಘಟನೆ ಮಧ್ಯ ವಯಸ್ಕ ಯುವಕನೊಬ್ಬ ಬುಲಂದಹರ್ ಪ್ರದೇಶದಲ್ಲಿ ರಜಪೂತ್ ಮಹಿಳೆಯ ಇದ್ದ ಎಂಬ ಕಾರಣಕ್ಕೆ ಆತನನ್ನು ಹೊಡೆದು ಕೊಲ್ಲಲಾಯಿತು.
  • ಮೇ 09: ನಿವೃತ್ತ ಸೇನಾಧಿಕಾರಿಗಳ ಇಬ್ಬರು ಹೆಣ್ಣು ಮಕ್ಕಳನ್ನು ಪಾರಾ ಪ್ರದೇಶದ ರಾಮ್ ವಿಲಾಸ್ ಕಾಲೋನಿಯಲ್ಲಿ ಕುತ್ತಿಗೆ ಕೊಯ್ದು ಹತ್ಯೆ ಮಾಡಲಾಗಿದೆ.
  • ಮೇ 15: ಮೇಘ್ ಹಾಗೂ ವಿಕಾಸ್ ಅಗರ್ವಾಲ್ ಎಂಬ ಇಬ್ಬರು ಆಭರಣ ವ್ಯಾಪಾರಿಗಳನ್ನು ಮಥುರಾ ನಗರದ ಜನನಿಬಿಡ ಹೋಲಿ ಗೇಟ್ ಮಾರುಕಟ್ಟೆಯಲ್ಲಿಯೇ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು. ಈ ವೇಳೆ ಮತ್ತಿಬ್ಬರು ಗಾಯಗೊಂಡಿದ್ದರು. ಈ ಹತ್ಯೆಕೋರರು ಆಭರಣಗಳನ್ನು ದೋಚಿ ಪರಾರಿಯಾಗಿದ್ದರು.
  • ಮೇ 17: ಕರ್ನಾಟಕದ ಐಪಿಎಸ್ ಅಧಿಕಾರಿ ಅನುರಾಗ್ ತಿವಾರಿ ಅವರು ಮೀರಾ ಭಾಯ್ ಮಾರ್ಗ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸತ್ತಿದ್ದರು.
  • ಮೇ 21: ಮೀರತ್ ನಲ್ಲಿ ಒಬ್ಬ ವ್ಯಕ್ತಿ ಹಾಗೂ ಮಹಿಳೆಯನ್ನು ಮನೆಯಿಂದ ಹೊರಗೆ ಎಳೆದು ತಂದು ಆ ವ್ಯಕ್ತಿಯ ಮೇಲೆ ಗಂಭೀರವಾಗಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
  • ಮೇ 22: ಮಾವ್ ಪ್ರದೇಶದ ನಸೀರ್ ಪುರ ಎಂಬ ಹಳ್ಳಿಯಲ್ಲಿರುವ ಮಸೀದಿಯಲ್ಲಿ ಇಸ್ಲಾಂ ಧಾರ್ಮಿಕ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
  • ಜೂನ್ 01: ಉತ್ತರ ಪ್ರದೇಶದ ಬರೇಲಿಯ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ರಾಯೀಸ್ ಅಹ್ಮದ್ ಎಂಬುವರನ್ನು ಹಾಡಹಗಲಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಯಿತು.
  • ಜೂನ್ 23: 19 ವರ್ಷದ ಹುಡಿಗಿಯ ಮೇಲೆ ಅತ್ಯಾಚಾರ ಪ್ರಯತ್ನವಾದ ಸಂದರ್ಭದಲ್ಲಿ ಪ್ರತಿರೋಧ ತೋರಿದ ಕಾರಣಕ್ಕೆ ಆಕೆಯನ್ನು ಚಲಿಸುತ್ತಿದ್ದ ಟ್ಯಾಕ್ಸಿಯಿಂದ ಹೊರ ನೂಕಿ ಹತ್ಯೆ ಮಾಡಿದ ಘಟನೆ ಮದಿಯಾನ್ ಪ್ರದೇಶದಲ್ಲಿ ನಡೆದಿದೆ.

ಕಳೆದ 2 ತಿಂಗಳ ಅವಧಿಯಲ್ಲಿಯೇ ಉತ್ತರ ಪ್ರದೇಶದಲ್ಲಿ ಇಂತಹ ಗಂಭೀರ ಅಪರಾಧಗಳು ಹಾಡಹಗಲಲ್ಲೇ ಎಲ್ಲರ ಮುಂದೆ ನಡೆದಿರುವುದು ಯೋಗಿ ಆದಿತ್ಯನಾಥ ಅವರ ಸರ್ಕಾರದ ಕಾನೂನು ಸುವ್ಯವಸ್ಥೆ ಪಾಲನೆ ಮೇಲೆ ಅನುಮಾನ ಮೂಡುವಂತೆ ಮಾಡಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ‘ಮುಂಚೆಗಿಂತ ಈಗ ಅಪರಾಧಗಳು ಹೆಚ್ಚಾಗಿ ವರದಿಯಾಗುತ್ತಿವೆ. ಜನರು ತಮಗಾದ ಅನ್ಯಾಯವನ್ನು ಬಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ. ಹೀಗಾಗಿ ಅಪರಾಧಗಳ ಸಂಖ್ಯೆ ಹೆಚ್ಚಿದೆ ಎಂದು ಬಿಂಬಿತವಾಗುತ್ತಿದೆ. ಆರಂಭದಲ್ಲಿ ಇದು ಹೆಚ್ಚಾಗಿ ಕಂಡುಬಂದರೂ ಈ ಪ್ರಕರಣಗಳಲ್ಲಿ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಂತೆ ಎಲ್ಲವೂ ನಿಯಂತ್ರಣಕ್ಕೆ ಬಂದು ಅಪರಾಧ ಪ್ರಮಾಣ ಕಡಿಮೆಯಾಗಲಿದೆ’ ಎಂದಿದ್ದಾರೆ.

Leave a Reply